ಭಾರತ ಇದೇ ಮೊದಲ ಬಾರಿಗೆ 400 ಬಿಲಿಯನ್ Dollar ಸರಕು ರಫ್ತಿನ Goods Exports ಗುರಿಯನ್ನು March 23ರಂದು ನಿಗದಿತ ವೇಳಾಪಟ್ಟಿಗಿಂತ 9 ದಿನ ಮುಂಚಿತವಾಗಿ ತಲುಪಿದ ಸಾಧನೆ ಮಾಡಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ Tweet ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಯಶಸ್ಸಿಗೆ ನೆರವಾದ ರೈತರು, ನೇಕಾರರು, MSMES, ಉತ್ಪಾದಕರು, ರಫ್ತುದಾರರನ್ನು ಅಭಿನಂದಿಸಿದ್ದಾರೆ.
“ಭಾರತವು ಸರಕು ರಫ್ತಿಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿಕೊಂಡಿತ್ತು ಹಾಗೂ ಇದೇ ಮೊದಲ ಬಾರಿಗೆ ಈ ಗುರಿ ತಲುಪಿದೆ. ಈ ಯಶಸ್ಸಿಗೆ ಕಾರಣೀಕರ್ತರಾದ ರೈತರು, ನೇಕಾರರು, ಎಂಎಸ್ಎಂಇಎಸ್, ಉತ್ಪಾದಕರು, ರಫ್ತುದಾರರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಆತ್ಮನಿರ್ಭರ ಭಾರತ ಪ್ರಯಾಣದಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ” ಎಂದು ಪ್ರಧಾನಿ Narendra Modi ಬುಧವಾರ (ಮಾ.23) ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿರಿ:
ರೈತರ ಭೂಮಿ ಸ್ವಾಧೀನ ವೇಳೆ 4 ಪಟ್ಟು ಪರಿಹಾರ!
ಕನ್ನಡದ ನೆಲಕ್ಕಾಗಿ ಒಂದಾದ ಕಲಿಗಳು! ಮೇಕೆದಾಟುವಿಗಾಗಿ ತೊಡೆತಟ್ಟಿದ ನಾಯಕರು
ಏಷ್ಯಾದ Asia ಮೂರನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತ 2022ನೇ ಹಣಕಾಸು ಸಾಲಿಗೆ ಈ ಮಹತ್ವಾಕಾಂಕ್ಷೆಯ ರಫ್ತಿನ ಗುರಿಯನ್ನು ನಿಗದಿಪಡಿಸಿತ್ತು. April-December ಅವಧಿಯಲ್ಲಿ 300 Billion Doller ರಫ್ತು ವಹಿವಾಟು ನಡೆದಿತ್ತು. 2021-22ನೇ ಹಣಕಾಸು ಸಾಲಿನಲ್ಲಿ ರಫ್ತು ವಹಿವಾಟಿನಲ್ಲಿ ಶೇ.37ರಷ್ಟು ಹೆಚ್ಚಳ ಕಂಡುಬಂದಿದ್ದು, 400 ಬಿಲಿಯನ್ ಡಾಲರ್ ರಫ್ತು ನಡೆಸಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿದೆ. ಅಲ್ಲದೆ, ಈ ರಫ್ತು ವಹಿವಾಟು ಭಾರತದ ಪಾಲಿಗೆ ಹೊಸ ಮೈಲಿಗಲ್ಲಾಗಿದ್ದು, ಬೆಳವಣಿಗೆ ಹೊಂದುತ್ತಿರೋ ಆರ್ಥಿಕತೆಗೆ ಕನ್ನಡಿ ಹಿಡಿದಿದೆ.
ಪ್ರಧಾನಿ ನರೇಂದ್ರ ಮೋದಿ Tweet ಜೊತೆಗೆ ಕೆಲವು ಗ್ರಾಫಿಕ್ಸ್ ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ಒಂದು ಗ್ರಾಫಿಕ್ಸ್ ಪ್ರಕಾರ ಭಾರತ ಇದೇ ಮೊದಲ ಬಾರಿಗೆ 400 ಬಿಲಿಯನ್ ಡಾಲರ್ ರಫ್ತಿನ ಗುರಿಯನ್ನು ತಲುಪಿದೆ ಎಂಬ ಮಾಹಿತಿಯಿದೆ. ಇದರ ಜೊತೆಗೆ ಭಾರತ ತಲುಪಿರೋ ಹಾದಿಯನ್ನು ಅವಲೋಕಿಸಿದರೆ, ಪ್ರತಿ ತಿಂಗಳು ಸರಾಸರಿ 33 ಬಿಲಿಯನ್ ಡಾಲರ್, ಪ್ರತಿದಿನ 1ಬಿಲಿಯನ್ ಡಾಲರ್ ಹಾಗೂ ಪ್ರತಿ ಗಂಟೆಗೆ 46 ಮಿಲಿಯನ್ ಡಾಲರ್ ರಫ್ತು ವಹಿವಾಟು ನಡೆದಿದೆ ಎಂಬ ಮಾಹಿತಿಯಿದೆ.
ಇನ್ನಷ್ಟು ಓದಿರಿ:
ನಿರುದ್ಯೋಗಿಗಳಿಗೆ ಇರೋ ಸರ್ಕಾರದ ಜನಪ್ರಿಯ ಸ್ಕೀಂಗಳು ಯಾವು.. ಇಲ್ಲಿದೆ ಪೂರ್ಣ ಮಾಹಿತಿ..
ಹಾಗೆಯೇ ಇನ್ನೊಂದು ಗ್ರಾಫಿಕ್ಸ್ ನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಉದ್ಯಮಿಗಳೊಂದಿಗೆ ಆತ್ಮೀಯ ಸಮಾಲೋಚನೆ ನಡೆಸೋ ಸರ್ಕಾರದ ಕ್ರಮ, ರಫ್ತುದಾರರೊಂದಿಗೆ ಸರ್ಕಾರ ಉತ್ತಮ ಸಂಪರ್ಕವಿಟ್ಟುಕೊಳ್ಳುವ ಮೂಲಕ ಸಮಸ್ಯೆಗಳ ಶೀಘ್ರ ಇತ್ಯರ್ಥ ಹಾಗೂ ರಫ್ತು ಉತ್ತೇಜನ ಮಂಡಳಿ, ಕೈಗಾರಿಕಾ ಸಮಿತಿಗಳು ಹಾಗೂ ಇತರ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂಬ ಮಾಹಿತಿಯಿದೆ.
2021-22ನೇ ಹಣಕಾಸು ಸಾಲಿನಲ್ಲಿ ಭಾರತ ಸರಕು ರಫ್ತಿನ ಗುರಿ ತಲುಪಲಿದೆ ಎಂಬ ಬಗ್ಗೆ ಈ ಹಿಂದೆಯೇ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ Union Commerce and Industry Minister ಪಿಯೂಷ್ ಗೋಯಾಲ್ Piyush Goyal ಸುಳಿವು ನೀಡಿದ್ದರು. ಮಾ.14ರ ತನಕ ಭಾರತದ ಸರಕು ರಫ್ತು 390 ಬಿಲಿಯನ್ ಡಾಲರ್ ತಲುಪಿದೆ. ಪ್ರಸಕ್ತ ಹಣಕಾಸು ಸಾಲಿನ ಕೊನೆಯ ದಿನವಾದ ಮಾ.31ರೊಳಗೆ ಭಾರತ ಖಂಡಿತವಾಗಿಯೂ 400 ಬಿಲಿಯನ್ ಡಾಲರ್ ಗುರಿಯನ್ನು ಮೀರಲಿದೆ ಎಂದು ಎಸಿಎಂಎ (ACMA) ಕೆಲವು ದಿನಗಳ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವಾಗ ಗೋಯಲ್ ತಿಳಿಸಿದ್ದರು.
ಮತ್ತಷ್ಟು ಓದಿರಿ: