News

ಲಂಚ ಪಡೆಯುತ್ತಿದ್ದ ಕೃಷಿ ಅಧಿಕಾರಿ ಲೋಕಾಯುಕ್ತ ಬಲೆಗೆ: ₹2.5 ಲಕ್ಷಕ್ಕೆ ಬೇಡಿಕೆ!

08 April, 2023 9:51 AM IST By: Kalmesh T
Lokayukta trap Agriculture Officer who Demands for ₹ 2.5 lakh bribe!

ಕೃಷಿ ಉಪಕರಣಗಳ ಬಿಲ್‌ಮಂಜೂರು ಮಾಡುವ ಸಲುವಾಗಿ ₹2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಕೃಷಿ ಇಲಾಖೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಧಿಕಾರಿಯೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಕೃಷಿ ಭೂಮಿಯನ್ನು ವಿನ್ಯಾಸಗೊಳಿಸುವುದು ಏಕೆ ಮುಖ್ಯ? ಇಲ್ಲಿದೆ ಮಹತ್ವದ ಉತ್ತರ...

ಸರ್ಕಾರಿ ಕಚೇರಿಗಳಲ್ಲಿ ದಿನನಿತ್ಯ ಸಾಕಷ್ಟು ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಕೂಡ ಹಲವಾರು ವ್ಯವಹಾರ ಜರುಗುತ್ತವೆ.
ಕೃಷಿಗೆ ಸಂಬಂಧಿಸಿದ ಸಬ್ಸಿಡಿ, ಸಲಕರಣೆಗಳನ್ನು ಖಾಸಗಿಯವರಲ್ಲಿ ಖರೀದಿಸಿದ ನಂತರ ಅವುಗಳ ಬಿಲ್‌ಮಾಡುವ ಸಂದರ್ಭದಲ್ಲಿ ಸಾಕಷ್ಟು ಸರ್ಕಾರಿ ಅಧಿಕಾರಿಗಳು ಕಮಿಷನ್‌ಆಧಾರದ ಮೇಲೆ ಲಂಚ ಪಡೆಯುಉ ಸಾಕಷ್ಟು ಪ್ರಕರಣ ಇವೆ.

ಅದೆ ರೀತಿಯಲ್ಲೆ ಇದೀಗ ಗುಂಡ್ಲುಪೇಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ಕುಮಾರ್‌ ಅವರು ಇಲಾಖೆ ವತಿಯಿಂದ ಖರೀದಿಸಲಾಗಿದ್ದ ಕೃಷಿ ಉಪಕರಣಗಳ ಬಿಲ್‌ಮಾಡುವಾಗ 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಅಲ್ಲದೇ ಆ ಹಣವನ್ನು ಪಡೆಯುತ್ತಿದ್ದರು ಕೂಡ. ಇವರ ಈ ಕೆಲಸಕ್ಕೆ ಜೊತೆಯಾಗಿ ತಾಂತ್ರಿಕ ಕೃಷಿ ಅಧಿಕಾರಿ ಸತೀಶ್‌ಮತ್ತು ಹೊರಗುತ್ತಿಗೆಯ ಗ್ರೂಪ್‌ಡಿ ನೌಕರ ಅರುಣ್‌ ಎಂಬುವವರು ಕೂಡ ಕೈ ಜೋಡಿಸಿ ಸಿಕ್ಕಿ ಬಿದ್ದಿದ್ದಾರೆ.

ಕಳೆದ 1 ವರ್ಷದಲ್ಲಿ 1 ಲಕ್ಷ 60,000 ರೈತರಿಗೆ ಬಯೋಟೆಕ್-ಕಿಸಾನ್ ಯೋಜನೆ ಲಾಭ!

ಏನಿದು ಪ್ರಕರಣ?

ಪೂರೈಕೆ ಮಾಡಿದ್ದ ಕೃಷಿ ಉಪಕರಣಗಳ ಬಿಲ್‌ಮಂಜೂರು ಮಾಡುವುದಕ್ಕೆ ₹2.5 ಲಕ್ಷ ಪಡೆಯುತ್ತಿದ್ದ ಇಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ಕುಮಾರ್‌, ತಾಂತ್ರಿಕ ಕೃಷಿ ಅಧಿಕಾರಿ ಸತೀಶ್‌ಮತ್ತು ಹೊರಗುತ್ತಿಗೆಯ ಗ್ರೂಪ್‌ಡಿ ನೌಕರ ಅರುಣ್‌ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗುಂಡ್ಲುಪೇಟೆಯ ಎಸ್‌.ಆರ್‌.ಟ್ರೇಡರ್ಸ್‌ಮಾಲೀಕ ಕುಮಾರಸ್ವಾಮಿ ಅವರು ಲೋಕಾಯುಕ್ತ ಪೊಲೀಸರಿಗೆ ಮಾರ್ಚ್‌31ರಂದು ದೂರು ನೀಡಿದ್ದರು.

ಬಿಲ್‌ಮಂಜೂರು ಮಾಡುವುದಕ್ಕಾಗಿ ಕೃಷಿ ಅಧಿಕಾರಿ ಸತೀಶ್‌₹1.5 ಲಕ್ಷ, ಸಹಾಯಕ ನಿರ್ದೇಶಕ ಪ್ರವೀಣ್‌ಕುಮಾರ್‌ಅವರು ₹1 ಲಕ್ಷ ಲಂಚವನ್ನು ಕುಮಾರಸ್ವಾಮಿ ಬಳಿ ಕೇಳಿದ್ದರು.

Rain Alert: ರಾಜ್ಯದ ಈ  ಐದು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

ಬುಧವಾರ ಸಂಜೆ 4.10ರ ಸುಮಾರಿಗೆ ಇಬ್ಬರು ಕೇಳಿದ್ದ ಮೊತ್ತವನ್ನು ಡಿ ಗ್ರೂಪ್‌ನೌಕರ ಅರುಣ್‌ಕುಮಾರಸ್ವಾಮಿ ಅವರಿಂದ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರನ್ನೂ ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್‍ಪಿ ಮ್ಯಾಥ್ಯೂ ಥಾಮಸ್, ಇನ್‌ಸ್ಪೆಕ್ಟರ್‌ಗಳಾದ ಶಶಿಕುಮಾರ್, ರವಿಕುಮಾರ್, ಸಿಬ್ಬಂದಿ ಮಹಾಲಿಂಗಸ್ವಾಮಿ, ಮಹದೇವಸ್ವಾಮಿ, ಗುರುಪ್ರಸಾದ್, ಶ್ರೀನಿವಾಸ್, ಗೌತಮ್, ನಾಗೇಂದ್ರ, ಕೃಷ್ಣಗೌಡ, ಇಸಾಕ್, ಪುರುಷೋತ್ತಮ್, ಶಕುಂತಲ ಕಾರ್ಯಾಚರಣೆ ನಡೆಸಿದ್ದರು.