News

ಮಹಿಳೆಯರಿಗೆ ಸಿಹಿಸುದ್ದಿ: ಸ್ತೀಶಕ್ತಿ ಸಂಘಗಳಿಗೆ ಒಟ್ಟು 5 ಲಕ್ಷ ರೂ. ಆರ್ಥಿಕ ನೆರವು!

13 March, 2023 8:00 PM IST By: Kalmesh T
Good news for women: A total of Rs 5 lakhs for Stree Shakti Sanghs Financial aid!

ಸ್ತ್ರೀ ಸಾಮರ್ಥ್ಯ ಯೋಜನೆಯಡಿ 10 ಸಾವಿರ ಮಹಿಳಾ ಸಂಘಗಳಿಗೆ ತಲಾ  1 ಲಕ್ಷದಂತೆ ಡಿಬಿಟಿ ಮಾಡಲಾಗಿದ್ದು, ಗ್ರಾಮದ ತಲಾ ಎರಡು ಸ್ತೀಶಕ್ತಿ ಸಂಘಗಳಿಗೆ ಒಟ್ಟು 5 ಲಕ್ಷ ರೂ. ಆರ್ಥಿಕ ನೆರವನ್ನು  ನೀಡಲಾಗುತ್ತದೆ.

Dearness allowance: ಸರ್ಕಾರಿ ನೌಕರರೇ ಗಮನಿಸಿ; ಶೀಘ್ರದಲ್ಲೇ 4% ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ!

ಗದಗ ಜಿಲ್ಲೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದ 8092 ಕುಟುಂಬಗಳಿಗೆ  ಹಾಗೂ ಇಡೀ ರಾಜ್ಯದಲ್ಲಿ ಸುಮಾರು 3 ಲಕ್ಷ ಕುಟುಂಬಗಳಿಗೆ ಬೆಳಕು ನೀಡುವ ಕಾರ್ಯಕ್ರಮವನ್ನು ಮಾಡಲಾಗಿದೆ.

ಸ್ತ್ರೀ ಸಾಮರ್ಥ್ಯ ಯೋಜನೆಯಡಿ 10 ಸಾವಿರ ಮಹಿಳಾ ಸಂಘಗಳಿಗೆ ತಲಾ  1 ಲಕ್ಷದಂತೆ ಡಿಬಿಟಿ ಮಾಡಲಾಗಿದ್ದು, ಗ್ರಾಮದ ತಲಾ ಎರಡು ಸ್ತೀಶಕ್ತಿ ಸಂಘಗಳಿಗೆ ಒಟ್ಟು 5 ಲಕ್ಷ ರೂ. ಆರ್ಥಿಕ ನೆರವನ್ನು  ನೀಡಲಾಗುತ್ತದೆ. 

ಎರಡನೇ ಹಂತದ ಯೋಜನೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.  ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನೂ ಸರ್ಕಾರ ಜಾರಿಗೊಳಿಸಿದೆ.

ಮಹಿಳೆಯರು  ಹಾಗೂ ಯುವಕರ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕನ್ನು ಬದುಕಬೇಕೆನ್ನುವುದು ಸರ್ಕಾರದ ಆಶಯ. ಕೃಷಿ ಕಾರ್ಮಿಕ ಮಹಿಳೆಯರಿಗೆ 1000 ರೂ. ಆರ್ಥಿಕ ಸಹಾಯ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.

ಹವ್ಯಾಸವನ್ನೇ ಉದ್ಯಮವಾಗಿಸಿಕೊಂಡ 21ರ ಯುವತಿ; ತಿಂಗಳಿಗೆ 40ರಿಂದ 45 ಸಾವಿರ ಆದಾಯ!

ವಿಳಂಬರಹಿತ ಪ್ರಗತಿ ಸಾಧಿಸುವುದೇ  ಸರ್ಕಾರದ ಗುರಿ

ಜನ ಮೂಲ ಸೌಲಭ್ಯಗಳನ್ನು ನೀಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ.  ಜಗತ್ತಿನ  ಯಾವುದೇ ಶಕ್ತಿ ಬಂದರು ಜನರಿಗೆ ನೀರು ಕೊಡುವುದನ್ನು ತಡೆಯಲು  ಸಾಧ್ಯವಿಲ್ಲ.

ಜನ  ಶಕ್ತಿ ಮುಂದೆ ಯಾವುದೇ ಶಕ್ತಿ ನಡೆಯುವುದಿಲ್ಲ. ಯಾವಾಗಲೂ ಜನರ ಇಚ್ಛಾಶಕ್ತಿ ಗೆದ್ದಿದೆ.  ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ.

ಸಮಯ ಮತ್ತು ಅಭಿವೃದ್ಧಿ ಎರಡೂ ಒಟ್ಟಿಗೆ ಸಾಗಬೇಕು. ಕಾಲಮಿತಿಯಲ್ಲೇ ಕೆಲಸಗಳು ಆಗಬೇಕು.   ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಳಂಬರಹಿತ ಪ್ರಗತಿ ಸಾಧಿಸುವುದೇ ನಮ್ಮ ಸರ್ಕಾರದ ಗುರಿ ಎಂದರು.

150 ಅಪರೂಪದ ಸಿರಿಧಾನ್ಯಗಳ Seed Bank ನಿರ್ಮಿಸಿದ ಬುಡಕಟ್ಟು ಮಹಿಳೆ ಲಹರಿಬಾಯಿ

2000 ಶಾಲಾ ಬಸ್ ಸೇವೆ :

ಜನರ ಸಮಸ್ಯೆಗಳನ್ನು ನಿವಾರಿಸುವ ಸ್ಪಂದನಾಶೀಲ ಸರ್ಕಾರ ನಮ್ಮದಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸಿಸ್ ಸೈಕಲ್ ಹೆಚ್ಚಳ, ಕಿಮೋಥೆರಪಿ ಕೇಂದ್ರ ಹೆಚ್ಚಿಸಲಾಗಿದೆ.

ಕಿವುಡರಿಗೆ ಶ್ರವಣ ಸಾಧನಕ್ಕೆ ಸಹಾಯಕ್ಕೆ 500 ಕೋಟಿ ರೂ. ನಿಗದಿಪಡಿಸಿದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶಾಲೆಗೆ ತೆರಳಲು 2000 ಶಾಲಾ ಬಸ್ ಸೇವೆಯನ್ನು ಪ್ರಾರಂಭಿಸಲಾಗುವುದು.

ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುವುದು. ಐಟಿಐಯಲ್ಲಿ ಪಿಯುಸಿಯ ಅನುತೀರ್ಣರಾದ ಯುವಕರಿಗೆ ತರಬೇತಿ ಹಾಗೂ 6 ತಿಂಗಳವರೆಗೆ 1500 ರೂ. ಭತ್ಯೆ ನೀಡಿ ಉದ್ಯೋಗವನ್ನು ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

ದುಡಿಯುವ ವರ್ಗಕ್ಕೆ ಬೆಂಬಲ ನೀಡುವುದು ಸರ್ಕಾರದ ಆದ್ಯತೆಯಾಗಿದೆ. ನಾಡನ್ನು ಕಟ್ಟುವುದು ದುಡಿಯುವ ವರ್ಗ ಎಂದರು.

ಹಾಸ್ಟೆಲ್ ಗಳ ಸಾಮರ್ಥ್ಯ ಹೆಚ್ಚಳ :

250 ಕೋಟಿ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗದ ಹಾಸ್ಟೆಲ್ ಗಳ ಸಾಮರ್ಥ್ಯವನ್ನು ಹೆಚ್ಚಿಸಿ, 30 ಸಾವಿರ ಓಬಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ  1 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ನೇಕಾರರಿಗೆ ವಿದ್ಯುತ್ ಸಬ್ಸಿಡಿ,  2 ಲಕ್ಷದವರೆಗೆ ಸಾಲಸೌಲಭ್ಯ, ಸಹಾಯಧನ, 350 ಕೋಟಿ ರೂ. ವೆಚ್ಚದಲ್ಲಿ ಕುರಿಗಾಹಿಗಳ ಸಂಘಕ್ಕೆ 20 ಕುರಿ 1 ಮೇಕೆ ನೀಡಲಾಗುತ್ತಿದೆ.

ಎಸ್ ಸಿ ಎಸ್ ಟಿ ಮೀಸಲಾತಿಯನ್ನು ಹೆಚ್ಚಿಸಲಾಗಿದೆ.  ಸಂವಿಧಾನದ 9 ನೇ ಶೆಡ್ಯೂಲ್ ಗೆ ಈ ಹೆಚ್ಚಳವನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಸರ್ಕಾರದ ಸೌಲಭ್ಯಗಳ ಬಗ್ಗೆ ಬೆಳಕು ಚೆಲ್ಲಿ , ಇನ್ನಷ್ಟು ಜನರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕೆನ್ನುವ ಉದ್ದೇಶದಿಂದ ಫಲಾನುಭವಿಗಳ ಸಮ್ಮೇಳನವನ್ನು ಏರ್ಪಡಿಸಲಾಗುತ್ತಿದೆ ಎಂದರು.