News

Tata Group recruitment: ಟಾಟಾ ಗ್ರುಪ್‌ನಿಂದ ಸಿಹಿಸುದ್ದಿ: ಬರೋಬ್ಬರಿ 45,000 ಹುದ್ದೆಗಳ ನೇಮಕಕ್ಕೆ ತಯಾರಿ!

05 November, 2022 10:21 AM IST By: Kalmesh T
Good news for the youth from Tata Group: recruitment of 45,000 posts!

ಔದ್ಯೋಗಿಕ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಟಾಟಾ ಗ್ರುಪ್‌ (Tata Group) ಸಂಸ್ಥೆಯೂ ಯುವಜನರಿಗೆ ಸಿಹಿಸುದ್ದಿಯೊಂದನ್ನು ನೀಡುತ್ತಿದೆ. ಬರೋಬ್ಬರಿ 45,000 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

Tata Group recruitment: ಟಾಟಾ ಸಂಸ್ಥೆಯು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಟಾಟಾ ಗ್ರೂಪ್‌ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ (Job opportunity) ನೇಮಕಕ್ಕೆ ಮುಂದಾಗಿದೆ. 

ಹೊಸೂರಿನಲ್ಲಿರುವ ಐ-ಪೋನ್ (I Phone) ಬಿಡಿ ಭಾಗಗಳ ಉತ್ಪಾದನೆ ಘಟಕಕ್ಕೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಟಾಟಾ ಗ್ರೂಪ್‌ನ ಹೊಸೂರು ಘಟಕಕ್ಕೆ 45 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಸುದ್ದಿ ತಿಳಿದು ಬಂದಿದೆ.

Delhi Air Pollution: ಪಂಜಾಬ್‌ ಕಳೆ ಸುಡುವಿಕೆ ದೆಹಲಿ ವಾಯು ಮಾಲಿನ್ಯ ತೀವ್ರ ಏರಿಕೆ! ಶಾಲೆ ಬಂದ್‌, ಮನೆಯಿಂದ ಕೆಲಸ ಮಾಡಲು ಸೂಚನೆ..

ಟಾಟಾ (TATA) ಮತ್ತು ಆಪಲ್‌(Apple) ಸಂಸ್ಥೆಗಳು ಜಂಟಿಯಾಗಿ ಐ-ಫೋನ್ ಘಟಕದ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿವೆ. 

ಮುಂಬರುವ 18 ರಿಂದ 24 ತಿಂಗಳುಗಳ ನಡುವೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ನೇಮಕಾತಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೂ ಆದ್ಯತೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಈ ಕಂಪನಿಯಲ್ಲಿ ಅಂದಾಜು 10 ಸಾವಿರ (Job opportunity) ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಇವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ ಎನ್ನುವುದು ಗಮನೀಯ ಅಂಶ. 

ಇದನ್ನೂ ಓದಿರಿ: Employee Provident Fund: ಸರ್ಕಾರಿ ನೌಕರರಿಗೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು!

ಹೀಗಾಗಿ ಮುಂದಿನ ನೇಮಕಾತಿಯಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಸುಮಾರು 500 ಎಕರೆ ಪ್ರದೇಶದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ.

ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಸೂರಿನಲ್ಲಿ ತಮಿಳುನಾಡು ಸರ್ಕಾರದಿಂದ ಭೂಮಿ ಪಡೆದು ಟಾಟಾ ಗ್ರೂಪ್ ಘಟಕ ನಿರ್ಮಾಣ ಮಾಡಿದೆ.

ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕನಿಷ್ಠ 16 ಸಾವಿರ ವೇತನ ನಿಗದಿ ಮಾಡುವ ಸಾಧ್ಯತೆ ಇದೆ. ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆಹಾರ ಮತ್ತು ಆಶ್ರಯವನ್ನು ಕ್ಯಾಂಪಸ್‌ನಲ್ಲಿಯೇ ಕಲ್ಪಿಸಲಾಗುತ್ತದೆ.

ಹೊಸ ತಳಿಯ ಕಬ್ಬು ಯಶಸ್ವಿ ಪ್ರಯೋಗ: ಕಡಿಮೆ ವೆಚ್ಚದಲ್ಲಿ 1 ಎಕರೆಗೆ 55 ಟನ್‌ ಇಳುವರಿ!

ಉದ್ಯೋಗಕ್ಕೆ ನೇಮಕವಾದ ಮಹಿಳೆಯರಿಗೆ ಟಾಟಾ ಗ್ರೂಪ್ ತರಬೇತಿಯನ್ನು ನೀಡಲಿದೆ. ವಿಸ್ಟ್ರಾನ್ ಜೊತೆ ಟಾಟಾ ಗ್ರೂಪ್‌ನೊಂದಿಗೆ ಚರ್ಚೆ ನಡೆಸಿದ್ದು, ಇನ್ನಷ್ಟು ವ್ಯವಸ್ಥೆ ಲಭ್ಯವಾಗುವ ಸಾಧ್ಯತೆಯನ್ನೂ ನಿರೀಕ್ಷಿಸಲಾಗಿದೆ.

ಚೀನಾ ಮತ್ತು ಅಮೆರಿಕ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸೃಷ್ಟಿ ಆಗಿರುವ ಸಮಸ್ಯೆಗಳು ಸೃಷ್ಟಿ ಆಗಿರುವ ಹಿನ್ನೆಲೆಯಲ್ಲಿಹಲವು ಕಂಪನಿಗಳು ಟಾಟಾ, ಆಪಲ್ ಕಡೆಗೆ ನೋಡುತ್ತಿದ್ದು, ಹೊಸ ಒಪ್ಪಂದಗಳು ಆಗುವ ಸಾಧ್ಯತೆ ಇದೆ.   

ಜನಸಾಮಾನ್ಯರಿಗೆ ಮತ್ತೊಂದು ಹೊರೆ; ಈರುಳ್ಳಿ ಉತ್ಪಾದನೆಯಲ್ಲಿ ಕುಸಿತ, ಬೆಲೆ ಹೆಚ್ಚಳ ಸಾಧ್ಯತೆ-CRISIL report!

ಟಾಟಾ ಗ್ರುಪ್‌ನ ಬಗ್ಗೆ ಒಂದಷ್ಟು ಮಾಹಿತಿ

ಟಾಟಾ ಮೋಟರ್ಸ್ ಇದು ಟಾಟಾ ಸಮೂಹದ ಬಹುರಾಷ್ಟ್ರೀಯ ಸಾಗಾಣಿಕೆ ವಾಹನ ಮತ್ತು ಪ್ರಯಾಣಿಕರ ವಾಹನ ತಯಾರಿಕೆಯ ಸಂಸ್ಥೆ.

ಈ ಸಂಸ್ಥೆಯ ಮುಖ್ಯ ಕಚೇರಿ ಮುಂಬಯಿಯಲ್ಲಿದೆ. ಮುಂಚೆ ಈ ಕಂಪನಿಯ ಹೆಸರು ಟೆಲ್ಕೋ (ಟಾಟಾ ಇಂಜಿನಿಯರಿಂಗ್ ಮತ್ತು ಲೋಕೊಮೋಟಿವ್ ಕಂಪನಿ) ಎಂಬುದಾಗಿ ಇತ್ತು. ಇದು ಜಗತ್ತಿನ ೨೦ನೇಯ ಅತಿ ದೊಡ್ಡ ಆಟೋಮೊಬೈಲ್ ಕ್ಷೇತ್ರದ ಉದ್ಯಮವಾಗಿದೆ.

ಟಾಟಾ ಮೋಟಾರ್ಸ್ ಲಿಮಿಟೆಡ್ ಮುಂಬಯಿ, ಮಹಾರಾಷ್ಟ್ರ, ಭಾರತ ಮತ್ತು ಟಾಟಾ ಗ್ರೂಪ್ನ ಒಂದು ಅಂಗಸಂಸ್ಥೆ ಕೇಂದ್ರ ಕಾರ್ಯಾಲಯವು ಭಾರತೀಯ ಬಹುರಾಷ್ಟ್ರೀಯ ವಾಹನ ತಯಾರಿಕಾ ಕಂಪನಿಯಾಗಿದೆ.

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಮಳೆ ಸಾಧ್ಯತೆ; ನವೆಂಬರ್‌ 6ರಿಂದ ಚಳಿ ಆರಂಭದ ಮೂನ್ಸೂಚನೆ!

ಇದರ ಉತ್ಪನ್ನಗಳು ಪ್ರಯಾಣಿಕ ಕಾರುಗಳು, ಟ್ರಕ್ಗಳು​​, ವ್ಯಾನುಗಳು, ತರಬೇತುದಾರರು, ಬಸ್, ನಿರ್ಮಾಣ ಉಪಕರಣಗಳನ್ನು ಮತ್ತು ಮಿಲಿಟರಿ ವಾಹನಗಳು ಸೇರಿವೆ.

ಇದು ಪರಿಮಾಣದ ವಿಶ್ವದ ಹದಿನೇಳನೇ ದೊಡ್ಡ ಮೋಟಾರು ವಾಹನ ತಯಾರಿಕಾ ಕಂಪನಿ, ನಾಲ್ಕನೇ ದೊಡ್ಡ ಟ್ರಕ್ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ಬಸ್ ತಯಾರಿಕಾ.

ಟಾಟಾ ಮೋಟಾರ್ಸ್ ವಾಹನ ತಯಾರಿಕಾ ಮತ್ತು ಜಮ್ಶೆಡ್ಪುರ, ಪಂತನಗರ್, ಲಕ್ನೋ ಸಾನಂದ್, ಧಾರವಾಡ ಮತ್ತು ಪುಣೆ ಭಾರತದಲ್ಲಿ, ಹಾಗೂ ಅರ್ಜೆಂಟೀನಾ ರಲ್ಲಿ, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಜೋಡಣಾ ಘಟಕಗಳಿಗೆ ಹೊಂದಿದೆ.

2022-23 ಹಿಂಗಾರು ಋತುವಿನ ರಸಗೊಬ್ಬರಗಳಿಗೆ ₹51,875 ಕೋಟಿ ಸಬ್ಸಿಡಿಗೆ ಕ್ಯಾಬಿನೆಟ್ ಅನುಮೋದನೆ!

ಇದು ಪುಣೆ, ಜಮ್ಶೆಡ್ಪುರ, ಲಕ್ನೋ ಮತ್ತು ಧಾರವಾಡ, ಭಾರತದ ಮತ್ತು ದಕ್ಷಿಣ ಕೊರಿಯಾ, ಸ್ಪೇನ್, ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು.

ಟಾಟಾ ಪ್ರಧಾನ ಅಂಗಸಂಸ್ಥೆಗಳು ಬ್ರಿಟಿಷ್ ಪ್ರೀಮಿಯಂ ಕಾರು ತಯಾರಕ ಜಗ್ವಾರ್ ಲ್ಯಾಂಡ್ ರೋವರ್ (ಜಗ್ವಾರ್ ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್ ಕಾರುಗಳ ತಯಾರಕ) ಮತ್ತು ದಕ್ಷಿಣ ಕೊರಿಯಾದ ವಾಣಿಜ್ಯ ವಾಹನ ಉತ್ಪಾದನೆಯ ಟಾಟಾ ಡೇವೂ ಸೇರಿವೆ.

ಟಾಟಾ ಮೋಟಾರ್ಸ್ Marcopolo ಎಸ್ಎ (ಟಾಟಾ Marcopolo), ಹಿಟಾಚಿ (ಟಾಟಾ ಹಿಟಾಚಿ ನಿರ್ಮಾಣ ಮೆಷಿನರಿ) ಜೊತೆ ಜಂಟಿ ಉತ್ಪಾದನಾ ಒಂದು ನಿರ್ಮಾಣ ಉಪಕರಣಗಳನ್ನು ಜೊತೆ ಜಂಟಿ ಉತ್ಪಾದನಾ ಒಂದು ಬಸ್ ಮತ್ತು ವಾಹನ ಭಾಗಗಳು ಮತ್ತು ಫಿಯೆಟ್ ಹಾಗೂ ಟಾಟಾ ಬ್ರಾಂಡ್ ವಾಹನಗಳು ತಯಾರಿಸುತ್ತದೆ ಫಿಯೆಟ್ ಜೊತೆ ಜಂಟಿ ಹೊಂದಿದೆ.