ಈಗ ಸರ್ಕಾರಿ ನೌಕರರಿಗೆ ನಾಲ್ಕು ಭತ್ಯೆಗಳ ಲಾಭ ದೊರೆಯಲಿದ್ದು, ಯಾವುದ್ಯಾವುದು ಎಂದು ತಿಳಿಯಲು ಪೂರ್ತಿ ಓದಿರಿ.
ಇದನ್ನೂ ಓದಿರಿ:
ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಶುಭಸುದ್ದಿ; ಮೊದಲ ಸಲ ಇಷ್ಟೊಂದು ಪ್ರಮಾಣದಲ್ಲಿ DA ಹೆಚ್ಚಳ!
PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ. ನೀವೂ ಕೂಡ ಸರ್ಕಾರಿ ನೌಕರರಾಗಿದ್ದರೆ ತಪ್ಪದೇ ಓದಿರಿ. ಕೇಂದ್ರ ಸರ್ಕಾರ ಈಚೆಗಷ್ಟೇ ತುಟ್ಟಿಭತ್ಯೆಯನ್ನು ಶೇ.3 ರಷ್ಟು ಹೆಚ್ಚಿಸಿದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಶೇ.34ರಷ್ಟು ತುಟ್ಟಿಭತ್ಯೆ ದೊರೆಯುತ್ತಿದೆ. ಇತ್ತೀಚೆಗಷ್ಟೇ ಪ್ರಕಟಗೊಂಡ AICPI ಅಂಕಿ-ಅಂಶಗಳ ಪ್ರಕಾರ, ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಮತ್ತೆ ಶೇ.3 ರಿಂದ ಶೇ.5ರಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನು ಹೊರತುಪಡಿಸಿ ಇತರೆ ಕೆಲ ಭತ್ಯೆಗಳು ಕೂಡ ಹೆಚ್ಚಾಗುತ್ತಿವೆ ಎನ್ನಲಾಗಿದೆ. ಕೇಂದ್ರ ಸರ್ಕಾರಿ ನೌಕರರ ಇತರೆ 4 ಭತ್ಯೆಗಳ ಹೆಚ್ಚಳಕ್ಕೆ ಚಿಂತನೆ ನಡೆಸಲಾಗುತ್ತಿದೆ. ಒಂದು ವೇಳೆ ಈ ಭತ್ಯೆಗಳ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆಯ ಮೇಲೆ ಸರ್ಕಾರ ಮುದ್ರೆ ಒತ್ತಿದರೆ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ.
ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲಾಗಿದೆ. ಇದೀಗ ಮತ್ತೆ ನೌಕರರ ತುಟ್ಟಿಭತ್ಯೆಯಲ್ಲಿ ಏರಿಕೆಯಾಗುತ್ತಿದೆ. ಇತ್ತೀಚೆಗಷ್ಟೇ ಪ್ರಕಟಗೊಂಡ AICPI ಅಂಕಿ ಅಂಶಗಳನ್ನು ಗಮನಿಸಿದರೆ, ಮತ್ತೊಮ್ಮೆ ತುಟ್ಟಿ ಭತ್ಯೆ ಶೇ.3 ರಿಂದ ಶೇ.5 ರಷ್ಟು ಹೆಚ್ಚಾಗುವುದು ಸ್ಪಷ್ಟವಾಗುತ್ತಿದೆ.
7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!
EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!
ಈ ತುಟ್ಟಿಭತ್ಯೆ ಏರಿಕೆಯಾದರೆ, ನೌಕರರ ಟ್ರಾವೆಲಿಂಗ್ ಅಲೌನ್ಸ್ ಹಾಗೂ ಸಿಟಿ ಅಲೌನ್ಸ್ ನಲ್ಲಿಯೂ ಕೂಡ ಹೆಚ್ಚಳ ಉಂಟಾಗಲಿದೆ. ಏಕೆಂದರೆ ಡಿಎ ಹೆಚ್ಚಳದ ಬಳಿಕ ಟಿಎ ಹಾಗೂ ಸಿಎ ಹೆಚ್ಚಾಗುವುದು ಬಹುತೇಕ ಖಚಿತವಾಗುತ್ತದೆ.
ಡಿಎ ಹೆಚ್ಚಳದ ನಂತರ ಪ್ರಾವಿಡೆಂಟ್ ಫಂಡ್ (Provident Fund) ಹಾಗೂ ಗ್ರ್ಯಾಚುಟಿಗಳ ಹೆಚ್ಚಳ ಕೂಡ ಬಹುತೇಕ ಖಚಿತವಾಗುತ್ತದೆ. ಏಕೆಂದರೆ, ಕೇಂದ್ರ ಸರ್ಕಾರಿ ನೌಕರರ ಮಾಸಿಕ ಪಿಎಫ್ ಹಾಗೂ ಗ್ರ್ಯಾಚುಟಿಗಳು ಅವರ ಒಟ್ಟು ಮೂಲ ವೇತನ ಮತ್ತು ಡಿಎಯನ್ನು ಆಧರಿಸಿರುತ್ತದೆ.
ಹೀಗಿರುವಾಗ ತುಟ್ಟಿಭತ್ಯೆ ಹೆಚ್ಚಳದ ಬಳಿಕ ಪಿಎಫ್ ಹಾಗೂ ಗ್ರ್ಯಾಚುಟಿ ಹೆಚ್ಚಳ ಬಹುತೇಕ ಖಚಿತವಾಗಿದೆ. ಜುಲೈ ತಿಂಗಳಿಗೂ ಮುನ್ನವೇ ಇವುಗಳು ಹೆಚ್ಚಾಗಲಿವೆ ಎನ್ನಲಾಗಿದೆ.
ಇನ್ನೊಂದೆಡೆ ಕೇಂದ್ರ ಸರ್ಕಾರಿ ನೌಕರರ ಸಂಘಟನೆ ಸರ್ಕಾರದ ಮೇಲೆ ಬಾಕಿ ಉಳಿದಿರುವ 18 ತಿಂಗಳ ಡಿಎ ಪಾವತಿಯ ಕುರಿತು ಕೂಡ ಒತ್ತಡವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ.
ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?
ಸಾವಯವ ಗೊಬ್ಬರ ಖರೀದಿಸುವ ರೈತರಿಗೆ ಭರ್ಜರಿ ರಿಯಾಯಿತಿ: ಈ ಯೋಜನೆಯಡಿ ₹227.40 ಲಕ್ಷ ಅನುದಾನ ಮೀಸಲು!
ವೇತನ ಹಾಗೂ ಭತ್ಯೆಗಳು ಸರ್ಕಾರಿ ನೌಕರರ ಹಕ್ಕಾಗಿವೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂದು ನೌಕರರು ವಾದಿಸಿದ್ದಾರೆ. ಹೀಗಾಗಿ 18 ತಿಂಗಳ ಅರಿಯರ್ ಲಾಭ ಕೂಡ ಸಿಗುವ ನಿರೀಕ್ಷೆ ಇದೆ.
ಡಿಎ ಹೆಚ್ಚಾಗುವುದರಿಂದ ನೌಕರರ ಮನೆ ಬಾಡಿಗೆ ಭತ್ಯೆ ಮತ್ತು ಟ್ರಾವೆಲ್ ಅಲೌನ್ಸ್ ಕೂಡ ಹೆಚ್ಚಾಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಒಟ್ಟು ನಾಲ್ಕು ಭತ್ಯೆಗಳಲ್ಲಿ ಹೆಚ್ಚಳದ ಲಾಭ ಸಿಗಲಿದೆ.
ಕೇಂದ್ರ ಸರ್ಕಾರಿ ನೌಕರರ ಡಿಎ ಕಳೆದ ಒಂಬತ್ತು ತಿಂಗಳಲ್ಲಿ ಡಬಲ್ ಆಗಿದೆ. ಇದೀಗ ಜುಲೈ ತಿಂಗಳಿನಲ್ಲಿ ಮತ್ತೆ ಡಿಎ ಏರಿಕೆಯಾಗುವ ಸಾಧ್ಯತೆ ಇದೆ.