Huge reduction in domestic LPG cylinder prices : ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ವಿನಾಯಿತಿ ಸೇರಿದಂತೆ ಹೆಚ್ಚುವರಿಯಾಗಿ 200 ರೂಪಾಯಿಗಳ ರಿಯಾಯಿತಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಅಡಿಗೆ ಅನಿಲ ಬೆಲೆಗಳಲ್ಲಿ ಕೇಂದ್ರ ಸರ್ಕಾರ ರಿಯಾಯಿತಿ ಪ್ರಕಟಿಸಿದ್ದು, ಇದರಿಂದ ಗ್ರಾಹಕರಿಗೆ ಮಾಸಿಕ ವೆಚ್ಚ ತಗ್ಗಲಿದೆ.
ಇಂದಿನಿಂದ ಅನ್ವಯವಾಗುವಂತೆ 14.2 ಕೆ.ಜಿ. ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ವಿನಾಯಿತಿ ಸೇರಿದಂತೆ ಹೆಚ್ಚುವರಿಯಾಗಿ 200 ರೂಪಾಯಿಗಳ ರಿಯಾಯಿತಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಈ ಬೆಲೆ ಇಳಿಕೆ ದೇಶಾದ್ಯಂತ ಅನ್ವಯವಾಗಲಿದ್ದು, ಇದರಿಂದ ಉಜ್ವಲ ಯೋಜನೆಯಡಿ ಅಡಿಗೆ ಅನಿಲ ಬಳಸುತ್ತಿರುವವರ ಒಂದು ಸಿಲೆಂಡರ್ ವೆಚ್ಚ 703 ರೂಪಾಯಿಗೆ ಇಳಿಕೆಯಾಗಲಿದೆ.
ರಿಯಾಯಿತಿ ಪ್ರಕಟಿಸಿದ ನಂತರ 31 ಕೋಟಿಗೂ ಹೆಚ್ಚು ಗೃಹ ಬಳಕೆ ಅಡಿಗೆ ಅನಿಲ ಗ್ರಾಹಕರಿಗೆ ಪರಿಹಾರ ಕಲ್ಪಿಸಿದಂತಾಗಿದೆ.
ಇದರ ಜೊತೆಗೆ 75 ಲಕ್ಷ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲೆಂಡರ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಸಹ ಹಾಕಿಕೊಳ್ಳಲಾಗಿದೆ.
ಇದರಿಂದ ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ 9.6 ಕೋಟಿಯಿಂದ 10.35 ಕೋಟಿಗೆ ಹೆಚ್ಚಲಿದೆ.
ಈ ಕುರಿತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ ನೀಡಿದ್ದಾರೆ.