News

UASD JOBS: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ; ನಾಳೆಯೇ ನೇರ ಸಂದರ್ಶನ.!

17 August, 2022 12:42 PM IST By: Kalmesh T
Jobs In University Of Agricultural Sciences Dharwad

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಆರಂಭವಾಗಿದ್ದು, ನಾಳೆ ಅಂದರೆ ಆಗಸ್ಟ್‌ 18ರಂದು ವಾಕ್ ಇನ್ ಇಂಟರ್ವ್ಯೂ ಮೂಲಕ ನೇರ ನೇಮಕಾತಿ ನಡೆಯಲಿದೆ.

ಇದನ್ನೂ ಓದಿರಿ: Postal Jobs: ಯುವಜನತೆಗೆ ಭರ್ಜರಿ ಸುದ್ದಿ: ಅಂಚೆ ಇಲಾಖೆಯಲ್ಲಿದೆ 1 ಲಕ್ಷ ಖಾಲಿ ಹುದ್ದೆ!

ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 18 ರಂದು ನಡೆಯುವ ವಾಕ್ ಇನ್ ಇಂಟರ್ವ್ಯೂ ನಲ್ಲಿ ಭಾಗವಹಿಸಬಹುದು.

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (University of Agricultural Sciences Dharwad)  ಸೀನಿಯರ್ ರಿಸರ್ಚ್ ಫೆಲೋ (Senior Research Fellow) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಒಂದು ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 18 ರಂದು ನಡೆಯುವ ವಾಕ್ ಇನ್ ಇಂಟರ್ವ್ಯೂ ನಲ್ಲಿ ಭಾಗಿಯಾಗಬಹುದಾಗಿದೆ.

ಯುವಜನತೆಗೆ ಉದ್ಯೋಗ ಮಾಡಲು ಇಲ್ಲಿದೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ 25 ಲಕ್ಷ ಸಾಲ..ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.

ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆ ಮಾಹಿತಿ        ಹುದ್ದೆ ವಿವರ

ವಿಶ್ವವಿದ್ಯಾಲಯದ ಹೆಸರು:    ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ

ಹುದ್ದೆ:      ಸೀನಿಯರ್ ರಿಸರ್ಚ್ ಫೆಲೋ

ಹುದ್ದೆಗಳ ಸಂಖ್ಯೆ:    1

ಕಾರ್ಯ ನಿರ್ವಹಣೆ ಸ್ಥಳ: ಧಾರವಾಡ

ವೇತನ:  31000 ರೂ ಪ್ರತಿ ತಿಂಗಳು

Aadhaar Card: ಇನ್ಮುಂದೆ ಆಧಾರ್‌ ಇಲ್ಲದೇ ಸಬ್ಸಿಡಿಗಳು ಇಲ್ಲ! ಕೇಂದ್ರ ಸರ್ಕಾರದ ಮಹತ್ವದ ಸುತ್ತೋಲೆ..

ಶೈಕ್ಷಣಿಕ ಅರ್ಹತೆ: ಯುಎಎಸ್ ಧಾರವಾಡ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಅಗ್ರಿಕಲ್ಚರ್ ಇಂಜಿನಿಯರಿಂಗ್, ಬ್ಯಾಚುಲರ್ ಪದವಿಯಲ್ಲಿ ಎಂಟೆಕ್ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯುಎಎಸ್ ಧಾರವಾಡ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಆಯ್ಕೆ ವಿಧಾನ: ನೇರ ಸಂದರ್ಶನ

ವಿಶೇಷ ಸೂಚನೆ : ಈ ಹುದ್ದೆಗೆ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು 100 ರೂ ಛಾಪಾ ಕಾಗದ ಮೇಲೆ ತಾವು ತಾತ್ಕಾಲಿಕ ಹುದ್ದೆಗೆ ಆಯ್ಕೆಯಾಗುತ್ತಿರುವುದಾಗಿ ನಿಗದಿತ ಅರ್ಜಿಯಲ್ಲಿ ಮುಚ್ಚಳಿಕೆ ಬರೆದುಕೊಡಬೇಕು.

 ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 03-08-2022

ವಾಕ್-ಇನ್ ದಿನಾಂಕ: 18-ಆಗಸ್ಟ್-2022 ಮಧ್ಯಾಹ್ನ 12. 30 ರಿಂದ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: http://www.uasd.edu/ 

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌..

ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.

ಪದವಿ ಮತ್ತು 10ನೇ ತರಗತಿ ಮಾರ್ಕ್ಸ್ ಕಾರ್ಡ್

ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.

ಜಾತಿ ಪ್ರಮಾಣ ಪತ್ರ

ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ

ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.