ತೆಲಂಗಾಣದ ರೈತರಿಂದ ಅಕ್ಕಿ ಖರೀದಿ ಮಾಡಬೇಕು ಹಾಗೂ ಹೊಸ ಕೃಷಿ ನೀತಿಯನ್ನು ರೂಪಿಸಬೇಕು. ಸರ್ಕಾರಗಳನ್ನು ಉರುಳಿಸುವ ಶಕ್ತಿ ಹೊಂದಿರುವ ರೈತರ ಭಾವನೆಗಳ ಜೊತೆ ಆಟವಾಡಬೇಡಿ. ರೈತರು ಭಿಕ್ಷುಕರಲ್ಲ. ಇದಾಗಿಯೂ ನೀವು “ರೈತರೊಂದಿಗೆ ಚೆಲ್ಲಾಟವಾಡಿದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ” ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K. Chandrasekhar Rao) ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿರಿ:
UIDAI ನೇಮಕಾತಿ 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಉದ್ಯೋಗ
ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಸಾಧನೆ!- ಸಚಿವ ಕೆ.ಎಸ್.ಈಶ್ವರಪ್ಪ
ಕೇಂದ್ರ ಸರ್ಕಾರವು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೆಲವು ತಿಂಗಳಲ್ಲಿಯೇ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೃಷಿಗೆ ಸಂಬಂಧಿಸಿದಂತೆ ಹೊಸ ಹೋರಾಟ ಆರಂಭಿಸಿದ್ದಾರೆ. ತಮ್ಮ ರಾಜ್ಯದ ರೈತರಿಂದ ಅಕ್ಕಿಯನ್ನು ಖರೀದಿ ಮಾಡುವುದಕ್ಕೆ ಸಂಬಂಧಿಸಿದ ವಿವಾದದ ಕುರಿತು ಟಿಆರ್‌ಎಸ್ (TRS) ಸದಸ್ಯರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹೆಂಡತಿಯ ಹೆಸರಲ್ಲಿ ಈ ಅಕೌಂಟ್ ತೆರೆಯಿರಿ..ತಿಂಗಳಿಗೆ 44,793 ರೂ. ಆದಾಯ ಪಡೆಯಿರಿ
50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
"ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ”
"ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ. ಪ್ರಧಾನಿ ಮತ್ತು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೈಮುಗಿದು ಕೇಳುತ್ತೇನೆ, ದಯವಿಟ್ಟು ನಮ್ಮ ಆಹಾರ ಧಾನ್ಯಗಳನ್ನು ಖರೀದಿಸಿ. ನಿಮಗೆ 24 ಗಂಟೆಗಳನ್ನು ನೀಡುತ್ತೇನೆ. ಇದರ ಬಳಿಕ ನಮ್ಮ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ" ಎಂದು ಕೆಸಿಆರ್ ಗುಡುಗಿದ್ದಾರೆ.
ರಾಜ್ಯದಿಂದ 15 ಲಕ್ಷ ಟನ್ ಕುಸಬಲಕ್ಕಿ (Parboiled) ಖರೀದಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಸಿಎಂ ಕೆಸಿಆರ್ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TSR) ಸದಸ್ಯರು ಸೋಮವಾರ ಒಂದು ದಿನದ ಧರಣಿ ನಡೆಸುತ್ತಿದ್ದಾರೆ.
ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ
POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?
ಪ್ರಸಕ್ತ ವರ್ಷದ ಭತ್ತದ ಬೆಳೆಯನ್ನು ಖರೀದಿಸಲು ತೆಲಂಗಾಣ ಮಾಡಿಕೊಂಡ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಆರೋಪಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿತ್ತು. ಧರಣಿಗೂ ಮುನ್ನ ಟಿಆರ್‌ಎಸ್ ಸದಸ್ಯರು 'ಒಂದು ದೇಶ- ಒಂದು ಖರೀದಿ ನೀತಿ' ಮತ್ತು 'ರೈತರ ಹಿತಾಸಕ್ತಿಗಳನ್ನು ಕಾಪಾಡಿ' ಎಂಬ ಘೋಷಣೆಗಳು ಇರುವ ಫಲಕಗಳನ್ನು ತೆಲಂಗಾಣ ಭವನದ ಸುತ್ತಲೂ ಅಂಟಿಸಿದ್ದರು. ಆರೋಗ್ಯ ತಪಾಸಣೆಗಾಗಿ ಕಳೆದ ಹತ್ತು ದಿನಗಳಿಂದಲೂ ರಾಜಧಾನಿ ದಿಲ್ಲಿಯಲ್ಲಿರುವ ಕೆಸಿಆರ್, ಈ ಪ್ರತಿಭಟನೆಯ ಸಿದ್ಧತೆಗಳನ್ನು ಪರಾಮರ್ಶಿಸಿದ್ದರು.