Gold Rate in Delhi ಚಿನ್ನದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭರ್ಜರಿ ಇಳಿಕೆ ಆಗಿದೆ.ಆದರೆ,
ಕಳೆದ ಎರಡು ವಾರದ ಅವಧಿಯಲ್ಲಿ ಚಿನ್ನದ (Gold price) ಬೆಲೆಯನ್ನು ನೋಡಿದರೆ, ಚಿನ್ನದ ಬೆಲೆಯಲ್ಲಿ
ಬರೋಬ್ಬರಿ 1500 ರೂಪಾಯಿಗಿಂತ ಹೆಚ್ಚು ಇಳಿಕೆಯಾಗಿರುವುದು ವರದಿ ಆಗಿದೆ. ಆದರೆ, ಇದೇ ಸಂದರ್ಭದಲ್ಲಿ
ನೀವು ಕಳೆದ ಮೂರರಿಂದ ನಾಲ್ಕು ತಿಂಗಳ ಚಿನ್ನದ ಬೆಲೆಯನ್ನು ನೋಡಿದರೆ, 10ರಿಂದ 13 ಸಾವಿರ
ರೂಪಾಯಿಯವರೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ.
ಈ ಮೂಲಕ ಚಿನ್ನವು ದೀರ್ಘಕಾಲಿಕ ಹೂಡಿಕೆಗೆ ಸೂಕ್ತ ಹಾಗೂ ದೀರ್ಘಕಾಲದಲ್ಲಿ ಚಿನ್ನ
ಲಾಭವನ್ನೇ ತರಲಿದೆ ಎನ್ನುವುದು ಸಾಬೀತಾದಂತಾಗಿದೆ. ಸಾಮಾನ್ಯವಾಗಿ ಜನ ದೀರ್ಘಕಾಲದಲ್ಲಿ ಲಾಭ ತಂದು ಕೊಡಲಿದೆ
ಎನ್ನುವ ಉದ್ದೇಶದಿಂದಲೇ ಚಿನ್ನದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ.
ಚಿನ್ನದಲ್ಲಿ ಹೂಡಿಕೆ ಮಾಡಿದರೆ ಇಂದಲ್ಲ ನಾಳೆ ಲಾಭವನ್ನು ತಂದುಕೊಡಲಿದೆ ಎನ್ನುವುದು ಒಂದು ನಂಬಿಕೆ.
ಆ ನಂಬಿಕೆ ಇಂದೂ ಸಹ ಹುಸಿಯಾಗಿಲ್ಲ.
ಬೆಳ್ಳಿಯಿಂದ ನಿರೀಕ್ಷಿತ ಲಾಭ ಸಿಗದೆ ಇದ್ದರೂ ಚಿನ್ನದಿಂದ ನಷ್ಟವಾಗುವುದೇ ಇಲ್ಲ ಎನ್ನುವಷ್ಟು ಚಿನ್ನ ಲಾಭವನ್ನೇ ತಂದುಕೊಡುತ್ತದೆ.
ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ
ಭಾರತದ ಮಾರುಕಟ್ಟೆಯಲ್ಲಿ (Today Gold price) ನೀವು ಚಿನ್ನದ ಬೆಲೆಯನ್ನು
ನೋಡುವುದೇ ಆದರೆ, ಚಿನ್ನದ ಬೆಲೆಯು ಭಾರತದಲ್ಲಿ ಚಿನ್ನದ ದರ
22K ಚಿನ್ನ /g. ₹ 5,740.
24K ಚಿನ್ನ /g. ₹ 6,262.
18K ಚಿನ್ನ /g. ₹ 4,696.
ನಂತೆ ಇದೆ. ಇನ್ನು ಕಳೆದ 15 ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯೇ ಆಗಿದೆ.
ಇನ್ನು ಇಂದಿನ 19-01-2023ರ ರೀಟೇಲ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ನೋಡುವುದೇಯಾದರೆ,
10 ಗ್ರಾಂನ 22 ಕ್ಯಾರೆಟ್ ಚಿನ್ನವು 57,400 ರೂಪಾಯಿ ಇದೆ. 24 ಕ್ಯಾರೆಟ್ ಚಿನ್ನದ ಬೆಲೆಯು 62,620 ರೂಪಾಯಿ ಆಗಿದೆ.
ವೀಕೆಂಡ್‌ನಲ್ಲಿ ಚಿನ್ನ ಖರೀದಿಗೆ ಹೋಗ್ತಿದ್ದೀರಾ..?ಹಾಗಾದ್ರೆ ಈ ಸುದ್ದಿಯನ್ನ ಒಮ್ಮೆ ನೋಡ್ಬಿಡಿ
ಚಿನ್ನದ ಬೆಲೆಯಲ್ಲಿ ದೀರ್ಘಕಾಲದಲ್ಲಿ ಬೆಲೆ ಹೆಚ್ಚಳ
ಚಿನ್ನದ ಬೆಲೆಯಲ್ಲಿ (Gold price Today) ದೀರ್ಘಕಾಲದಲ್ಲಿ ಬೆಲೆ ಹೆಚ್ಚಳವಾಗುತ್ತದೆ ಎನ್ನುವುದರಲ್ಲಿ
ಯಾವುದೇ ಅನುಮಾನ ಇಲ್ಲ. ಅನಿಶ್ಚಿತತೆ ಎದುರಾಗುವ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಲ್ಲೇ ಇರುತ್ತದೆ.
ಇನ್ನು ನೀವು ಗಮನಿಸಿದರೆ, ಕಳೆದ 2 ವರ್ಷದ ಅವಧಿಯಲ್ಲಿ ಜಗತ್ತಿನಲ್ಲಿ ರಷ್ಯಾ- ಉಕ್ರೇನ್ ವಾರ್‌ನಿಂದ ಪ್ರಾರಂಭವಾಗಿ ಹಲವು
ಕಾರಣಗಳಿಂದ ಅನಿಶ್ಚಿತತೆ ಸೃಷ್ಟಿಯಾಗಿದೆ. ಇರಾನ್ ಮತ್ತು ಗಾಜಾ ಸಂಘರ್ಷ ಇದಾದ ಬಳಿಕ ಇದೀಗ ಇರಾನ್ ಮತ್ತು ಪಾಕ್ ನಡುವೆ
ಸಂಘರ್ಷಗಳ ಕಾರಣದಿಂದ ಜಗತ್ತಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಳಿತವಾಗುವ ಸಾಧ್ಯತೆ ಇದೆ.
ಇದೆಲ್ಲದರ ನಡುವೆಯೇ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ 12000 ಸಾವಿರ ರೂಪಾಯಿಯಿಂದ 13000 ಸಾವಿರ ರೂಪಾಯಿ
ಹೆಚ್ಚಳವಾಗಿರುವುದು ವರದಿ ಆಗಿದೆ. ಚಿನ್ನದ ಬೆಲೆಯು ಕಳೆದ ಮೂರು ತಿಂಗಳ ಹಿಂದೆ ನೋಡುವುದಾದರೆ ಬರೋಬ್ಬರಿ ಪ್ರತಿ 10 ಗ್ರಾಂಗೆ 50000 ಸಾವಿರ
ರೂಪಾಯಿ ಆಸುಪಾಸಿನಲ್ಲಿ ಇತ್ತು. ಇದೀಗ ಮಾರುಕಟ್ಟೆಯಲ್ಲಿ ಪ್ರತಿ ಹತ್ತು ಗ್ರಾಂನ ಚಿನ್ನದ ಬೆಲೆಯನ್ನು ನೀವು ನೋಡುವುದಾದರೆ
ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 62,620 ರೂಪಾಯಿ ಇದೆ.