ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಪ್ರಮುಖ ಅಧಿಕಾರಿಯೊಬ್ಬರ ಮೇಲೆ ಲಂಚ ಪಡೆದ ಆರೋಪ ಕೇಳಿಬಂದಿದ್ದು, ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಗ್ಗಜಿಗ್ಗಾಟಕ್ಕೆ ಕಾರಣವಾಗಿದೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಬಿಡ್ಲ್ಯೂಎಸ್‌ಎಸ್‌ಬಿ ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್ ಅವರ ಮೇಲೆ ಲಂಚ ಪ್ರಕರಣದ ಆರೋಪ ಕೇಳಿಬಂದಿದ್ದು, ಶೋಧ ಕಾರ್ಯಾಚರಣೆಯ ವೇಳೆ, ಕೋಟ್ಯಾಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಮಾಡಾಳ್ ಪ್ರಶಾಂತ್ ಕಚೇರಿಯಲ್ಲಿ ಲೋಕಾಯುಕ್ತ ತಂಡವು ಗುರುವಾರ ಸಂಜೆ ದಾಳಿ ಮಾಡಲಾಗಿತ್ತು.
ಈ ಪ್ರಕರಣ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರವನ್ನು ಉಂಟು ಮಾಡಿದ್ದರೆ, ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಅಸ್ತ್ರವಾಗಿದೆ.
Gold Rate Today ಶುಕ್ರವಾರವೂ ಚಿನ್ನ ಖರೀದಿದಾರರಿಗೆ ನಿರಾಸೆ, ಚಿನ್ನದ ಬೆಲೆ ಹೆಚ್ಚಳ!
ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಮಾಡಾಳ್ ಕಚೇರಿಯಲ್ಲಿ ಕಂತೆ ಕಂತೆ ನೋಟುಗಳು ಕಂಡುಬಂದಿದ್ದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಲ್ಲದೇ ಕಂತೆ ಕಂತೆ ಹಣದ ವಿಡಿಯೊ ಹಾಗೂ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬೆಂಗಳೂರಿನ ಕ್ರೇಸೆಂಟ್ ರಸ್ತೆಯ ಮಾಡಾಳು ಪ್ರಶಾಂತ್ ಕಚೇರಿಯಲ್ಲಿ ಗುರವಾರ ಸಂಜೆ 6.30ರ ಸುಮಾರಿಗೆ ಪ್ರಶಾಂತ್
ಅವರು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ತಂಡ ದಾಳಿ ನಡೆಸಿತ್ತು ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಅವರ ಕಚೇರಿ ಹಾಗೂ
ಮನೆಯಲ್ಲಿ ಶೋಧ ಕಾರ್ಯಚರಣೆ ನಡೆಸಲಾಗಿದ್ದು, ಭಾರಿ ಮೊತ್ತದ ಹಣ ಪತ್ತೆ ಆಗಿರುವುದು ವರದಿ ಆಗಿದೆ.
ಶೋಧ ಕಾರ್ಯಾಚರಣೆಯ ವೇಳೆ ಬರೋಬ್ಬರಿ 6 ಕೋಟಿ ರೂಪಾಯಿಗೂ ಹೆಚ್ಚಿನ ನಗದು ಹಣ ಸಿಕ್ಕಿರುವುದಾಗಿ ವರದಿ ಆಗಿದೆ.
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಸಂಸ್ಥೆಗೆ 700 ಕೋಟಿ ರೂ. ಅನುದಾನ!
ಟೆಂಡರ್ ಕೊಡಿಸುವ ನಿಟ್ಟಿನಲ್ಲಿ ಗುತ್ತಿಗೆದಾರನಿಂದ ಬರೋಬ್ಬರಿ 80 ಲಕ್ಷಕ್ಕೂ ಹೆಚ್ಚು ಹಣ ನೀಡುವಂತೆ ಶಾಸಕ ಮಾಡಾಳ್
ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಹೇಳಿದ್ದು, ಮುಂಗಡವಾಗಿ 40 ಲಕ್ಷ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ ಎನ್ನಲಾಗಿದೆ.
Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಸರ್ಕಾರ!
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್!
ಚುನಾವಣೆಯ ಸಂದರ್ಭದಲ್ಲೇ ಅದೂ ಬಿಜೆಪಿ ಶಾಸಕರ ಪುತ್ರನ ಮೇಲೆ ಲಂಚ ಆರೋಪ ಬಂದಿರುವುದು ಬಿಜೆಪಿಯನ್ನು ತೀವ್ರ ಮುಜುಗುರಕ್ಕೆ ಸಿಲುಕಿಸಿದ್ದರೆ,
ಕಾಂಗ್ರೆಸ್ ಇದನ್ನು ಅಸ್ತ್ರವಾಗಿ ಬಳಸಿಕೊಂಡಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಶೇ 40 ಪರ್ಸೆಂಟ್ ಕಮೀಷನ್ ಎಂಬ ವಿಷಯವೂ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, “40 ಪ್ರಸೆಂಟ್ ಕಮೀಷನ್‌ಗೆ ದಾಖಲೆ ಕೊಡಿ ಎನ್ನುತ್ತಿದ್ದ
ಬಸವರಾಜ ಬೊಮ್ಮಾಯಿ ಅವರೇ ಇಂದು ಲೋಕಾಯುಕ್ತ ದಾಳಿಯಲ್ಲಿ ಕಮೀಷನ್ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ ?
ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ ? ಈಗ ಭ್ರಷ್ಟಾಚಾರಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡುವಿರಾ ?
ನಿಮ್ಮದು 40% ಸರ್ಕಾರ ಎನ್ನಲು ಇನ್ನೇನು ಬೇಕು” ಎಂದು ಪ್ರಶ್ನೆ ಮಾಡಿದೆ.