News

ಕೇವಲ 1 ರೂಪಾಯಿ ಹೂಡಿಕೆ ಮಾಡಿ 2 ಲಕ್ಷ ಲಾಭ ಪಡೆಯಿರಿ!

02 November, 2022 4:49 PM IST By: Hitesh
insurance

ಕೇಂದ್ರ ಸರ್ಕಾರವು ಜೀವ ವಿಮಾ ರಕ್ಷಣೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಪರಿಚಯಿಸಿದೆ.

ದಕ್ಷಿಣ ಕೊರಿಯಾದಿಂದ ಉತ್ತರ ಕೊರಿಯಾ ಮೇಲೆ ಕ್ಷಿಪಣಿ ಉಡಾವಣೆ!

ಕೇಂದ್ರ ಸರ್ಕಾರವು ಕೇವಲ ಒಂದು ರೂಪಾಯಿಯಲ್ಲಿ 2 ಲಕ್ಷದ ಮೊತ್ತದ ವರೆಗೆ ವಿಮಾ ರಕ್ಷಣೆ ಪ್ರಯೋಜನವನ್ನು ಪರಿಚಯಿಸಿದೆ.  

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿಯಲ್ಲಿ ನೀವು ಕೇವಲ ಒಂದು ವರ್ಷದಲ್ಲಿ 12 ರಿಂದ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಹಣದುಬ್ಬರದ ಈ ಯುಗದಲ್ಲಿ, ಕೇವಲ ಒಂದು ರೂಪಾಯಿ ಇಷ್ಟೊಂದು ವಿಮಾ ಮೊತ್ತ ಸೌಲಭ್ಯ ಇರುವುದು ಅಚ್ಚರಿ ಮೂಡಿಸಿದರೂ, ಇದು ಸತ್ಯವಾಗಿದೆ.

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಸಾಧ್ಯತೆ: ಎಂಟು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್‌!

ಆದರೆ, ಕೇಂದ್ರ ಸರ್ಕಾರ ಅಂತಹದ್ದೊಂದು ಮಾದರಿಯ ಯೋಜನೆಯನ್ನು ಪರಿಚಯಿಸಿದೆ.

ನೀವು ಕೇವಲ 1 ರೂಪಾಯಿಯಲ್ಲಿ ನಿಮ್ಮ ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯಬಹುದು, ಇದರಿಂದ ನಿಮ್ಮ ಭವಿಷ್ಯ ಮತ್ತು ನಿಮ್ಮ ಕುಟುಂಬದ ಭವಿಷ್ಯವು ಸುರಕ್ಷಿತವಾಗಿರುತ್ತದೆ.

ಈ ವಿಮಾದ ಹೆಸರು ಪ್ರಧಾನ ಭದ್ರತಾ ವಿಮೆ. ಇದರಲ್ಲಿ ತಿಂಗಳಿಗೆ ಕೇವಲ 1 ರೂಪಾಯಿಯ ಪ್ರೀಮಿಯಂ ಪಾವತಿಯ

ಮೇಲೆ ರೂ 2 ಲಕ್ಷದ ಖಾತರಿಯ ವಿಮಾ ರಕ್ಷಣೆಯನ್ನು ಪಡೆಯಬಹುದಾಗಿದೆ.  

ಇದನ್ನೂ ಓದಿರಿ: TWITTER ದೂರುವುದಿದ್ದರೆ ದೂರಿ; ತಿಂಗಳಿಗೆ ಎಂಟು ಡಾಲರ್‌ ಕೊಡಿ ಎಂದ ಎಲಾನ್‌ ಮಸ್ಕ್‌!  

ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದವರಿಗೆ ಆರೋಗ್ಯ ವಿಮೆ ಸದಾ ಅವಶ್ಯವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ಈ ಕ್ರಮ ಕೈಗೊಂಡಿದ್ದಾರೆ. ಇದಲ್ಲದೇ ಕೇಂದ್ರ ಸರ್ಕಾರ ಬಡವರ ಹಿತದೃಷ್ಟಿಯಿಂದ ಇಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2015 ರಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗದವರಿಗಾಗಿ ಪ್ರಾರಂಭಿಸಿದರು.

ಈ ಯೋಜನೆಯ ಮುಖ್ಯ ಉದ್ದೇಶವೇ ಜೀವ ವಿಮೆಯ ಪ್ರಯೋಜನವನ್ನು ಒಂದು ರೂಪಾಯಿಗಿಂತ ಕಡಿಮೆ ಮೊತ್ತದಲ್ಲಿ ನೀಡುವುದಾಗಿದೆ.

PMSBY ಯೋಜನೆಯಲ್ಲಿ, ವಾರ್ಷಿಕವಾಗಿ ರೂ 12 ರೂಪಾಯಿ ಪ್ರೀಮಿಯಂ ಅನ್ನು ಪಾವತಿಸಬೇಕು, ಅಂದರೆ ಒಂದು ತಿಂಗಳಲ್ಲಿ 1 ರೂಪಾಯಿ ಮಾತ್ರ!

2 ಲಕ್ಷದ ವಿಮಾ ರಕ್ಷಣೆ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ, ವಿಮಾದಾರರು ಅಪಘಾತದಲ್ಲಿ ಮರಣಹೊಂದಿದರೆ

ಅಥವಾ ಸಂಪೂರ್ಣ ಅಂಗವಿಕಲರಾದರೆ, ಪರಿಸ್ಥಿತಿಯಲ್ಲಿ ವಿಕಲಚೇತನರು ಅಥವಾ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.

ಅದಲ್ಲದೇ ವಿಮಾದಾರರು ಭಾಗಶಃ ಅಂಗವಿಕರಾದರೆ, ಅವರಿಗೆ ಒಂದು ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.

PMSBY ವಿಮೆಯನ್ನು ಯಾರು ಪಡೆಯಬಹುದು 

18 ರಿಂದ 70 ವರ್ಷ ವಯಸ್ಸಿನ ಜನರು ವಿಮಾ ರಕ್ಷಣೆಯನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರುವುದು ಅವಶ್ಯವಾಗಿದೆ.   

PMSBYಯೋಜನೆ ಪಡೆಯುವುದು ಹೇಗೆ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ನೋಂದಾಯಿಸಲು, ಮೊದಲು ನೀವು PMSBYನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.  ಅರ್ಜಿ ಕಾಣಿಸಲಿದ್ದು, ನಂತರ ವಿನಂತಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕು.

ವಿಮೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು ಟೋಲ್-ಫ್ರೀ ಸಂಖ್ಯೆ 1800-180-1111/1800-110-001 ಸಂಪರ್ಕಿಸಬಹುದು.