ಮೈಸೂರಿನಲ್ಲಿ ರೈತರಿಂದ ರೈತರಿಗಾಗಿ ಐದನೇ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿರಿ: Bad news: ಜನ ಸಾಮಾನ್ಯರಿಗೆ ಕಹಿ ಸುದ್ದಿ; ಮತ್ತೆ ಹಾಲಿನ ದರದಲ್ಲಿ ಹೆಚ್ಚಳ!
ಮೈಸೂರಿನಲ್ಲಿ ನವೆಂಬರ್ 11,12 ಮತ್ತು 13ರಂದು ಐದನೇ ಕಿಸಾನ್ ಸ್ವರಾಜ್ ಸಮ್ಮೇಳನ ನಡೆಯಲಿದೆ.
ರೈತರೇ ಸಮ್ಮೇಳನದ ಕೇಂದ್ರ ಬಿಂದುವಾಗಿರಲಿದ್ದು, ದೇಶದ ಸುಮಾರು 23 ರಾಜ್ಯಗಳಿಂದ ಎರಡು ಸಾವಿರಕ್ಕೂ ಹೆಚ್ಚು ರೈತರು ಸಮ್ಮೇಳನದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ!
ಸಮ್ಮೇಳದಲ್ಲಿ ಪ್ರಮುಖವಾಗಿ ಸುಸ್ಥಿರ ಕೃಷಿ, ವಾತಾವರಣ ಬದಲಾವಣೆಯಿಂದಾಗಿ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ಸ್ಥಳೀಯ ಬಿತ್ತನೆ ಬೀಜಗಳು, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ವಿಷಯಗಳು ಚರ್ಚೆ ಆಗಲಿದೆ.
ಸಮ್ಮೇಳನವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿದೆ.
Pm kisan, ಕಿಸಾನ್ ಪಿಂಚಣಿ ಯೋಜನೆ: 200 ರೂಪಾಯಿ ಹೂಡಿಕೆ ಮಾಡಿ 3 ಸಾವಿರ ಪಿಂಚಣಿ ಗಳಿಸಬಹುದು!
ಸ್ವಯಂಸೇವಕರು ಸಮ್ಮೇಳನದಲ್ಲಿ ಕಾರ್ಯ ನಿರ್ವಹಿಸುತ್ತಲೇ ದೇಶದ ಹಲವಾರು ಪರ್ಯಾಯ, ಸುಸ್ಥಿರ ಕೃಷಿ ಸಾಧಕರನ್ನು ಭೇಟಿ ಮಾಡುವ,
ಅವರೊಂದಿಗೆ ಒಡನಾಡುವ, ಕೃಷಿ ಕ್ಷೇತ್ರದ ಸವಾಲುಗಳು ಮತ್ತು ಸಾಧ್ಯತೆಯನ್ನ ಹತ್ತಿರದಿಂದ ಅರಿಯುವ ಅವಕಾಶವನ್ನೂ ಕಲ್ಪಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9900537434 ಸಂಪರ್ಕಿಸಬಹುದು.