News

ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: 7ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯಿತಿ!

01 February, 2023 12:59 PM IST By: Hitesh
Good news for the middle class from the central government: tax exemption up to 7 lakh!

ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರಿಗೆ ನಿರಾಳತೆಯನ್ನು ನೀಡಿದೆ.

Union Budget 2023 ಮಹಿಳೆಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ದರ ತುಟ್ಟಿ! ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ ಇಲ್ಲಿದೆ ವಿವರ

ಇಲ್ಲಿಯ ವರೆಗೆ 5 ಲಕ್ಷದ ವರೆಗೆ ಇದ್ದ ತೆರಿಗೆ ಪಾವತಿಯನ್ನು ಇನ್ನು ಮುಂದಿನ ದಿನಗಳಲ್ಲಿ 7 ಲಕ್ಷದ ವರೆಗೆ ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ಇದರಿಂದ ಇನ್ನು ಮುಂದಿನ ದಿನಗಳಲ್ಲಿ ಮಧ್ಯಮ ಹಾಗೂ ಬಡ ಮಧ್ಯಮ ವರ್ಗದವರು ತುಸು ನಿರಾಳರಾಗಬಹುದಾಗಿದೆ.

ಏಳು ಲಕ್ಷದ ವರೆಗೆ ಆದಾಯ ಬರುವವರೂ ಇನ್ನು ಮುಂದಿನ ದಿನಗಳಲ್ಲಿ ತೆರಿಗೆ ಪಾವತಿಯಿಂದ ವಿನಾಯಿ ವ್ಯಾಪ್ತಿಗೆ ಬರಲಿದ್ದಾರೆ.  

ಪೊಲೂಷನ್‌ ಎನ್ನುವುದಕ್ಕೆ ಪೊಲಿಟಿಕಲ್‌ ಎಂದ ನಿರ್ಮಲಾ ಸೀತರಾಮನ್‌ ನಗೆಗಡಲಲ್ಲಿ ತೇಲಿದ ಸಂಸತ್!

ಬಜೆಟ್‌ನಲ್ಲಿ ಕೆಲವು ನಿರ್ದಿಷ್ಟ ಅಂಶಗಳಲ್ಲಿ ಆಗಿರುವ ಬದಲಾವಣೆಯು ಪ್ರಸಕ್ತ ಸಾಲಿನಲ್ಲಿ 9 ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ ಹಾಗೂ 2024ರಲ್ಲಿ ಲೋಕಸಭೆ ಚುನಾವಣೆ ಇರುವುದು ಸಹ ಸೇರಿದೆ ಎಂದು ವಿಶ್ಲೇಷಿಸಲಾಗಿದೆ.

ಇದೆಲ್ಲ ಚರ್ಚೆಯ ಹೊರತಾಗಿಯೂ ಪ್ರಸಕ್ತ ಸ್ಥಿತಿಯಲ್ಲಿ ಮಧ್ಯಮ ವರ್ಗದವರು ತುಸು ನಿರಾಳರಾಗುವ ಪರಿಸ್ಥಿತಿ ಸೃಷ್ಟಿ ಆಗಲಿದೆ.

ಉಳಿದಂತೆ ತೆರಿಗೆ ಪಾವತಿಯ ಮೇಲೆಯೂ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ.

Budget 2023-2024 ಮೀನುಗಾರರಿಗೆ 6 ಸಾವಿರ ಕೋಟಿ ರೂಪಾಯಿ ಮೀಸಲು, ಕೃಷಿ ವೇಗವರ್ಧಕ ನಿಧಿ ಸ್ಥಾಪನೆ  

ಹೊಸ ಆದಾಯ ಪದ್ಧತಿಯ ಸೆಕ್ಷನ್‌ 87ಎ ಅಡಿಯಲ್ಲಿ ರಿಯಾಯಿತಿಯನ್ನು ಏಳು ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜವಳಿ ಮತ್ತು ಕೃಷಿ ಕ್ಷೇತ್ರಗಳನ್ನು ಹೊರತುಪಡಿಸಿ ಇತರ ಸರಕುಗಳ ಮೇಲಿನ ಮೂಲ ಕಸ್ಟಮ್ ಸುಂಕದ  ದರಗಳನ್ನು 21% ರಿಂದ 13% ಕ್ಕೆ ಇಳಿಕೆ ಮಾಡಲಾಗಿದೆ.

ಆಟಿಕೆಗಳು, ಬೈಸಿಕಲ್‌ಗಳು,  ಆಟೋಮೊಬೈಲ್‌ಗಳು ಸೇರಿದಂತೆ ಕೆಲವು ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕಗಳು, ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳಲ್ಲಿ ಸಣ್ಣ ಬದಲಾವಣೆಗಳು ಆಗಲಿದ್ದು, ಇದರಿಂದ ಹಲವು ವಸ್ತುಗಳ ಬೆಲೆಯಲ್ಲಿ ಇಳಿಕೆ ಆಗುವ ಸಾಧ್ಯತೆಗಳಿವೆ.  

ಕೆ.ಸಿ ಜನರಲ್‌ ಆಸ್ಪತ್ರೆಯಿಂದ ಬರೋಬ್ಬರಿ 48 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಬೆಸ್ಕಾಂನಿಂದ ಬಂತು ನೋಟಿಸ್‌!

Good news for the middle class from the central government: tax exemption up to 7 lakh!

ಇನ್ನು ದೇಶದಲ್ಲಿ  ಪರ್ಯಾಯ ರಸಗೊಬ್ಬರಗಳನ್ನು ಬಳಸುವಂತೆ ರಾಜ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪಿಎಂ ಪ್ರಣಾಮ್‌ ಎಂಬ ಕಾರ್ಯಕ್ರಮವನ್ನು ಪರಿಚಯಿಸಿದೆ.

ಈ ಉದ್ದೇಶಿತ ಯೋಜನೆಯಲ್ಲಿ ಕೇಂದ್ರ ಸರ್ಕಾರವು ನೈಸರ್ಗಿಕ ಕೃಷಿ ಮಾಡುವುದಕ್ಕೆ ಉತ್ತೇಜನ ನೀಡುತ್ತಿದೆ.

ಅಲ್ಲದೇ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದ್ದು, ಇದರಿಂದ ಒಂದು ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

ಬಜೆಟ್‌ನ ಇನ್ನಿತರ ಪ್ರಮುಖ ಅಂಶಗಳು ಈ ರೀತಿ ಇವೆ. 

15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವುದಕ್ಕೆ ಸಂಬಂಧಿಸಿದಂತೆ ಬಜೆಟ್‌ ಮಂಡನೆ ಮಾಡುವ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಮಾತನಾಡಿದರು.

ಈ ವೇಳೆ ಹಳೆಯ ಪೊಲೂಷನ್‌ ವೈಕಲ್‌ ರಿಪ್ಲೇಸ್‌ ಮೆಂಟ್‌ (ಹಳೆಯ ವಾಹನಗಳನ್ನು ಗುಜುರಿಗೆ ಹಾಕುವುದು ಅಥವಾ ಪರ್ಯಾಯ ವಾಹನಗಳ ಪರಿಚಯ) ಎಂದು ಹೇಳುವ ಬದಲಾಗಿ, ರಿಪ್ಲೇಸ್‌ ಆಫ್‌ ಪೊಲಿಟಿಕಲ್‌ ಪಾರ್ಟಿ (ಹಳೆಯ ಪಕ್ಷಗಳ ಬದಲಾವಣೆ) ಎಂದು ಹೇಳಿದರು. ನಿರ್ಮಲಾ ಸೀತಾರಾಮನ್‌ ಅವರ ಈ ಮಾತಿಗೆ ಇಡೀ ಸಂಸತ್‌ ನಗೆಗಡಲಲ್ಲಿ ತೇಲಿತು. ನಗುತ್ತಲೇ ಉತ್ತರಿಸಿದ ನಿರ್ಮಲಾ ಸೀತಾರಾಮನ್‌ ಅವರು ನನಗೆ ಗೊತ್ತಾಯ್ತು. ಎಂದು ಮತ್ತೊಮ್ಮೆ ಸರಿಯಾಗಿ ವಾಹನಗಳ ಗುಜುರು ನೀತಿ ಎಂದು ಹೇಳಿ ಮುಂದಕ್ಕೆ ಸಾಗಿದರು.

ಕೃಷಿ ಹಾಗೂ ಕೃಷಿ ಆಧಾರಿತ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಪರಿಚಯ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಎರಡನೇ ಸಾಲಿನ ಕೊನೆಯ ಬಜೆಟ್‌ ಬುಧವಾರ ಕೇಂದ್ರ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿದ್ದು, ಕೃಷಿ ಹಾಗೂ ಕೃಷಿ ಆಧಾರಿತ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಪರಿಚಯ ಮಾಡಿದ್ದಾರೆ.

ಅವುಗಳಲ್ಲಿ ಪ್ರಮುಖವಾಗಿ ಮೀನುಗಾರರಿಗೆ 6 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಟ್ಟಿರುವುದು ಪ್ರಮುಖವಾಗಿದೆ.

ಗ್ರೀನ್‌ ಎನರ್ಜಿಯನ್ನು ಉತ್ತೇಜನ ಮಾಡುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯ ವಿಷಯಗಳಲ್ಲಿ ಒಂದಾಗಿದೆ.

ಅತೀ ಮುಖ್ಯವಾಗಿ ಕೃಷಿ ವೇಗವರ್ಧಕ ನಿಧಿ ಸ್ಥಾಪನೆ ಮಾಡುವುದು ಸೇರಿದೆ. ಮುಖ್ಯವಾಗಿ ಕೃಷಿ ವೇಗವರ್ಧಕ ನಿಧಿ ಸ್ಥಾಪನೆ ಮಾಡುವ ಮೂಲಕ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಲು ಕೇಂದ್ರ ಸರ್ಕಾರವು ಮುಂದಾಗಿದೆ.

ಜನಧನ್‌ ಅಕೌಂಟ್‌ನ ಫಲಾನುಭವಿಗಳ ಸಂಖ್ಯೆಯನ್ನು 14 ಕೋಟಿಗೂ ಹೆಚ್ಚು ವಿಸ್ತರಣೆ ಮಾಡುವುದಕ್ಕೆ ಕ್ರಮವಹಿಸಲಾಗುತ್ತಿದೆ.

ಎಲ್ಲರನ್ನೂ ಒಳಗೊಳ್ಳುವ ಬಜೆಟ್‌ ಇದಾಗಿರಲಿದೆ ಎಂದು ಕೇಂದ್ರ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

ರೈತರ ಹೃದಯವನ್ನು ಗೆಲ್ಲುವ ಸಲುವಾಗಿ, ಕೇಂದ್ರ ಸರ್ಕಾರವು 2023ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ PM ಕಿಸಾನ್ ಪಾವತಿಯ ಹೆಚ್ಚಳ ಸೇರಿದಂತೆ ಅನೇಕ ದೊಡ್ಡ ಕೊಡುಗೆಗಳನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. 

ಜಯಲಲಿತಾಗೆ ಸೇರಿದ್ದ 11,000 ಸಾವಿರ ರೇಷ್ಮೆ ಉಡುಪು ಹರಾಜಿಗೆ!