News

ರೈತರಿಗೆ ದೀಪಾವಳಿ ನಿಮಿತ್ತ ಭರ್ಜರಿ ಉಡುಗೊರೆ; ಅರ್ಧ ಬೆಲೆಗೆ ಹೊಸ ಟ್ರ್ಯಾಕ್ಟರ್‌! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?

11 October, 2022 4:21 PM IST By: Kalmesh T
Huge subsidy under central PM Kisan scheme for farmers to buy tractors

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಟ್ರ್ಯಾಕ್ಟರ್‌ ಖರೀದಿಸುವ ಯೋಚನೆಯಲ್ಲಿರುವ ರೈತರಿಗೆ ಇಲ್ಲಿದೆ ಭರ್ಜರಿ ಸುದ್ದಿ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ 50% ಸಬ್ಸಿಡಿ ದೊರೆಯಲಿದೆ.

ಇದನ್ನೂ ಓದಿರಿ: 1 ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್‌ ಗಿಫ್ಟ್‌!

ದೀಪಾವಳಿ ಹಬ್ಬದ ಆಸುಪಾಸು ಬಹುಪಾಲು ರೈತರು ಟ್ರ್ಯಾಕ್ಟರ್‌ ಖರೀದಿಸುವುದು ಸರ್ವೇ ಸಾಮಾನ್ಯವಾದ ಸಂಗತಿ. ಹಾಗಿದ್ದರೆ ರೈತರಿಗೆ ನೆರವಾಗಲೆಂದೆ ಪಿಎಂ ಕಿಸಾನ್‌ ಟ್ರ್ಯಾಕ್ಟರ್‌ ಸ್ಕೀಮ್‌ನಡಿ ಟ್ರ್ಯಾಕ್ಟರ್‌ ಖರೀದಿಸುವ ರೈತರಿಗೆ ಈ ಯೋಜನೆಯಡಿ 50% ಸಬ್ಸಿಡಿ ದೊರೆಯಲಿದೆ.
ಟ್ರಾಕ್ಟರ್ ಖರೀದಿಸುವ ರೈತರಿಗೆ ಶೇಕಡಾ 50 ರಷ್ಟು ಸಬ್ಸಡಿ ಸಿಗಲಿದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಡಿ (PM Kisan Tractor scheme) ಈ ಸೌಲಭ್ಯ ಸಿಗಲಿದೆ.

ಪಿಎಂ ಕಿಸಾನ್ ಟ್ರಾಕ್ಟರ್ ಯೋಜನಯಡಿ ಟ್ರಾಕ್ಟರ್ ಖರೀದಿಸಲು ಇಚ್ಚಿಸುವ ರೈತರು ಆನ್‌ಲೈನ್ ಅಥವಾ ಸಂಬಂಧ ಪಟ್ಟ ಸ್ಛಳೀಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.

ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ಪಾವತಿಸಲಿದೆ.

ಹೆಚ್ಚಿನ ಮಾಹಿತಿಗೆ https://pmkisan.gov.in/  ಸರ್ಕಾರದ ಈ ಜಾಲತಾಣ ಸಂಪರ್ಕಿಸಿ.

ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು ಗೊತ್ತೆ?

ಶೇಕಡಾ 50 ರಷ್ಟು ಸಬ್ಸಡಿ ಇರುವುದರಿಂದ ರೈತರು ಅರ್ಧದಷ್ಟು ಹಣ ಪಾವತಿಸಿದರೆ ಟ್ರಾಕ್ಟರ್ ಲಭ್ಯವಾಗಲಿದೆ. ಈ ಅರ್ಧ ಹಣಪಾವತಿಗೂ ಸಾಲ ಸೌಲಭ್ಯವಿದೆ.

ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆಗೆ ರಾಜ್ಯ ಸರ್ಕಾರಗಳು ಸಬ್ಸಿಡಿ ಘೋಷಿಸಿದೆ.

ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಾಕ್ಟರ್ ಪಡೆಯಲು ಅರ್ಜಿ ಭರ್ತಿ ಮಾಡಬೇಕು.

ಈ ಅರ್ಜಿಯಲ್ಲಿ ಕೆಲ ನಿಬಂಧನೆಗಳಿವೆ. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಬ್ಸಡಿ ನೀಡಲಿದೆ.

ಅರ್ಜಿದಾರನ್ನು ಭಾರತೀಯ ನಾಗರೀಕರನಾಗಿರಬೇಕು

ಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 60 ವರ್ಷದೊಳಗಿರಬೇಕು

ಜಾನುವಾರು ಮಾಲೀಕರಿಗೆ ಸಿಹಿಸುದ್ದಿ; ದೇಶದ ಎಲ್ಲಾ ಪಂಚಾಯತ್‌ಗಳಲ್ಲಿ ಸರ್ಕಾರ ಡೈರಿ ತೆರೆಯಲು ನಿರ್ಧಾರ!

ಅರ್ಜಿದಾರನ ಕುಟುಂಬದ ಆದಾಯ ವಾರ್ಷಿಕ 1.5 ಲಕ್ಷಕ್ಕಿಂತ ಮೀರಬಾರದು

ಅರ್ಜಿದಾರ ಸಣ್ಣ ರೈತರ ಮಾನದಂಡ ಅನ್ವಯವಾಗಬೇಕು

ಟ್ರಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು

ಅರ್ಜಿದಾರ ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಿರಬಾರದು

ಟ್ರಾಕ್ಟರ್‌ಗೆ ಅರ್ಜಿ ಹಾಕುವ ರೈತ ಕಳೆದ 7 ವರ್ಷದಲ್ಲಿ ಯಾವುದೇ ಟ್ರಾಕ್ಟರ್ ಖರೀದಿಸಿರಬಾರದು. 

8ನೇ ತರಗತಿ ಪಾಸ್‌ ಆದವರಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ; 60,000 ವೇತನ!

ಸಬ್ಸಿಡಿ ಟ್ರಾಕ್ಟರ್ ಪಡೆಯಲು ಬೇಕಾದ ದಾಖಲೆ ಪತ್ರ

ಆಧಾರ್ ಕಾರ್ಡ್

ಬ್ಯಾಂಕ್ ಖಾತೆ ವಿವರ

ಗುರುತಿನ ಚೀಟಿ ದಾಖಲೆ (ಪ್ಯಾನ್ ಕಾರ್ಡ್, ಮತದಾರನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೆಸೆನ್ಸ್, ಇತ್ಯಾದಿ ಸೇರಿದಂತೆ)

ಭಾವಚಿತ್ರ (ಪಾಸ್‌ಪೋರ್ಟ್ ಸೈಜ್ ಫೋಟೋ)

ಭೂಮಿಯ ವಿವರ, ದಾಖಲೆ ಪತ್ರ

ಅರ್ಜಿಯಲ್ಲಿ ರೈತ ತುಂಬಬೇಕಾದ ಮಾಹಿತಿ

ಅರ್ಜಿದಾರನ ಹೆಸರು(ಆಧಾರ್ ಕಾರ್ಡ್‌ನಲ್ಲಿರುವ ಹೆಸರು)

ಅರ್ಜಿದಾರನ ಹುಟ್ಟಿದ ದಿನಾಂಕ

ಲಿಂಗ

ತಂದೆ ಅಥವಾ ಪತಿಯ ಹೆಸರು

ಅರ್ಜಿದಾರನ ವಿಳಾಸ, ಜಿಲ್ಲೆ, ತಾಲೂಕು, ಹೊಬಳಿ

ಜಾತಿ ವಿವರ

ಅರ್ಜಿದಾರನ ಮೊಬೈಲ್ ಸಂಖ್ಯೆ