News

ಯುವಕರಿಗೆ ಸಿಹಿಸುದ್ದಿ: ಕರ್ನಾಟಕದಲ್ಲಿ 1.74 ಲಕ್ಷ ಕೋಟಿ ರೂ. ಹೂಡಿಕೆ; 46 ಸಾವಿರ ಉದ್ಯೋಗ ಸೃಷ್ಟಿ!

23 October, 2022 5:44 PM IST By: KJ Staff
basavaraj bommai

ರಾಜ್ಯದ ಯುವಕರಿಗೆ ರಾಜ್ಯ ಸರ್ಕಾರವೂ ಸಿಹಿಸುದ್ದಿಯೊಂದನ್ನು ನೀಡಿದೆ. ಬರೋಬ್ಬರಿ 1.74 ಲಕ್ಷ ಕೋಟಿ ರೂ. ಮೌಲ್ಯದ ಒಟ್ಟು 11 ಮಹತ್ವದ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ.

ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ?

ಕರ್ನಾಟಕದಲ್ಲಿ ಉದ್ಯಮ ಕ್ಷೇತ್ರಕ್ಕೆ ಒತ್ತು ನೀಡುವ ಹಾಗೂ ಕೈಗಾರಿಕೆ ಸ್ಥಾಪನೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಹಾಗೂ 135ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ ನಡೆಯಿತು.

ಈ ಸಭೆಯಲ್ಲಿ 46 ಸಾವಿರ ಉದ್ಯೋಗ ಸೃಷ್ಟಿಸುವ ನಾನಾ ಉದ್ಯಮಗಳಿಗೆ ಒಪ್ಪಿಗೆ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಹಾಗೂ 135ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ ನಡೆದಿದ್ದು, 46 ಸಾವಿರ ಉದ್ಯೋಗ ಸೃಷ್ಟಿಸುವ ನಾನಾ ಉದ್ಯಮಗಳಿಗೆ ಒಪ್ಪಿಗೆ ನೀಡಿದೆ.

ಇನ್ನಷ್ಟು ಓದಿರಿ: ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ!

ಸಮಿತಿಯ 60ನೇ ಸಭೆಯಲ್ಲಿ ಬರೋಬ್ಬರಿ 1.74 ಲಕ್ಷ ಕೋಟಿ ರೂಪಾಯಿ ಮೌಲ್ಯದ ಒಟ್ಟು 11 ಮಹತ್ವದ ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, 41,448 ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.

ಈ ಪ್ರಮಾಣದಲ್ಲಿ ಹೂಡಿಕೆ ಪ್ರಸ್ತಾವಗಳಿಗೆ ಅನುಮೋದನೆ ನೀಡಿರುವುದು ಇದೇ ಮೊದಲಾಗಿದೆ. ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.   

ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,  ಹಸಿರು ಇಂಧನವೇ ಭವಿಷ್ಯದ ಇಂಧನವಾಗಿದ್ದು,  2026ರಿಂದ ಗ್ರೀನ್‌ ಹೈಡ್ರೋಜನ್‌ ರಫ್ತು ಆರಂಭವಾಗಲಿದೆ.

ದೇಶದ ಒಟ್ಟು ಗ್ರೀನ್‌ ಹೈಡ್ರೋಜ್‌ನ್‌ ರಫ್ತಿನಲ್ಲಿ ರಾಜ್ಯದ ಪಾಲು ದೊಡ್ಡದಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

135ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 35 ಬೃಹತ್‌ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ ರೂಪಾಯಿ ಹೂಡಿಕೆಗೆ ಸಮ್ಮತಿ ಸೂಚಿಸಲಾಗಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಆಲೂಗಡ್ಡೆ ಇಳುವರಿ; ಇಲ್ಲಿದೆ ಟ್ರಿಕ್ಸ್‌! 

ಇದರಿಂದ 4904 ಉದ್ಯೋಗ ಸೃಷ್ಟಿಯಾಗಲಿವೆ. 50 ಕೋಟಿ ರೂಪಾಯಿಗಿಂತಲೂ ಹೆಚ್ಚು ಬಂಡವಾಳ ಹೂಡಿಕೆಯ 8 ಬೃಹತ್‌ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಆ ಮೂಲಕ 949.11 ಕೋಟಿ ರೂಪಾಯಿ ಹೂಡಿಕೆಯಾಗಿ 2461 ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. 15 ಕೋಟಿ ರೂಪಾಯಿಂದ 50 ಕೋಟಿ ರೂಪಾಯಿ ಮಿತಿಯೊಳಗಿನ ಬಂಡವಾಳ ಹೂಡಿಕೆಯ 25 ಹೊಸ ಯೋಜನೆಗಳಿಗೆ ಸಮಿತಿ ಒಪ್ಪಿಗೆ ನೀಡಿದೆ.

ಇದರಿಂದ 567.43 ಕೋಟಿ ರೂಪಾಯಿ  ಹೂಡಿಕೆ ಹಾಗೂ 2443 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಹೆಚ್ಚುವರಿ 2 ಯೋಜನೆಗೆ ಅನುಮೋದನೆ ನೀಡಲಾಗಿದ್ದು, 230.83 ಕೋಟಿ ರೂಪಾಯಿ ಹೂಡಿಕೆಯಾಗಲಿದೆ.

ಸಚಿವ ಮುರುಗೇಶ್‌ ನಿರಾಣಿ ಅವರು ಮಾತನಾಡಿ, ಗೋವಿಂದ ಕಾರಜೋಳ, ಬಿ.ಸಿ ಪಾಟೀಲ್‌, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.   

ಸಾಲು ಸಾಲು ಹಬ್ಬ: ಐದು ದಿನ ಬ್ಯಾಂಕ್‌ಗಳಿಗೆ ರಜೆ!