ಜೇನು ಕೃಷಿ ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತಿದೆ. ಜೇನುಗಳೆಂದರೆ ಮನಸ್ಸಿನಲ್ಲಿ ಭೀತಿ ಹುಟ್ಟುವ ಕಾಲವೊಂದಿತ್ತು. ಆದರೀಗ, ಅದರೆಡೆಗೆ ಪ್ರೀತಿ ಹೆಚ್ಚುತ್ತಿದೆ. ಸರಕಾರದಿಂದ ಲಭ್ಯವಿರುವ ಯೋಜನೆಗಳನ್ನು ಬಳಸಿಕೊಂಡು ರೈತರು, ಸಾರ್ವಜನಿಕರು ಯಶಸ್ವಿ ಜೇನು ಕೃಷಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ ಜೇನು ಸಾಕಾಣಿಕೆಯಲ್ಲಿ ಆಸಕ್ತಿಯಿರುವ ಗ್ರಾಮೀಣ ಪ್ರದೇಶದ ಯುವಕರಿಗೆ 10 ದಿನಗಳ ಕಾಲ ಉಚಿತವಾಗಿ ಜೇನು ಅರ್ಜಿ ಸಾಕಾಣಿಕೆ ತರಬೇತಿ ನೀಡಲು ಅರ್ಜಿಆಹ್ವಾನಿಸಲಾಗಿದೆ.
ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಹೌದು, ಕಲಬುರಗಿಯ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಈ ತರಬೇತಿ ಆಯೋಜಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮೇ 16 ರಿಂದ 25 ರವರೆಗೆ ಹತ್ತು ದಿನಗಳ ಕಾಲ ಉಚಿತವಾಗಿ ಜೇನು ಸಾಕಾಣಿಕೆ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯಎಸ್.ಬಿ.ಐ ಆರ್.ಸೆಟ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಈ ತರಬೇತಿ ಸಂದರ್ಭದಲ್ಲಿ ಉಚಿತವಾಗಿ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುವುದು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು. ಬಿಪಿಎಲ್, ಅಂತ್ಯೋದಯ ರೇಷನ್, ಎಮ್.ಜಿ.ಎನ್.ಆರ್.ಇ.ಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅವಶ್ಯಕ ದಾಖಲಾತಿಗಳೊಂದಿಗೆ ಮೇ 14 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳುತರಬೇತಿ ಸಂಸ್ಥೆಯಲ್ಲಿ ಮೇ 14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಜೇನು ಸಾಕಾಣಿಕೆ ತರಬೇತಿಯ ಉದ್ದೇಶ
ರೈತರಿಗೆ ಜೇನು ಕೃಷಿ ತರಬೇತಿ ನೀಡಿ ಹೆಚ್ಚು ಜನರು ಜೇನು ಕೃಷಿಯಲ್ಲಿ ತೊಡಗುವಂತೆ ಮಾಡುವುದು. ಜೇನು ಸಾಕಾಣಿಕೆ ಮೂಲಕ ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಪರಾಗ ಸ್ಪರ್ಶ ಕ್ರಿಯೆಯನ್ನು ಉತ್ತೇಜಿಸುವುದು, ರೈತ ಸಮುದಾಯಕ್ಕೆ ಪೂರಕ ಆದಾಯ ತರುವಂತಹ ಉಪ ಉದ್ಯೋಗವಾಗಿ ಜೇನು ಕೃಷಿಯನ್ನು ಅಭಿವೃದ್ಧಿಪಡಿಸುವುದು. ಜೇನು ಕೃಷಿಯ ಮೂಲಕ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವ ಅಗತ್ಯವಿರುವ ತಂತ್ರಜ್ಞಾನಗಳ ಅಭಿವೃದ್ಧಿ ಪ್ರಚಾರ ಮತ್ತು ಪ್ರಸರಣೆ ಮಾಡುವುದು.
ಪರಾಗಸ್ಪರ್ಶ ಹೊಂದಿರುವ ಜೇನು ಸ್ನೇಹಜೀವಿಯಾಗಿದೆ. ಗಿಡಬಳ್ಳಿಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಿ ಜೇನು ಉತ್ಪಾದಿಸುತ್ತದೆ.
50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ