ಇನ್ನೂ ಮುಂದೆ ಕರ್ನಾಟಕದ ರೈತರು ನಿಮ್ಮ ಪಶುಗಳಿಗೆ ಏನಾದರೂ ಆರೋಗ್ಯ ಸಮಸ್ಯೆ ಕಾಡಿದರೆ ಟೆನ್ಷನ್ ತೆಗೆದುಕೊಳ್ಳಬೇಕಿಲ್ಲ. ಈಗ ಸರ್ಕಾರದ ಪಶು ವೈದ್ಯರು ಅಂಬುಲೆನ್ಸ್ ಸಮೇತ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
ಹೌದು! ಇಲ್ಲಿದೆ ಕರ್ನಾಟಕ ರಾಜ್ಯದ ಎಲ್ಲ ರೈತ ಬಾಂಧವರಿಗೆ ಗುಡ್ ನ್ಯೂಸ್! ಕರ್ನಾಟಕ ಸರ್ಕಾರದಿಂದ ಪಶು ಅಂಬುಲೆನ್ಸ್ ಸೇವೆಯನ್ನು ಆರಂಭಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದ್ದು, ಇದೆ ಮೇ 7ರಂದು ಚಾಲನೆಯನ್ನು ಕೂಡ ನೀಡಲಾಗುವುದು ಎಂದು ಮಾಹಿತಿ ಇದೆ.
ಶುಕ್ರವಾರದಂದು ವಿಕಾಸಸೌಧದಲ್ಲಿ ಸಂಚಾರಿ ಪಶು ಅಂಬುಲೆನ್ಸ್ ಅನ್ನು ಪರೀಕ್ಷಿಸಿದ ಬಳಿಕ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಈ ಮಾಹಿತಿ ನೀಡಿದ್ದು, ಮೇ 7ರಂದು ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ ರೂಪಾಲ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಆಂಬುಲೆನ್ಸ್ ಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿರಿ:
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಕೃಷಿ ಕ್ಷೇತ್ರವೂ ಈಗಾಗಲೇ ಬಹಳಷ್ಟು ಸಮಸ್ಯೆಗಳ ನಡುವೆಯೂ ನಮಗೆಲ್ಲ ಅನ್ನ ನೀಡುತ್ತಿದೆ. ಇಂತಹ ಅನ್ನದಾತರ ಅಳಲಿಗೆ ಸರ್ಕಾರ ಹೀಗೆ ಸಿಹಿ ಸುದ್ದಿಯ ಮೂಲಕ ಸ್ಪಂದನೆ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಇದರಿಂದ ಜಾನುವಾರುಗಳನ್ನು ಸಾಕುತ್ತಿರುವ ರೈತರಿಗೆ ಅನುಕೂಲವಾಗಲಿದೆ.
ರೈತರು ಕೃಷಿಯೊಂದಿಗೆ ಉಪಕಸುಬಾಗಿ ನಡೆಸುವ ಪಶು, ದನ ಕರು, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಮೀನು ಸಾಕಾಣಿಕೆಗಳಂತಹ ಸಮಯದಲ್ಲಿ ರೋಗ ರುಜಿನಗಳು ಬಂದು ಭಯಗೊಳಿಸುವುದು ನೋಡಿದ್ದೇವೆ. ಈಗ ಇಂತಹ ಸಮಸ್ಯೆಗಳಿಗೆ ಇನ್ನೂ ಶೀಘ್ರವಾಗಿ ರೈತರು ಪರಿಹಾರ ಅಥವಾ ಚಿಕಿತ್ಸೆಯನ್ನು ಕೊಡಿಸಬಹುದು.
ಏನೇನು ಇರಬಹುದು!
ತುರ್ತು ಸಮಯದಲ್ಲಿ ಈ ಅಂಬುಲೆನ್ಸ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು. ಈ ಮೂಲಕ ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ ಬರಲಿದೆ. ಇದರಿಂದ ಪಶು ಸಂಗೋಪನೆ ಮಾಡುವವರಿಗೆ ಬಹಳ ಅನುಕೂಲವಾಗಲಿದೆ. ಅತ್ಯಾಧ್ಯುನಿಕ, ಸುಸಜ್ಜಿತವಾದ ಈ ವಾಹನದಲ್ಲಿ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್,ತುರ್ತು ಚಿಕಿತ್ಸಾ ಘಟಕ, ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳು ಇರಲಿವೆ ಎಂದು ಅಂದಾಜಿಸಲಾಗಿದೆ.
50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಕರ್ನಾಟಕ ಸರ್ಕಾರದ ಯೋಜನೆಯ ಪ್ರಕಾರ ಈ ಪಶು ಅಂಬುಲೆನ್ಸ್ ರೈತರ ಮನೆ ಬಾಗಿಲಿಗೆ ತೆರಳಿ ಅವರು ಸಾಕಿದ ಪಶು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಉಪಚಾರ ಮಾಡಿ ಬರುತ್ತಾರೆ. ಇದರಿಂದ ಜಾನುವಾರುಗಳನ್ನು ಸಾಕುತ್ತಿರುವ ರೈತರಿಗೆ ಅನುಕೂಲವಾಗಲಿದೆ
275 ಪಶು ಅಂಬುಲೆನ್ಸ್ ಬಿಡುಗಡೆಗೆ ಯೋಚನೆ!
ಒಟ್ಟು 275 ಪಶು ಅಂಬುಲೆನ್ಸ್ ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು ಈ ಪೈಕಿ ಮೇ 7ರಂದು 70 ಅಂಬುಲೆನ್ಸ್ ಗಳನ್ನು ಜಾನುವಾರಗಳ ಸೇವೆಗೆ ಲೋಕಾರ್ಪಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದ ಜಾನುವಾರುಗಳನ್ನು ಸಾಕುತ್ತಿರುವ ರೈತರಿಗೆ ಅನುಕೂಲವಾಗಲಿದೆ ಎಂದರು.
ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?