News

human animal conflict: ರೈತರಿಗೆ ಆನೆಗಳಿಂದ ಉಂಟಾಗುತ್ತಿರುವ ಹಾವಳಿ ತಡೆಗಟ್ಟಲು ಇಲ್ಲಿದೆ ಅದ್ಬುತ ಯೋಜನೆ!

14 February, 2023 2:05 PM IST By: Kalmesh T
human animal conflict

ಕಾಡಾನೆಗಳ ಹಾವಳಿ ತಪ್ಪಿಸಿ, ರೈತರು ಬೆಳೆದ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ‌ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಹೊಸ ಮಾಸ್ಟರ್‌ ಪ್ಲ್ಯಾನ್‌ವೊಂದನ್ನ ಮಾಡಿದೆ. ಇಲ್ಲಿದೆ ಈ ಕುರಿತಾದ ಸ್ಪೆಷಲ್‌ ಸ್ಟೋರಿ “ಪ್ರಾಜೆಕ್ಟ್ RE-HAB”.

ಕೃಷಿ ಭೂಮಿಯಲ್ಲಿ ಹಾವುಗಳ ನಿರ್ವಹಣೆ ಮತ್ತು ಮುಂಜಾಗ್ರತೆ ಕ್ರಮಗಳು

ಮಾನವ ಪ್ರಾಣಿ ಸಂಘರ್ಷ ಇಂದು ನಿನ್ನೆಯದಲ್ಲ. ಈಗಾಗಲೇ ಸಂಘರ್ಷಕ್ಕೆ ಸಾಕಷ್ಟು ಪ್ರಾಣಿಗಳು ಮತ್ತು ಮನುಷ್ಯರು  ಬಲಿಯಾಗಿದ್ದಾರೆ.

ಒಂದೆಡೆ ಪ್ರಾಣಿಗಳು ದಾಳಿ ಮಾಡುತ್ತವೆ ಎನ್ನುವ ತಕರಾರಿದ್ದರೆ ಇನ್ನೊಂದೆಡೆ ಅಭಿವೃದ್ದಿ ನೆಪದಲ್ಲಿ ಕಾಡಿನ ಅತಿಕ್ರಮಣ ಮಾಡಿಕೊಂಡು ಪ್ರಾಣಿಗಳು ಆಹಾರ ಹುಡುಕಿ ನಾಡಿಗೆ ಬರುವಂತೆ ಮಾಡಿದ್ದು ವಿಪರ್ಯಾಸವೇ ಸರಿ.

ಹೀಗಿರುವಾಗ ಕಾಡಾನೆಗಳ ಹಾವಳಿ ತಪ್ಪಿಸಿ, ರೈತರು ಬೆಳೆದ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ‌ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಹೊಸ ಮಾಸ್ಟರ್‌ ಪ್ಲ್ಯಾನ್‌ವೊಂದನ್ನ ಮಾಡಿದೆ. ಇಲ್ಲಿದೆ ಈ ಕುರಿತಾದ ಸ್ಪೆಷಲ್‌ ಸ್ಟೋರಿ “ಪ್ರಾಜೆಕ್ಟ್ RE-HAB”.

Turkey Farming: ಇಲ್ಲಿದೆ ಲಾಭದಾಯಕ “ಟರ್ಕಿ ಕೋಳಿ ಸಾಕಾಣಿಕೆ” ಕುರಿತಾದ ಮಾಹಿತಿ

ಕಳೆದ ಕೆಲ ವರ್ಷಗಳಿಂದ ಮಾನವ-ಪ್ರಾಣಿ ಸಂಘರ್ಷಗಳ ಸಂಖ್ಯೆ ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸಿದರೂ ಸಂಪೂರ್ಣ ಯಶಸ್ವಿಯಾಗಿರಲಿಲ್ಲ. ಇದರಿಂದ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು.

ಕೆಲ ಜನರು ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಇದೀಗ ಆನೆಗಳ ದಾಳಿಯಿಂದ ರೈತರನ್ನ ಮತ್ತು ಅವರ ಬೆಳೆಗಳನ್ನು ರಕ್ಷಿಸಲು ಹೊಸ ಪ್ರಯೋಗ ಒಂದನ್ನು ಮಾಡಲಾಗುತ್ತಿದೆ. ಇದು ರೈತರಿಗೆ ಬಹುದೊಡ್ಡ ಸಮಾಧಾನ ನೀಡಲಿದೆ.

 ಹೌದು, ಆನೆಗಳ ಹಾವಳಿಯಿಂದ ರೈತರನ್ನು ಮತ್ತು ಅವರು ಬೆಳೆದ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇದೀಗ ಹೊಸ ಪ್ರಯೋಗವೊಂದಕ್ಕೆ ಸರ್ಕಾರ ಮುಂದಾಗಿದೆ.   ಈ ಪ್ರಯೋಗ ಯಶಸ್ವಿಯಾದರೆ ಬಹುಪಾಲು ರೈತರಿಗೆ ಆನೆಗಳ ಹಾವಳಿಯಿಂದ ಮುಕ್ತಿ ದೊರೆಯಲಿದೆ.

ಜೆಲ್ಲಿ ಮೀನು : ಅತ್ಯಂತ ಕುತೂಹಲ ಸೃಷ್ಟಿಸಿದ ಈ ಮೀನಿನ ಬಗ್ಗೆ ಇಲ್ಲಿದೆ ಮಾಹಿತಿ…

ಕಾಡಾನೆಗಳ ಹಾವಳಿ ತಪ್ಪಿಸಲು ಪ್ರಾಜೆಕ್ಟ್ RE-HAB ಯೋಜನೆ!

“ಪ್ರಾಜೆಕ್ಟ್ RE-HAB” ಅಂದರೆ Reducing Human Attacks using Honey Bees ಈ ಯೋಜನೆಯಲ್ಲಿ ಜೇನುನೊಣಗಳನ್ನು ಬಳಸಿಕೊಂಡು ಆನೆಗಳು ಮಾನವ ವಸತಿ ವಲಯದಲ್ಲಿ ಮಾಡುತ್ತಿರುವ ದಾಳಿಯನ್ನು ಕಡಿಮೆ ಮಾಡುವುದು.

ಆನೆಗಳು ಕಾಡಿನಿಂದ ನಾಡಿನೆಡೆಗೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇರಿಸುವುದು. ನಂತರ ಅವುಗಳನ್ನ ತಂತಿಗಳ ಮೂಲಕ ಪರಸ್ಪರ ಕಟ್ಟಲಾಗುತ್ತದೆ.

ಆನೆಗಳು ಹೊಲಗಳಿಗೆ ನುಗ್ಗುವ ವೇಳೆ ಜೇನು ಪೆಟ್ಟಿಗೆಗೆ ಅಥವಾ ಆ ತಂತಿಗೆ ಅವು ತಾಗಿದರೆ ಎಲ್ಲ ಜೇನು ಪೆಟ್ಟಿಗೆಗಳು ಏಕಕಾಲಕ್ಕೆ ಅಲುಗಾಡುತ್ತವೆ.

ಇದರಿಂದ ವಿಚಲಿತಗೊಂಡ ಜೇನು ನೊಣಗಳು ಗೂಡಿನಿಂದ ಎದ್ದು ಗುಂಪಾಗಿ ಗುಂಯ್‌ಗುಡಲು ಆರಂಭಿಸುತ್ತವೆ. ಈ ಸದ್ದು ಆನೆಗಳಿಗೆ ಕಿರಿಕಿರಿ ಉಂಟು ಮಾಡುವುದರಿಂದ ಮತ್ತೆ ಆನೆಗಳು ಈ ಕಡೆ ಬರಲಾರವು.

ಮುಂದೆಯೂ ಕೂಡ ಇಂತಹ ಪೆಟ್ಟಿಗೆಗಳನ್ನು ಕಂಡರೆ ಆನೆಗಳು ಹಿಂದೆ ಸರಿಯುತ್ತವೆ. ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ಮಾನವ-ಆನೆ ಸಂಘರ್ಷಗಳನ್ನ ಕಡಿಮೆ ಮಾಡಲು ಇದು ಪರಿಣಾಮಕಾರಿ ಮಾರ್ಗವಾಗಲಿದೆ.

ಜೇನುನೊಣಗಳ ಝೇಂಕಾರವು ಆನೆಗಳಿಗೆ ಕಿರಿಕಿರಿ ಉಂಟುಮಾಡುತ್ತದೆ

ಆನೆಗಳು ತಮ್ಮ ಸೊಂಡಿಲು ಮತ್ತು ಕಣ್ಣುಗಳ ಸೂಕ್ಷ್ಮ ಒಳಭಾಗವನ್ನು ಕಚ್ಚುವ ಜೇನುನೊಣಗಳ ಹಿಂಡುಗಳಿಗೆ ಭಯಪಡುತ್ತವೆ ಎಂದು ವೈಜ್ಞಾನಿಕವಾಗಿ ದಾಖಲಿಸಲಾಗಿದೆ.

ಜೇನುನೊಣಗಳ ಸಾಮೂಹಿಕ ಝೇಂಕಾರವು ಆನೆಗಳಿಗೆ ಕಿರಿಕಿರಿ ಉಂಟುಮಾಡುತ್ತದೆ ಅಲ್ಲದೇ ಅವುಗಳನ್ನು ಕಾಡಿನತ್ತ ಹಿಂತಿರುಗಲು ಪ್ರೇರೆಪಿಸುತ್ತದೆ.

ಈಗಾಗಲೇ ಕರ್ನಾಟಕದಲ್ಲಿ KVIC ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ತಾಂತ್ರಿಕ ಸಿಬ್ಬಂದಿ ನೆರವಿನೊಂದಿಗೆ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ.

ಅಷ್ಟೇ ಅಲ್ಲದೇ ಜೇನು ಪೆಟ್ಟಿಗೆಗಳ ಜತೆಗೆ ಸಿಸಿ ಕೆಮರಾ ಕೂಡ ಅಳವಡಿಸಲಾಗಿದ್ದು, ಕಾಡಾನೆಗಳ ಚಲನ ವಲನಗಳ ಬಗ್ಗೆಯೂ ನಿಗಾವಹಿಸಲಾಗುತ್ತಿದೆ. 

ಈಗಾಗಲೇ ಈ ಪ್ರಯೋಗವನ್ನು ಅಸ್ಸಾಂ, ಮೇಘಾಲಯಗಳಲ್ಲಿ ಮಾಡಿದ್ದು, ಯಶಸ್ವಿಯಾಗಿದ್ದಾರೆ ಕೂಡ.

ಭಾರತದಲ್ಲಿ ಮಾನವ ಆನೆ ಸಂಘರ್ಷ ಮತ್ತು ಸಾವು!

ಭಾರತದಲ್ಲಿ ಆನೆಗಳ ದಾಳಿಯಿಂದ ಪ್ರತಿ ವರ್ಷ ಸುಮಾರು 500 ಜನರು ಸಾಯುತ್ತಾರೆ. 2015 ರಿಂದ 2020 ರವರೆಗೆ ಸುಮಾರು 2500 ಜನರು ಆನೆ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಇದರಲ್ಲಿ ಕರ್ನಾಟಕವೊಂದರಲ್ಲೇ ಸುಮಾರು 170 ಮಾನವ ಸಾವುಗಳು ವರದಿಯಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಈ ಸಂಖ್ಯೆಯ ಸುಮಾರು ಐದನೇ ಒಂದು ಭಾಗ, ಅಂದರೆ ಸುಮಾರು 500 ಆನೆಗಳು ಕಳೆದ 5 ವರ್ಷಗಳಲ್ಲಿ ಮನುಷ್ಯರಿಂದ ಸಾವನ್ನಪ್ಪಿವೆ.