News

Aadhaar Card: ಇನ್ಮುಂದೆ ಆಧಾರ್‌ ಇಲ್ಲದೇ ಸಬ್ಸಿಡಿಗಳು ಇಲ್ಲ! ಕೇಂದ್ರ ಸರ್ಕಾರದ ಮಹತ್ವದ ಸುತ್ತೋಲೆ..

17 August, 2022 11:49 AM IST By: Kalmesh T
Henceforth no subsidy is available without Aadhaar Card!

ಗಮನಿಸಿ ಕೇಂದ್ರ ಸರ್ಕಾರ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಇನ್ಮುಂದೆ ಆಧಾರ್‌ ಕಾರ್ಡ್‌ ಇಲ್ಲದೇ ಇದ್ದರೆ ಯಾವುದೇ ಸರ್ಕಾರಿ ಸೌಲಭ್ಯಗಳು/ ಸಬ್ಸಿಡಿಗಳು ದೊರೆಯವುದಿಲ್ಲ. ಏನಿದು ತಿಳಿಯಿರಿ..

ಇದನ್ನೂ ಓದಿರಿ: ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್‌: ಕರ್ತವ್ಯದ ವೇಳೆ ನಿಧನರಾಗುವ ಈ ಉದ್ಯೋಗಿಗಳ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ!

Aadhaar Card: ಆಧಾರ್ ಹೊಂದಿರುವ ನಾಗರಿಕರು ಮಾತ್ರ ಯೋಜನೆಗಳು ಮತ್ತು ಸಬ್ಸಿಡಿಗಳ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಸಚಿವಾಲಯಗಳಿಗೆ ಸುತ್ತೋಲೆ ಕಳುಹಿಸಿದೆ.

ಆಧಾರ್ ಇಲ್ಲದವರಿಗೆ ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ ಕೂಡ.

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರಮುಖ ವೈಯಕ್ತಿಕ ದಾಖಲೆಗಳಲ್ಲಿ ಒಂದಾಗಿದ್ದು ನಮಗೆಲ್ಲ ತಿಳಿದಿರುವ ಸಂಗತಿಯೇ. ಅದಿಲ್ಲದೆ ಇದ್ದರೆ ಯಾವ ಕೆಲಸಗಳು ನಡೆಯುವುದಿಲ್ಲ.

Postal Jobs: ಯುವಜನತೆಗೆ ಭರ್ಜರಿ ಸುದ್ದಿ: ಅಂಚೆ ಇಲಾಖೆಯಲ್ಲಿದೆ 1 ಲಕ್ಷ ಖಾಲಿ ಹುದ್ದೆ!

ಸರ್ಕಾರಿ, ಖಾಸಗಿ ಹಾಗೂ ಇತರೆ ಕೆಲಸಗಳಿಗೂ ಆಧಾರ್ ಕಡ್ಡಾಯವಾಗಿ ಬೇಕೆ ಬೇಕು.

ಆಧಾರ್ ಕಾರ್ಡ್ ಇಲ್ಲದೆ ಅನೇಕ ಸರ್ಕಾರಿ ಯೋಜನೆಗಳು ಲಭ್ಯವಿಲ್ಲ. ಮೇಲಾಗಿ ಸರ್ಕಾರದ ಇತರೆ ಸವಲತ್ತುಗಳು ಸಿಗುತ್ತಿಲ್ಲ ಎಂಬುದನ್ನು ಗಮನಿಸಬೇಕು.

ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿದೆ ಎಂದು UIDAI ಸ್ಪಷ್ಟಪಡಿಸಿದೆ.

ಯುವಜನತೆಗೆ ಉದ್ಯೋಗ ಮಾಡಲು ಇಲ್ಲಿದೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ 25 ಲಕ್ಷ ಸಾಲ..ಅರ್ಜಿ ಸಲ್ಲಿಸುವುದು ಹೇಗೆ?

Aadhaar Card:ಇದಕ್ಕಾಗಿ ಪ್ರಾಧಿಕಾರವು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸುತ್ತೋಲೆಯನ್ನು ಸಹ ಹೊರಡಿಸಿದೆ.

ಆಧಾರ್ ಹೊಂದಿರುವ ನಾಗರಿಕರು ಮಾತ್ರ ಯೋಜನೆಗಳು ಮತ್ತು ಸಬ್ಸಿಡಿಗಳ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಸಚಿವಾಲಯಗಳಿಗೆ ಸುತ್ತೋಲೆ ಕಳುಹಿಸಿದೆ.

ಆಧಾರ್ ಇಲ್ಲದವರಿಗೆ ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಇನ್ನು ಆಧಾರ್ ನಿಯಮಗಳನ್ನು ಬಿಗಿಗೊಳಿಸಲಾಗುವುದು.

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ

ಆಧಾರ್‌ಗಾಗಿ ಈಗಿರುವ ಸೂಚನೆಗಳ ಪ್ರಕಾರ.. ಒಬ್ಬ ವ್ಯಕ್ತಿಯು ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ ಅವರು ಇತರ ದಾಖಲೆಗಳನ್ನು ತೋರಿಸುವ ಮೂಲಕ ಸಬ್ಸಿಡಿಯನ್ನು ಪಡೆಯಬಹುದು.

ಆದರೆ ಇನ್ಮುಂದೆ ಯಾರೇ ಇರಲಿ ಆಧಾರ್ ಸಂಖ್ಯೆ ಹೊಂದಿಲ್ಲದಿದ್ದರೆ, ಅವರು ಅದಕ್ಕೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಸಮಯದಲ್ಲಿ ರಸೀದಿ ಅಥವಾ ದಾಖಲಾತಿ ಚೀಟಿಯನ್ನು ತೋರಿಸಬೇಕು ಮತ್ತು ಸಹಾಯಧನ ಅಥವಾ ಸರ್ಕಾರದ ಯೋಜನೆಯ ಲಾಭವನ್ನು ಮಾತ್ರ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌..

ಯಾರಾದರೂ ಆಧಾರ್ ಹೊಂದಿಲ್ಲದಿದ್ದರೆ ಅಥವಾ ಅವರು ಆಧಾರ್‌ಗೆ ಅರ್ಜಿ ಸಲ್ಲಿಸದಿದ್ದರೆ ಅವರು ಇತರ ದಾಖಲೆಗಳನ್ನು ತೋರಿಸಿ ಸರ್ಕಾರದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ.

ಸಬ್ಸಿಡಿಗಳು ಮತ್ತು ವಿನಾಯಿತಿಗಳಿಗೆ ಕಡಿವಾಣ ಹಾಕಲು ಸರ್ಕಾರವು ಪ್ರಯತ್ನಗಳನ್ನು ಮುಂದುವರೆಸಿದೆ. ಈ ಮಧ್ಯೆ, ಅಕ್ರಮಗಳನ್ನು ತಡೆಯಲು ಆಧಾರ್ ಕಾರ್ಡ್ ನೆರವಾಗಿದೆ.

ಜನರು ಇದರ ಸದುಪಯೋಗ ಪಡೆಯಬೇಕು. ಪ್ರಸ್ತುತ ಸರ್ಕಾರವು ಅಗ್ಗದ ದರದಲ್ಲಿ ಪಡಿತರ, ಅಡುಗೆ ಅನಿಲ, ಮತ್ತು ಕಡಿಮೆ ದರದಲ್ಲಿ ಸಾಲದಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.