News

Gruha Jyoti Latest Update: ಉಚಿತ ವಿದ್ಯುತ್‌ಗಾಗಿ ಸೇವಾಸಿಂಧು ಬದಲಾಗಿ ಈ ವಿಶೇಷ ವೆಬ್‌ಸೈಟ್‌ ಬಳಸಲು ಬೆಸ್ಕಾಂ ಸೂಚನೆ!

21 June, 2023 12:39 PM IST By: Kalmesh T
Gruha Jyoti scheme latest update: instruction to use this website instead of sevasindu

Gruha Jyoti scheme latest update: ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಹೊಸ ಅಪಡೇಟ್‌ ಬಂದಿದೆ. ಇದೀಗ ಸೇವಾಸಿಂಧು ವೆಬ್‌ಸೈಟ್‌ ಬದಲಾಗಿ ಈ ವಿಶೇಷವಾದ ವೆಬ್‌ಸೈಟ್‌ ಬಳಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತಿಳಿಸಿದೆ.

ಚುಣಾವಣೆಗೂ ಮುನ್ನ ಕಾಂಗ್ರೆಸ್‌ ಸರ್ಕಾರ ಪ್ರಮುಖವಾಗಿ 5 ಗ್ಯಾರಂಟಿಗಳನ್ನು ಕರ್ನಾಟಕದ ಜನರಿಗೆ ನೀಡುವುದಾಗಿ ಭರವಸೆ ನೀಡಿತ್ತು.

ಆ ಭರವಸೆಯ ಪ್ರಕಾರ ಇದೀಗ ರಾಜ್ಯದಲ್ಲಿ 200 ಯೂನಿಟ್‌ ವಿದ್ಯುತ್‌ ಉಚಿತವನ್ನು ಘೋಷಣೆ ಕೂಡ ಮಾಡಿದೆ.

ಇದರ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ತಿಳಿಸಿದ್ದು, ಇದೀಗ ರಾಜ್ಯದೆಲ್ಲೆಡೆ ಜನ ನೋಂದಣಿ ಆರಂಭಿಸಿದ್ದಾರೆ.

ಆದರೆ, ಇದೀಗ ಇದಕ್ಕೆ ಸಂಬಂಧಿಸಿದಂತೆ ಹೊಸದೊಂದು ಮಾಹಿತಿಯನ್ನು ಬೆಸ್ಕಾಂ ತಿಳಿಸಿದೆ. ಸರ್ವರ್‌ ಸಮಸ್ಯೆಯ ಕಾರಣದಿಂದ ಜನರು ಸೇವಾಸಿಂಧು ವೆಬ್‌ಸೈಟ್‌ ಬದಲಿಗೆ ಈ  https://sevasindhugs.karnataka.gov.in ವೆಬ್‌ ಸೈಟ್‌ ಬಳಸುವಂತೆ ತಿಳಿಸಿದೆ.

ಗೃಹ ಜ್ಯೋತಿ ಯೋಜನೆಗಾಗಿ ನೋಂದಾಯಿಸುವಾಗ, 'ಸೇವಾ ಸಿಂಧು' ಬದಲಾಗಿ, ಗೃಹ ಜ್ಯೋತಿ ನೋಂದಣಿಗಾಗಿ ನಿಯೋಜಿಸಲಾದ ವಿಶೇಷ ವೆಬ್‌ಸೈಟ್‌ಗೆ ಭೇಟಿ ನೀಡಿ: https://sevasindhugs.karnataka.gov.in

2 ದಿನದಲ್ಲಿ 1,61,958 ಗ್ರಾಹಕರ ನೋಂದಣಿ

 ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಯ ನೋಂದಣಿ ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸಂಜೆ 5.30 ಗಂಟೆಯವರೆಗೆ ಒಟ್ಟು 1,61,958 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ.

ನೋಂದಣಿಗೆ ಇವಿಷ್ಟು ಮಾಹಿತಿ ನೀಡಿ ಸಾಕು

ನೋಂದಣಿ ಪ್ರಕ್ರೀಯೆ ಅತ್ಯಂತ ಸರಳೀಕರಣವಾಗಿದ್ದು, ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ.

ಕೇವಲ ವಿದ್ಯುತ್ ಬಿಲ್‌'ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು.

6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ₹10,000 ವಿದ್ಯಾರ್ಥಿ ವೇತನ : ಅರ್ಜಿ ಸಲ್ಲಿಸುವುದು ಹೇಗೆ