News

10ನೇ ತರಗತಿ ಪಾಸ್‌ ಆದವರಿಗೆ ಮೀನುಗಾರಿಕೆ ಇಲಾಖೆಯಲ್ಲಿ ಉದ್ಯೋಗ-15 ಸಾವಿರ ಸಂಬಳ

11 July, 2022 11:15 AM IST By: Maltesh
Job opportunity in Fisheries of Karnataka

ಪ್ರಧಾನ ಮಂತ್ರಿ ಮತ್ಮ ಸಂಪದ ಯೋಜನೆಯಡಿ ರಾಜ್ಯ ಯೋಜನಾ ಕೋಶಕ್ಕೆ ಉಪ ಯೋಜನಾ ವ್ಯವಸ್ಥಾಪಕರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು (ಉಡುಪಿ ಜಿಲ್ಲೆಗೆ) ಮತ್ತು ಮಲ್ಟಿ ಟಾಸ್ಟಿಂಗ್ ಸಿಬ್ಬಂದಿ (Multi Tasking Staff) ಹುದ್ದೆಗಳನ್ನು ಸಂಚಿತ ವೇತನದಲ್ಲಿ ಗುತ್ತಿಗೆ ಮೂಲಕ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ಪ್ರಧಾನ ಮಂತ್ರಿ ಮತ್ಮ ಸಂಪದ ಯೋಜನೆಯಡಿ , ರಾಜ್ಯ ಉಪ ಯೋಜನಾ ವ್ಯವಸ್ಥಾಪಕರು(01) ಮತ್ತು ಜಿಲ್ಲಾ ಯೋಜನಾ ವ್ಯವಸ್ಥಾಪಕರು (01) ಮತ್ತು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ (Multi Tasking Staf]01) ಹುದ್ದೆಗಳನ್ನು ಸಂಚಿತ ವೇತನದಲ್ಲಿ ಗುತ್ತಿಗೆ ಮೂಲಕ  ಇರುತ್ತದೆ

ಈ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದ ಅನುದಾನ ಲಭ್ಯತೆ ಮೇರೆ ಮುಂದುವರೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆಯ ಹೆಸರು: ಮೀನುಗಾರಿಗೆ ನಿರ್ದೇಶನಾಲಯ

ಹುದ್ದೆಗಳು: ರಾಜ್ಯ ಉಪ ಯೋಜನಾ ವ್ಯವಸ್ಥಾಪಕ, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹಾಗೂ Multy Tasking Staff

ಒಟ್ಟು ಎಷ್ಟು ಹುದ್ದೆಗಳಿವೆ : 3

ಕಾರ್ಯ ನಿರ್ವಹಣೆ ಸ್ಥಳ ಯಾವುದು: ಬೆಂಗಳೂರು

ವೇತನ ಶ್ರೇಣಿ: 15000- 55000 ರೂ ಮಾಸಿಕ

 

ಹುದ್ದೆ

ಹುದ್ದೆ ಸಂಖ್ಯೆ

ವಯೋಮಿತಿ

ವೇತನ

 

ರಾಜ್ಯ ಉಪ ಯೋಜನಾ ವ್ಯವಸ್ಥಾಪಕ

1

45 ವರ್ಷ

55000 ರೂ ಮಾಸಿಕ

ಜಿಲ್ಲಾ ಯೋಜನಾ ವ್ಯವಸ್ಥಾಪಕರು

1

35 ವರ್ಷ

45000 ರೂ ಮಾಸಿಕ

 

ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ

1

35 ವರ್ಷ

15000 ರೂ ಮಾಸಿಕ

ವಿದ್ಯಾರ್ಹತೆ ಮತ್ತು ಅನುಭವ

ರಾಜ್ಯ ಉಪ ಯೋಜನಾ ವ್ಯವಸ್ಥಾಪಕ : ಮೀನುಗಾರಿಕಾ ವಿಜ್ಞಾನದಲ್ಲಿ ಸ್ನಾತಕೋತ್ತರ / ಸಾಗರ ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ ಮೀನುಗಾರಿಕೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.

ಅನುಭವ: 5 ವರ್ಷ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಕೆಲಸ ಮಾಡಿದ ಅನುಭವ

ಜಿಲ್ಲಾ ಯೋಜನಾ ವ್ಯವಸ್ಥಾಪಕರು: ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ/ಎಂ.ಎಸ್ಸಿ ಪ್ರಾಣಿಶಾಸ್ತ್ರ/ ಜೀವಶಾಸ್ತ್ರ/ಮೀನುಗಾರಿಕೆ ಅರ್ಥಶಾಸ್ತ್ರ/ಕೈಗಾರಿಕಾ ಮೀನುಗಾರಿಕೆಯಲ್ಲಿ ಸ್ನಾತಕೋತ್ತರ/ಮೀನುಗಾರಿಕೆ ವ್ಯವಹಾರ ನಿರ್ವಹಣೆ  ಹಾಗೂ 3 ವರ್ಷಗಳ ಕಾಲ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು

ಇದನ್ನೂ ಓದಿ: ಕೋಳಿ ಸಾಕಣೆಗೆ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು..?

ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ: 10ನೇ ತರಗತಿ ಪಾಸ್‌ ಆಗಿರಬೇಕು

ಆಯ್ಕೆ ಪ್ರಕ್ರಿಯೆ:

ಸಂದರ್ಶನ ಮತ್ತು ನೇಮಕಾತಿ  ಪರೀಕ್ಷೆ

ಮಹತ್ವದ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ 20 ಜೂನ್​ 2022

ಕೊನೆಯ ದಿನಾಂಕ: 30 ಜುಲೈ 2022

ಅಧಿಕೃತ ವೆಬ್‌ಸೈಟ್: fisheries.karnataka.gov.in

ಅರ್ಜಿ ಸಲ್ಲಿಕೆ

ಆಫ್​ಲೈನ್​ (offline)

ಅರ್ಜಿ ಶುಲ್ಕ : ವಿನಾಯಿತಿ ನೀಡಲಾಗಿದೆ