News

ವಿಮಾ ಕಂಪನಿಗೆ ಹೈಕೋರ್ಟ್ ಹೊಡೆತ! ರೈತರ ಒಗ್ಗಟ್ಟಿಗೆ ಬಲ ತಂದ ಕಾನೂನು

11 April, 2022 10:35 AM IST By: Kalmesh T
High Court blow to insurance company! Right to law

ಅತಿವೃಷ್ಟಿ, ಆಲಿಕಲ್ಲು ಮಳೆ, ಹವಾಮಾನ ಬದಲಾವಣೆ ಹಾಗೂ ಇತರೆ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದಾಗ ಆರ್ಥಿಕ ನೆರವು ನೀಡಲು ರೈತರು ಬೆಳೆ ವಿಮೆ ಮಾಡಿಸುತ್ತಾರೆ. ಆದರೆ, ಕಳೆದ ಕೆಲವು ದಿನಗಳಿಂದ ನಷ್ಟದ ನಡುವೆಯೂ ಹಲವು ಕಂಪನಿಗಳು ರೈತರಿಗೆ ಬೆಳೆ ವಿಮೆ ಪಾವತಿಸದೇ ಇರುವುದನ್ನು ಕಂಡಿದ್ದೇವೆ. ಹಾಗಾಗಿ ಈಗಾಗಲೇ ಪ್ರಕೃತಿ ವಿಕೋಪದಿಂದ ನಲುಗುತ್ತಿರುವ ರೈತ ಇನ್ನೂ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. 

ಪರ್ಭಾನಿ ಜಿಲ್ಲೆಯ ಪಾಲಂ ತಾಲೂಕಿನ ರೈತರಿಗೂ ಇದೇ ರೀತಿಯ ಘಟನೆ ನಡೆದಿದೆ. ಆದರೆ ಈ ರೈತರು ನ್ಯಾಯಾಲಯದ ಪ್ರಕ್ರಿಯೆ ಮೂಲಕ ಸಂಬಂಧಪಟ್ಟ ವಿಮಾ ಕಂಪನಿಗೆ ಉತ್ತಮ ಕಪಾಳಮೋಕ್ಷ ಮಾಡಿದ್ದಾರೆ. ಮೇ 31ರೊಳಗೆ ಈ ರೈತರಿಗೆ 15 ಕೋಟಿ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಹೈಕೋರ್ಟ್ ಸೂಚಿಸಿದೆ.

ಇದನ್ನು ಓದಿರಿ:

CAI: ಹತ್ತಿ ಉತ್ಪಾದನೆಯ ಅಂದಾಜು 2.33 % ರಷ್ಟು ಕಡಿತ

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

2017 ರ ರಬಿ ಋತುವಿನಲ್ಲಿ ಫೆಬ್ರವರಿ 13, 2018 ರಂದು ಪರ್ಭಾನಿ ಜಿಲ್ಲೆಯ ಪಾಲಂ ತಾಲೂಕಿನ 42 ಹಳ್ಳಿಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಇದರಲ್ಲಿ ರೈತರು ತೊಗರಿ, ಗೋಧಿ, ಹುರಳಿ ಮುಂತಾದ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಬೆಳೆ ನಷ್ಟವಾದರೂ ಬೆಳೆ ವಿಮೆ ಮಾಡಿದ ರೈತರಿಗೆ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಿಂದ (National Insurance Company)  ಬೆಳೆ ವಿಮೆ ಪಾವತಿಯಾಗಿಲ್ಲ. 

ಕಿಸಾನ್ ಸಭಾ (Kisan Sabha) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (Communist Party Of India ) ಕಂಪನಿಯ ವಿರುದ್ಧ ಆಂದೋಲನವನ್ನು ನಡೆಸಿತು ಮತ್ತು ನಂತರ ಅಂದಿನ ಜಿಲ್ಲಾ ಮಟ್ಟದ ಬೆಳೆ ವಿಮಾ ಸಮಿತಿ ಮತ್ತು ಜಿಲ್ಲಾ ಕೃಷಿ ಮೇಲ್ವಿಚಾರಕ ಶಿಂಧೆ ಅವರು ಸಂಬಂಧಿಸಿದ ರೈತರಿಗೆ ಮರುಪಾವತಿ ಮಾಡುವಂತೆ ವಿಮಾ ಕಂಪನಿಗೆ ಸೂಚಿಸಿ ಔಪಚಾರಿಕ ಆದೇಶ ಹೊರಡಿಸಿದ್ದರು.

EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

ಆದರೆ, ಈ ಆದೇಶವನ್ನು ಸಂಬಂಧಪಟ್ಟ ವಿಮಾ ಕಂಪನಿ ತಿರಸ್ಕರಿಸಿದೆ. ಬಳಿಕ ಕಿಸಾನ್ ಸಭಾದ (Kisan Sabha) ಮೂಲಕ ರಾಜ್ಯ ಮಟ್ಟದ ಸಮಿತಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು. ನಂತರ ರಾಜ್ಯ ಮಟ್ಟದ ಸಮಿತಿಯು ಕಾರ್ಯದರ್ಶಿ ಮಟ್ಟದಲ್ಲಿ ಆನ್‌ಲೈನ್ ವಿಚಾರಣೆ ನಡೆಸಿತು. ರೈತರ ಪರ ವಕೀಲ ರಾಮರಾಜೇ ದೇಶಮುಖ, ಕಾಮ್ರೇಡ್ ರಾಜನ್ ಕ್ಷೀರಸಾಗರ, ಚಂದ್ರಕಾಂತ ಜಾಧವ್ ವಾದ ಮಂಡಿಸಿದ್ದರು. ಇದರಲ್ಲಿಯೂ ರಾಜ್ಯ ಮಟ್ಟದ ಸಮಿತಿ ರೈತರ ಪರ ತೀರ್ಪು ನೀಡಿತ್ತು.

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

ಈ ಆದೇಶವನ್ನು ವಿಮಾ ಕಂಪನಿ ತಿರಸ್ಕರಿಸಿದೆ. ಇಂತಹ ಪ್ರಕ್ರಿಯೆಯ ನಂತರ ಕಿಸಾನ್ ಸಭಾದ (Kisan Sabha) ಚಂದ್ರಕಾಂತ್ ಜಾಧವ್ ಅವರು ಅಂತಿಮವಾಗಿ ರೈತರ ಪರವಾಗಿ ವಕೀಲ ರಾಮರಾಜೇ ದೇಶಮುಖ್ ಅವರ ಸಹಾಯದಿಂದ ಹೈಕೋರ್ಟ್‌ನ ಔರಂಗಾಬಾದ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯಲ್ಲಿ ರೈತರ ಪರ ವಕೀಲ ರಾಮರಾಜೇ ದೇಶಮುಖ ವಾದ ಮಂಡಿಸಿದ್ದರು. ಮಾರ್ಚ್ 29 ರಂದು ನ್ಯಾಯಾಲಯವು ಈ ಬಗ್ಗೆ ಔಪಚಾರಿಕ ಆದೇಶವನ್ನು ನೀಡಿತು. ಇದೀಗ ಈ ಆದೇಶದಂತೆ ಪಾಲಂ ತಾಲೂಕಿನ 42 ಆಲಿಕಲ್ಲು ಮಳೆ ಪೀಡಿತ ಗ್ರಾಮಗಳ 19,195 ರೈತರಿಗೆ 2022ರ ಮೇ 31ರ ಮೊದಲು 15 ಕೋಟಿ 71 ಲಕ್ಷದ 44 ಸಾವಿರದ 956 ರೂ.ಗಳ ಪರಿಹಾರವನ್ನು ಪಾವತಿಸಲು ವಿಮಾ ಕಂಪನಿ ಕಡ್ಡಾಯಗೊಳಿಸಿದೆ.

Agriculture Income! ರೈತರೇ ನಿಮ್ಮ Income 10 ಲಕ್ಷ ಮೀರಿದರೆ? ಏನಾಗುತ್ತೆ?

Chicken And Fish: ಚಿಕನ್‌ & ಮೀನು ಯಾವುದು ಬೆಸ್ಟ್‌..!