News

ಸಿತ್ರಾಂಗ್‌ ಚಂಡಮಾರುತ ಪ್ರಭಾವ: ಅಕ್ಕಿ ಬೆಲೆ ಏರಿಕೆ!

26 October, 2022 11:54 AM IST By: KJ Staff
Cyclone

ಸಿತ್ರಾಂಗ್‌ ಚಂಡಮಾರುತದಿಂದ ಅಕ್ಕಿ ಬೆಳೆಯ ಮೇಲೆ ಪರಿಣಾಮ ಬೀರುವ ಆತಂಕ ಇದೀಗ ಎದುರಾಗಿದೆ.

ಇದನ್ನೂ ಓದಿರಿ: ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! 

ಸಿತ್ರಾಂಗ್‌ ಚಂಡಮಾರುತದ ಹಿನ್ನೆಲೆಯಲ್ಲಿ ಅಕ್ಕಿ ಬೆಳೆಯ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.

ಸಿತ್ರಾಂಗ್ ಚಂಡಮಾರುತದಿಂದ ಬೆಳೆ ಹಾನಿ ಉಂಟಾಗಬಹುದು ಎನ್ನುವ ಆತಂಕದಿಂದಾಗಿ ಅಕ್ಕಿ ಕೊಯ್ಲು ನಡೆಯುತ್ತಿರುವ ಪಶ್ವಿಮ ಬಂಗಾಳದಲ್ಲಿ ಕಳೆದ ಐದು ದಿನಗಳಲ್ಲಿ ಅಕ್ಕಿ ಬೆಲೆ ಸುಮಾರು 5% ರಷ್ಟು ಏರಿಕೆಯಾಗಿದೆ.

10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

ಅದ್ಯಾಗೂ ತಜ್ಞರ ಪ್ರಕಾರ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಿಂದ ಹೊಸ ಬೆಳೆ ಬರಲಾರಂಭಿಸಿದರೆ, ಮುಂದಿನ ಹದಿನೈದು ದಿನಗಳಲ್ಲಿ ಬೆಲೆಗಳು 10% ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.  

ಸಿತ್ರಾಂಗ್‌ ಚಂಡಮಾರುತದಿಂದಾಗಿ ಭಾರತದ ಈಶಾನ್ಯ ಭಾಗ ಸೇರಿದಂತೆ ಭಾರತದ ಕರಾವಳಿ ಪ್ರದೇಶದ ಹಲವು ಭಾಗಗಳಲ್ಲಿ ಹಾನಿಯಾಗಿದೆ.

ಅಲ್ಲದೇ ಚಂಡಮಾರುತದಿಂದಾಗಿ ಕೆಲವು ಭಾಗಗಳಲ್ಲಿ ಭೂಕುಸಿತವಾಗಿದೆ. ಇದು ಕರಾವಳಿ ಪ್ರದೇಶದಲ್ಲಿನ ಜನ ಸಂಕಷ್ಟ ಎದುರಿಸುವಂತಾಗಿದೆ.   

ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ? 

sitrang cyclone

ಸಿತ್ರಾಂಗ್ ಚಂಡಮಾರುತದಿಂದಾಗಿ ಭೂಕುಸಿತವಾಗಿರುವುದರೊಂದಿಗೆ ಅಸ್ಸಾಂನಲ್ಲಿ ಭಾರೀ ಮಳೆ ಆಗಿದೆ.

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಿತ್ರಾಂಗ್ ಚಂಡಮಾರುತದಿಂದಾಗಿ ಭತ್ತದ ಬೆಳೆಗಳ ಮೇಲೆ ಹಾನಿಯಾಗುವ ಸಾಧ್ಯತೆ ಇದೆ ಎನ್ನುವ ಆತಂಕ ಸೃಷ್ಟಿಯಾಗಿದೆ.  

ಇದೇ ಕಾರಣಕ್ಕಾಗಿ ಅಕ್ಕಿ ಬೆಲೆಗಳು 5% ರಷ್ಟು ಹೆಚ್ಚಾಗಿದೆ. ಆದರೆ ಚಂಡಮಾರುತವು ಬೆಳೆಯನ್ನು ಹೆಚ್ಚು ಹಾನಿಗೊಳಿಸಲಿಲ್ಲ  ಎನ್ನಲಾಗಿದೆ. ಆದರೆ, ದೇಶದ ವಿವಿಧ ಭಾಗಗಳಿಂದ ಹೊಸ ಬೆಳೆ ಬರದ ಹೊರತು ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಇದೆ.

ಕೃಷಿ ಸಚಿವಾಲಯವು ಬಿಡುಗಡೆ ಮಾಡಿದ ಉತ್ಪಾದನೆಯ ಮೊದಲ ಮುಂಗಡ ಅಂದಾಜಿನಂತೆ, ಈ ವರ್ಷ, ಭಾರತದಲ್ಲಿ ಅಕ್ಕಿ ಉತ್ಪಾದನೆಯು 2021 ರಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ.

ಪ್ರಸಕ್ತ ಋತುವಿನಲ್ಲಿ 104.99 ಮಿಲಿಯನ್ ಟನ್‌ಗಳಷ್ಟು ಖಾರಿಫ್ ಅಕ್ಕಿ ಉತ್ಪಾದನೆಯನ್ನು ನಿಗದಿಪಡಿಸಿದೆ, ಇದು 6% ಗಿಂತ ಕಡಿಮೆಯಾಗಿದೆ.