News

Breaking: PSI ನೇಮಕಾತಿ.. ಮರು ಪರೀಕ್ಷೆಗೆ ಆದೇಶಿಸಿದ ಸರ್ಕಾರ

29 April, 2022 12:35 PM IST By: Maltesh
Home Minister Araga Jnanendra

ಈಡೀ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತಲ್ಲಣ ಸೃಷ್ಟಿಸಿರುವ ಪಿಎಸ್‌ಐ ನೇಮಕಾತಿ ದಿನದಿಂದ ದಿನಕ್ಕೆ ಅನೇಕ ರೋಚಕ ತಿರುವುಗಳನ್ನು ಪಡೆಯುತ್ತಿದೆ.  ಸದ್ಯದ ಮಾಹಿತಿ ಪ್ರಕಾರ ಪಿಎಸ್‌ಐ ನೇಮಕಾತಿ ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಹೌದು ಪಿಎಸ್‌ಐ ನೇಮಕಾತಿಯನ್ನು ಮರು ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.  ಸುದ್ದಿಗೋಷ್ಠಿ  ಆಯೋಜಿಸಿ ಮಾತನಾಡಿದ ಅವರು ಇನ್ನು ಮುಂದೆ ಹಣಕ್ಕಾಗಿ ಹುದ್ದೆಗಳು ಎಂಬುವ ವಿಚಾರ ಕಣ್ಮರೆಯಾಗಲಿದೆ. ಕಠಿಣ, ನಿಯಮ, ಕಾಯ್ದೆಗಳನ್ನ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ. ಕಳಂಕಿತರನ್ನು ಬಿಟ್ಟು ಇತರರಿಗೆ ಮರು ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

PMAGY: ಬುಡಕಟ್ಟು ಹಳ್ಳಿಗಳ ಸುಧಾರಣೆಗೆ ಗುರಿ

“ರೈತರಿಗೆ ಒಳ್ಳೆಯದಾಗುವುದಾದರೇ ನಾನು ಗಲ್ಲಿಗೇರಲು ಕೂಡ ಸಿದ್ದ” ಸಿಎಂ ಬೊಮ್ಮಾಯಿ!

ಕರ್ನಾಟಕದಲ್ಲಿ ನಡೆದಿರುವ ಈ ಪರೀಕ್ಷೆ ಹಗರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪಿಎಸ್‍ಐ ಪರೀಕ್ಷೆ ಹೆಸರಿನಲ್ಲಿ ಕೋಟಿ, ಕೋಟಿ ರೂ.ಗಳ ಹಗರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಿಜೆಪಿ, ಕಾಂಗ್ರೆಸ್ ಪ್ರಭಾವಿಗಳ ಆಪ್ತರು ಸೇರಿದಂತೆ ರಾಜಕೀಯವಾಗಿ ಪ್ರಬಲರಾಗಿರುವವರೇ ಇದರಲ್ಲಿ ಶಾಮೀಲಾಗಿರುವ ಅನುಮಾನಗಳು ಇವೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 2021ರಲ್ಲಿ ನಡೆದ ಲಿಖಿತ ಪರೀಕ್ಷೆಗಳಲ್ಲಿ ಅಕ್ರಮ ನಡದಿದೆ. ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ತನಿಖಾ ಇಲಾಖೆ ತನಿಖೆ ಮಾಡುತ್ತಿದೆ. ಇದುವರೆಗೂ ಅನೇಕರನ್ನು ಬಂಧಿಸಿದ್ದು,ತನಿಖೆ ಮುಂದುವರೆದಿದೆ. ಪ್ರಸ್ತುತ ನೇಮಕಾತಿ ಅಕ್ರಮ ಪ್ರಕರಣದಲ್ಲಿ 17 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ

ಕರ್ನಾಟಕದಲ್ಲಿ ಕೇಜ್ರಿವಾಲ್ ಅಲೆ! ಇಲ್ಲೂ ಸೃಷ್ಟಿಸಲಿದ್ದಾರಾ ಆಮ್ ಆದ್ಮಿ ಪಾರ್ಟಿಯ ನೆಲೆ ?

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಏಪ್ರಿಲ್ 20ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಅಭ್ಯರ್ಥಿಗಳಿಗೆ ಸೂಚಿಸಿತ್ತು. 545 ಅಭ್ಯರ್ಥಿಗಳ ಪೈಕಿ ಟಾಪ್ 50 ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಲಾಗಿದೆ.