ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾತ್ರ UTS ಆಪ್ ನ ಬಳಕೆಯ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆಯುವ ಅವಕಾಶದ ಜೊತೆಗೆ ಇನ್ನೂ ಮುಂದೆ ಕನ್ನಡದಲ್ಲೂ ರೈಲ್ವೆ ಸೇವೆಗಳನ್ನು ಪಡೆಯಬಹುದು. ಇಲ್ಲಿದೆ ಈ ಕುರಿತಾದ ವಿವರ
ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ಮಾರ್ಚ್ 2 ಕೊನೆ ದಿನ?
ಈ ಮೊದಲು ಪ್ರಯಾಣಿಕರು ಕಾಯ್ದಿರಿಸದ ರೈಲ್ವೆ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದನ್ನು ತಪ್ಪಿಸಿಲು ರೈಲ್ವೆ ಇಲಾಖೆ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾತ್ರ UTS ಆಪ್ ನ ಬಳಕೆಯ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆಯುವ ಅವಕಾಶ ಕಲ್ಪಿಸಿತ್ತು.
ಇದೀಗ UTS ಆಪ್ ಪ್ರಾದೇಶಿಕ ಕನ್ನಡ ಭಾಷೆಯಲ್ಲಿ ಸಹ ಬಳಕೆಗೆ ಅವಕಾಶ ನೀಡಿದೆ. ಪ್ರಯಾಣಿಕರು ತಾವು ಇರುವ ಸ್ಥಳದಿಂದ 20 ಕಿ.ಮೀ ವ್ಯಾಪ್ತಿಯ ಯಾವುದೇ ನಿಲ್ದಾಣದಿಂದ ಪ್ರಯಾಣಿಸಲು ಈ UTS ಆಪ್ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆದುಕೊಳ್ಳಬಹುದು.
ಜ.24ರಂದು ಉದ್ಘಾಟನೆಗೊಳ್ಳಲಿದೆ ದೇಶದ ಮೊದಲ ಎಫ್‌ಪಿಒ ಕಾಲ್ ಸೆಂಟರ್! ಏನಿದರ ವಿಶೇಷತೆ ಗೊತ್ತೆ?
ಪ್ರಯಾಣಿಕರು ಈ UTS ಆಪ್ ತಮ್ಮ ಮೊಬೈಲ್ ಗೆ ಗೂಗಲ್ ಪ್ಲೇ-ಸೋರ್, ವಿಂಡೋಸ್ ಸೋರ್ ಹಾಗೂ ಐಪೋನ್ ಪೋನ್ ಬಳಕೆದಾರರು ಆಫಲ್ ಸ್ಟೇರ್ ಮೂಲಕ ಡೌನಲೋಡ್ ಮಾಡಿಕೊಳ್ಳಬಹುದು.
ಲಿಂಕ್: https://play.google.com/store/apps/details?id=com.cris.utsmobile&pli=1
ಶೇ. 3 ರಷ್ಟು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೋನಸ್ ನೀಡುತ್ತದೆ. ಪ್ರಯಾಣಿಕರು UTS ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕ್ಕಿಂಗ್ ಟಿಕೆಟ್, ತ್ವರಿತ ಬುಕ್ಕಿಂಗ್ ಟಿಕೆಟ್, ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಸೀಜನ್ ಟಿಕೆಟ್ ಬುಕ್ಕಿಂಗ್, ಕ್ಯ-ಆರ್ ಬುಕ್ಕಿಂಗ್ ಜೊತೆಗೆ ಟಿಕೆಟ್ ರದ್ದು ಗೊಳಿಸುವುದು, ಟಿಕೆಟ್ ನ ಸದ್ಯದ ಮಾಹಿತಿ ತಿಳಿಯುವುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ಈ UTS ಆಪ್ ಒಳಗೊಂಡಿರುತ್ತದೆ.
"ರೈತ ಶಕ್ತಿ ಯೋಜನೆ" ಗೆ ಈ ತಿಂಗಳಾಂತ್ಯಕ್ಕೆ ಸಿಎಂ ಚಾಲನೆ: ಡಿ.ಬಿ.ಟಿ ಮೂಲಕ ರೈತರಿಗೆ ಡೀಸೆಲ್ ಸಹಾಯಧನ!
ಸದ್ಯ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇಲ್ಲಿಯವರಿಗೆ 6.5 ಲಕ್ಷ ಜನರು UTS ಆಪ್ ಬಳಕೆ ಮಾಡುತ್ತಿದ್ದಾರೆ. ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ಟಿಕೆಟ್‌ಗಳ ವಿವರಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸುವುದು ಸೇರಿದಂತೆ ಕನ್ನಡ ಭಾಷಾ ಹೋರಾಟಗಾರರು ಸಾಕಷ್ಟು ವಿಚಾರಗಳಲ್ಲಿ ಕನ್ನಡೀಕರಣ ಆಗಬೇಕು ಎಂದು ಒತ್ತಾಯಿಸುತ್ತಿದ್ದರು.
ಕರ್ನಾಟಕವು ಭಾರತೀಯ ರೈಲ್ವೆಗೆ ಬಹಳ ಮುಖ್ಯವಾದ ರಾಜ್ಯವಾಗಿದೆ ಏಕೆಂದರೆ ಇದು ಶಿಕ್ಷಣ, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕಾಗಿ ದೇಶದಾದ್ಯಂತ ಅನೇಕ ಜನರನ್ನು ಸೆಳೆಯುತ್ತದೆ.