News

ಈಗ ವಾಟ್ಸಪ್‌ನಲ್ಲಿಯೂ Home Loan ತೆಗೆದುಕೊಳ್ಳಬಹುದು..! ಹೊಸ ಸೌಲಭ್ಯ ನೀಡಿದ HDFC ಬ್ಯಾಂಕ್

25 May, 2022 9:35 AM IST By: Kalmesh T
HDFC: Home Loan can now be taken on WhatsApp

WhatsApp ಮೂಲಕ ಕೆಲವೇ ನಿಮಿಷಗಳಲ್ಲಿ ಗೃಹಸಾಲ (Home Loan) ಒದಗಿಸುವ ಹೊಸ ಯೋಜನೆಯೊಂದನ್ನು HDFC ಬ್ಯಾಂಕ್ ಪರಿಚಯಿಸಿದೆ.

ಇದನ್ನೂ ಓದಿರಿ: Breaking: ಮೇ 25 ರಂದು ಭಾರತ ಬಂದ್‌ಗೆ ಕರೆ..ಕಾರಣಗಳೇನು ಗೊತ್ತಾ..?

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ಹೌದು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಈಗ ಎಚ್ಡಿಎಫ್ಸಿ ಬ್ಯಾಂಕ್ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅದು ತನ್ನ ಗ್ರಾಹಕರಿಗಾಗಿ ವಿಶೇಷ ಸೌಲಭ್ಯ ಆರಂಭಿಸಿದೆ. ಇದಕ್ಕಾಗಿ 'ವಾಟ್ಸಾಪ್‌ನಲ್ಲಿ ಸ್ಪಾಟ್ ಆಫರ್' ಆರಂಭಿಸಿದೆ.

ಈ ಸೌಲಭ್ಯವು ವಾರದ ಎಲ್ಲ ದಿನಗಳಲ್ಲೂ ದಿನದ 24 ಗಂಟೆಯೂ ಲಭ್ಯವಿರಲಿದೆ. ವಸತಿ ಸಾಲ ಮಂಜೂರಾತಿ ಪತ್ರಕ್ಕೆ ‘ವೇಟಿಂಗ್ ಪೀರಿಯಡ್’ ಇರುವುದಿಲ್ಲ.

ವಾಟ್ಸ್‌ಆಪ್ ಮೂಲಕ ಎರಡೇ ನಿಮಿಷಗಳಲ್ಲಿ ಗೃಹಸಾಲ ಒದಗಿಸುವ ಹೊಸ ಯೋಜನೆಯೊಂದನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಜಾರಿಗೆ ತಂದಿದೆ. ಗೃಹ ಸಾಲ ಪಡೆಯುವವರ ಅನುಕೂಲಕ್ಕಾಗಿ ಎಚ್‌ಡಿಎಫ್‌ಸಿ, 'ಸ್ಪಾಟ್ ಆಫರ್ ಆನ್ ವಾಟ್ಸ್‌ಆಪ್' ಪರಿಚಯಿಸಿದೆ.

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಸಾಲ ಪಡೆಯಲು ಬಯಸುವವರು, ಎಚ್‌ಡಿಎಫ್‌ಸಿ ವಾಟ್ಸ್‌ಆಪ್ ನಂಬರ್ (+91 9867000000)ಗೆ ಮೆಸೇಜ್ ಕಳುಹಿಸಿ, ಅಲ್ಲಿ ಕೊಟ್ಟಿರುವ ಸೂಚನೆಯ ಅನುಸಾರ, ಕೆಲವೊಂದು ವಿವರ ಮತ್ತು ದಾಖಲೆ ನೀಡಿದರೆ ಸಾಕಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಗ್ರಾಹಕರು ಒದಗಿಸುವ ಮಾಹಿತಿ ಮತ್ತು ದಾಖಲೆ ಪರಿಶೀಲಿಸಿ, ತಕ್ಷಣವೇ ಅವರಿಗೆ ಗೃಹ ಸಾಲ ಮಂಜೂರು ಮಾಡಲಾಗಿರುವ ಪತ್ರವನ್ನು ಎಚ್‌ಡಿಎಫ್‌ಸಿ ವಾಟ್ಸ್‌ಆಪ್ ಮೂಲಕವೇ ಕಳುಹಿಸಲಿದೆ.

ಈ ಸೌಲಭ್ಯ 24X7 ಲಭ್ಯವಿದ್ದು, ಗ್ರಾಹಕರು ಗೃಹ ಸಾಲ ಪಡೆಯಲು ಕೆಲವೇ ಸುಲಭ ಹಂತಗಳನ್ನು ಅನುಸರಿಸಿದರೆ ಸಾಕು. ದೇಶದ ವೇತನಸಹಿತ ಉದ್ಯೋಗಿಗಳಿಗೆ ಈ ಸೌಲಭ್ಯ ದೊರೆಯುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ಗೃಹ ಸಾಲ ಪಡೆಯಲು ಇರುವ ಆರಂಭಿಕ ಪ್ರಕ್ರಿಯೆ ಮತ್ತು ಮಂಜೂರಾತಿ ಪತ್ರ ಪಡೆಯುವ ಸಮಯವನ್ನು ಇದು ತ್ವರಿತವಾಗಿ ಅನುವು ಮಾಡಿಕೊಡುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

24X7 ಸೌಲಭ್ಯ ದೊರೆಯಲಿದೆ

ಈ ಸೌಲಭ್ಯವು ಎಲ್ಲ ಏಳು ದಿನಗಳ ಕಾಲವೂ ಲಭ್ಯವಿರುತ್ತದೆ ಎಂದು ಹೇಳಿದೆ. ವಸತಿ ಸಾಲ ಮಂಜೂರಾತಿ ಪತ್ರಕ್ಕೆ ‘ವೇಟಿಂಗ್ ಪೀರಿಯಡ್’ ಇರುವುದಿಲ್ಲ.

ಈ ಸೌಲಭ್ಯವು ಸಂಬಳ ಪಡೆಯುವ ಭಾರತೀಯ ನಿವಾಸಿಗಳಿಗೆ ಮಾತ್ರ. ಆದ್ದರಿಂದ ನೀವು ಸಹ ಈ ವರ್ಗಕ್ಕೆ ಸೇರಿದ್ದರೆ ಮತ್ತು ಹೋಮ್ ಲೋನ್‌ಗಾಗಿ ಯೋಜಿಸುತ್ತಿದ್ದರೆ, HDFCಯ ಈ ಸೌಲಭ್ಯವು ನಿಮಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು.

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !