ಕರ್ನಾಟಕದ ಪ್ರತಿಶಿಷ್ಠಿತ ಉತ್ಪನ್ನವಾದ ನಂದಿನಿ ಮೊಸರಿನ ಉತ್ಪನ್ನದ ಮೇಲೆ ಹಿಂದಿ ಪದ ಬಳಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಹಿಂದಿ ಹೇರಿಕೆ ಅವ್ಯಾತವಾಗಿ ಆಗುತ್ತಲೇ ಇದನ್ನು ತಡೆಯಬೇಕು ಎನ್ನುವ ಚರ್ಚೆಗಳು ನಡೆಯುತ್ತಲೇ ಇದೆ.
ಇನ್ನು ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು ನಂದಿನಿ ಹಾಗೂ ಅಮುಲ್ ಉತ್ಪನ್ನಗಳನ್ನು ಒಂದು ಮಾಡಬೇಕು.
ಎರಡೂ ಸಂಸ್ಥೆಗಳು ಒಂದಾಗಿ ಕೆಲಸ ಮಾಡಿದರೆ, ಸಾಧನೆ ಮಾಡಬಹುದು. ಹೀಗಾಗಿ, ಅಮುಲ್‌ನೊಂದಿಗೆ ನಂದಿನಿಯನ್ನು ಸೇರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಮುಖ್ಯಮಂತ್ರಿ ಕಾಫಿ, ತಿಂಡಿಗೆ 200 ಕೋಟಿ ರೂಪಾಯಿ ಖರ್ಚು, ಏನಿದು ಚರ್ಚೆ ?
ಅಮಿತ್ ಶಾ ಅವರ ಈ ಪ್ರಸ್ತಾವನೆಗೆ ರಾಜ್ಯದ ಹಾಲು ಉತ್ಪಾದಕರು ಹಾಗೂ ಹಾಲು ಉತ್ಪಾದಕ ಒಕ್ಕೂಟ, ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ನಮ್ಮ ನಂದಿನಿ, ನಂದಿನಿ ಉಳಿಸಿ ಎನ್ನುವ ಅಭಿಯಾನ ಪ್ರಾರಂಭವಾಗಿತ್ತು.
ವಿರೋಧ ಪಕ್ಷಗಳು ಸಹ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದಾದ ನಂತರದಲ್ಲಿ ಅಮುಲ್ ಹಾಗೂ ನಂದಿನಿ ಬ್ರ್ಯಾಂಡ್ ಒಂದು ಮಾಡುವ ಪ್ರಸ್ತಾವನೆ ಮತ್ತೆ ಚರ್ಚೆ ಆಗಿರಲಿಲ್ಲ.
Char Dham Yatra ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಆರೋಗ್ಯ ಸೇವೆ
ಇದೀಗ ನಂದಿನಿ ಮೊಸರಿನಲ್ಲಿ ದಹಿ ಎಂಬ ಹಿಂದಿ ಪದವನ್ನು ಬಳಸಲಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೊಸರಿನ ಉತ್ಪನದ ಮೇಲೆ ದಹಿ ಹೆಸರು
ಮೊಸರಿನ ಉತ್ಪನ್ನದ ಮೇಲೆ ದಹಿ ಎನ್ನುವ ಹೆಸರು ಇರುವುದು ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಂದಿನಿ ಮೊಸರಿನ ಉತ್ಪನ್ನದ ಮೇಲೆ (ಪ್ರೋಬಯೊಟಿಕ್ ಮೊಸರು) ದಹಿ ಎಂದು ಬರೆಯಲಾಗಿದೆ.
ಇದಕ್ಕೆ ಕನ್ನಡಿಗ ರೂಪೇಶ್ ರಾಜಣ್ಣ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕನ್ನಡಿಗರೇ ಗುಲಾಮಗಿರಿ ಮಾಡೋರನ್ನ ಪಕ್ಕಕ್ಕಿಟ್ಟು ನಾವಾದ್ರೂ ಎಚ್ಚರವಾಗಬೇಕಿದೆ.
ನಂದಿನಿಯನ್ನು ಹೇಗಾದ್ರು ಮಾಡಿ ಅಮುಲ್ ಜೊತೆ ಸೇರಿಸೋಕೆ ನೋಡಿದ್ರು ಆಗ್ಲಿಲ್ಲ.
ಈಗ ಹೇಗಾದ್ರು ಮಾಡಿ ಹಿಂದಿನಾದ್ರು ಸೇರಿಸಿಬಿಡೋಣ ಅಂತ ನಂದಿನಿ ಮೇಲೆ ಎಂದೂ ಇಲ್ಲದ ಹಿಂದಿ ಈಗ ಬಂದಿದೆ.
ಇಂದು ಎಚ್ಚೆತ್ತುಕೊಳ್ಳದಿದ್ರೆ ಒಂದಿನ ಕನ್ನಡ ಹೋಗಿ ಅಲ್ಲಿ ಹಿಂದಿ ಇರುತ್ತೆ ಎಂದಿದ್ದಾರೆ.
ನಂದಿನಿ ನಡೆಗೆ ಸಾರ್ವಜನಿಕರ ಆಕ್ರೋಶ
ನಂದಿನಿ ಮೊಸರಿನ ಉತ್ಪನ್ನದ ಮೇಲೆ ದಹಿ ಎಂದು ಬರೆದಿರುವುದುಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ನಂದಿನ ನಮ್ಮ ಉತ್ಪನ್ನ ಇದರ ಮೇಲೆ ಹಿಂದಿಯಲ್ಲಿ ಬರೆಯಬಾರದು. ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು ಎಂಬ ಅಭಿಯಾನ ಪ್ರಾರಂಭವಾಗಿದೆ.