ರಾಜ್ಯ ಸರ್ಕಾರವು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ಬದಲಾವಣೆ ಮಾಡಿ ಆದೇಶ ಮಾಡಿದೆ.
ನವೆಂಬರ್ 8ಕ್ಕೆ ವಿವಿಧೆಡೆ ಪೂರ್ಣ ಚಂದ್ರಗ್ರಹಣ, ವಿಶೇಷತೆ ಗೊತ್ತೆ ?
ಇನ್ನು ಮುಂದೆ ಮಂಡಳಿಯ ಕಡತ, ಮೊಹರು, ಪತ್ರ ವ್ಯವಹಾರದಲ್ಲಿ ಹೊಸ ಹೆಸರನ್ನೇ ಬಳಕೆ ಮಾಡುವಂತೆ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಎಂದು ಇದೀಗ ಹೆಸರು ಬದಲಾವಣೆ ಮಾಡಲಾಗಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ಬದಲಾವಣೆ ಮಾಡಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಸಹ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ನಿರ್ದೇಶಕರಾದ (ಪರೀಕ್ಷೆಗಳು) ಎಚ್. ಎನ್. ಗೋಪಾಲಕೃಷ್ಣ ಅವರು ಈ ಆದೇಶವನ್ನು ಮಾಡಿದ್ದಾರೆ.
ಮಗು ಜನಿಸಿದರೆ “ಪುರುಷ” ಉದ್ಯೋಗಿಗೂ ಸಿಗಲಿದೆ ವೇತನ ಸಹಿತ ರಜೆ!
ಆದೇಶದಲ್ಲೇನಿದೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿ ಎನ್ನುವ ಬದಲಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಎಂದು ಪ್ರಯೋಜಿಸಿರುವ ಬಗ್ಗೆ
ಆದೇಶದ ವಿವರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿ ಎನ್ನುವುದರ ಬದಲಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಎಂದು ಪ್ರಯೋಜಿಸಿರುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ-1ರ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಅಧಿಸೂಚನೆ
ಸಂಖ್ಯೆ 11/10/2022ರ ಅನ್ವಯ ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿ ಎಂಬ ಪದಗಳ ಬದಲಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಎಂದು ಬದಲಾಯಿಸಲಾಗಿರುತ್ತದೆ.
ಕೇಳುವವರೇ ಇಲ್ಲ ಕೋವ್ಯಾಕ್ಸಿನ್; 50 ಮಿಲಿಯನ್ ಕೋವ್ಯಾಕ್ಸಿನ್ ನಿಷ್ಕ್ರೀಯತೆಗೆ ತಯಾರಿ!
ಹೀಗಾಗಿ, ಇನ್ನು ಮುಂದೆ ಕಚೇರಿಯಿಂದ ಪತ್ರವ್ಯವಹರಿಸುವಾಗ ಮತ್ತು ಕಡತಗಳನ್ನು ಮಂಡಿಸುವಾಗ, ಮೊಹರು ಹಾಕುವಾಗ ಹಾಗೂ ಇತರೆ ಕಾರ್ಯ ನಿರ್ವಹಣೆಯ ಸಂದರ್ಭದಲ್ಲಿ ಕೆಳಗಿನ ವಿಳಾಸ ಬಳಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ವಿಳಾಸ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು 56003 ಎಂಬ ಹೆಸರಿನಲ್ಲಿ ವ್ಯವಹರಿಸಲು ನಿರ್ದೇಶನ ನೀಡಲಾಗಿದೆ.