News

ರಾಜ್ಯದ ರೈತರಿಗೆ ಸಿಹಿಸುದ್ದಿ: ಪ್ರಮುಖ ಜಲಾಶಯಗಳು ಭರ್ತಿ!

09 November, 2022 12:37 PM IST By: Hitesh
Good news for the farmers of the state: Major reservoirs are full!

ರಾಜ್ಯದಲ್ಲಿ ವರುಣ ತುಸು ಬಿಡುವು ನೀಡಿದ್ದಾನೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದ್ದು, ಚಳಿ ಪ್ರಮಾಣ ಹೆಚ್ಚಾಗಿದೆ.

ಈ ನಡುವೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿ ಆಗಿರುವ ಸಿಹಿಸುದ್ದಿಯೊಂದು ಬಂದಿದೆ.

ಬೆಂಗಳೂರು ಬಸವನಗುಡಿ ಕಡಲೆ ಪರಿಷೆ: ಈ ಬಾರಿ ತೆಪ್ಪೋತ್ಸವದ ಮೆರುಗು!

ರಾಜ್ಯದಲ್ಲಿ ಮಳೆಯ ಪ್ರಮಾಣ ತುಸು ಇಳಿಕೆ ಕಂಡಿರುವುದರಿಂದಾಗಿ ಪ್ರಮುಖ ಜಲಾಶಯಗಳಲ್ಲಿ (Dams) ಕಂಡುಬರುತ್ತಿದ್ದ ನೀರಿನ ಒಳ ಹಾಗೂ ಹೊರ ಹರಿವಿನ ಪ್ರಮಾಣ ಈಗ ಗಮನಾರ್ಹವಾಗಿ ಇಳಿಕೆ ಕಂಡಿದೆ.

ಆದರೆ, ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ  ಹೆಚ್ಚಾಗಿಯೇ ಮಳೆಯಾಗಿದ್ದು, ರಾಜ್ಯದ ಹಲವು ಪ್ರಮುಖ ಜಲಾಶಯಗಳೆಲ್ಲವೂ ಸಾಕಷ್ಟು ಭರ್ತಿಯಾಗಿವೆ.

ಈ ಹಿಂದೆ ಹರಿದು ಬರುತ್ತಿದ್ದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆ ಆಗಿದೆ.  

ಭಾರತೀಯ ಮಾತೃ ಭಾಷೆಗಳ ಸಮೀಕ್ಷೆ ಪೂರ್ಣ, ಇದರ ಲಾಭವೇನು? 

ಇದೀಗ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ರೈತರಲ್ಲಿ ಸಂತೃಪ್ತ ಭಾವವನ್ನು ಮೂಡಿಸಿದೆ.

ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಆತಂಕವಿಲ್ಲದೆ ಕೃಷಿ ಮಾಡಲು ಇದು ಅನುಕೂಲವಾಗಿದೆ.

ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿರುವುದು ಮತ್ತೊಂದು ವಿಶೇಷ….

ರಾಜ್ಯದ ದಕ್ಷಿಣ ಒಳನಾಡಿನ ಕೆಲವು ನಿರ್ದಿಷ್ಟ ಜಿಲ್ಲೆಗಳನ್ನು ಹೊರತುಪಡಿಸಿ ಹಲವು ರೈತರು ಕೃಷಿಗಾಗಿ ಮಳೆಯನ್ನೇ ಅವಲಂಬಿಸಿದ್ದಾರೆ.

ಹೀಗಾಗಿ, ಜಲಾಶಯಗಳು ಭರ್ತಿ ಆಗುವುದೆಂದರೆ ರೈತಾಪಿ ವರ್ಗಕ್ಕೆ ಸಂತಸದ ವಿಷಯ.

ನೇಪಾಳದಲ್ಲಿ ಭೂಕಂಪನ: ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ!

ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ.

ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡುವುದೂ ಇದೆ.

ಆಧಾರ್‌ ಕಾರ್ಡ್‌ಗಾಗಿ 24 ವರ್ಷ ಬಿಟ್ಟು ಮನೆಗೆ ಬಂದ ವ್ಯಕ್ತಿ! 

reservoirs are full

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ (08-11-2022ರ ಜಲಾಶಯ ವರದಿ ಅನ್ವಯ)

ಕೆಆರ್​ಎಸ್​ ಜಲಾಶಯ - KRS Dam

  • ಗರಿಷ್ಠ ಮಟ್ಟ - 124.80 ಅಡಿ
  • ಸಾಮರ್ಥ್ಯ - 49.45 ಟಿಎಂಸಿ
  • ಇಂದಿನ ನೀರಿನ ಮಟ್ಟ - 48.87 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ - 49.45 ಟಿಎಂಸಿ
  • ಇಂದಿನ ಒಳಹರಿವು - 5026 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 6430 ಕ್ಯೂಸೆಕ್ಸ್​

ತುಂಗಭದ್ರಾ ಜಲಾಶಯ - Tungabhadra Dam

  • ಗರಿಷ್ಠ ನೀರಿನ ಮಟ್ಟ - 1,633 ಅಡಿ
  •  ಸಾಮರ್ಥ್ಯ- 105.79 ಟಿಎಂಸಿ
  • ಇಂದಿನ ನೀರಿನ ಮಟ್ಟ - 102.54 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 98.66 ಟಿಎಂಸಿ
  • ಇಂದಿನ ಒಳಹರಿವು - 5250 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 10362 ಕ್ಯೂಸೆಕ್ಸ್​

ಕಬಿನಿ ಜಲಾಶಯ - Kabini Dam

  • ಗರಿಷ್ಠ ನೀರಿನ ಮಟ್ಟ - 2,284 ಅಡಿ
  •  ಸಾಮರ್ಥ್ಯ - 19.52 ಟಿಎಂಸಿ
  • ಇಂದಿನ ನೀರಿನ ಮಟ್ಟ - 17.19 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ - 19.49 ಟಿಎಂಸಿ
  • ಇಂದಿನ ಒಳಹರಿವು - 206 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 2050 ಕ್ಯೂಸೆಕ್ಸ್​ 

ಆಲಮಟ್ಟಿ ಜಲಾಶಯ - Almatti Dam

  • ಗರಿಷ್ಠ ಮಟ್ಟ - 1,704 ಅಡಿ
  •  ಸಾಮರ್ಥ್ಯ - 123.08 ಟಿಎಂಸಿ
  • ಇಂದಿನ ನೀರಿನ ಮಟ್ಟ- 123.08 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 109.44 ಟಿಎಂಸಿ
  • ಇಂದಿನ ಒಳಹರಿವು- 1476 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 1476 ಕ್ಯೂಸೆಕ್ಸ್​ 

ಭದ್ರಾ ಜಲಾಶಯ - Bhadra Dam

  • ಗರಿಷ್ಠ ಮಟ್ಟ - 657.73 ಮೀಟರ್
  • ಒಟ್ಟು ಸಾಮರ್ಥ್ಯ - 71.54 ಟಿಎಂಸಿ
  • ಇಂದಿನ ನೀರಿನ ಮಟ್ಟ- 70.02 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 70.70 ಟಿಎಂಸಿ
  • ಇಂದಿನ ಒಳಹರಿವು- 1446 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 3240 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ - Ghataprabha Dam

  • ಗರಿಷ್ಠ ಮಟ್ಟ - 662.91 ಮೀಟರ್
  •  ಸಾಮರ್ಥ್ಯ - 51.00 ಟಿಎಂಸಿ
  • ಇಂದಿನ ನೀರಿನ ಮಟ್ಟ- 51 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 47.33 ಟಿಎಂಸಿ
  • ಇಂದಿನ ಒಳಹರಿವು - 194 ಕ್ಯೂಸೆಕ್ಸ್​​
  • ಇಂದಿನ ಹೊರಹರಿವು - 194 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ - Malaprabha Dam

  • ಗರಿಷ್ಠ ಮಟ್ಟ-633.80 ಮೀಟರ್
  •  ಸಾಮರ್ಥ್ಯ - 37.73 ಟಿಎಂಸಿ
  • ಇಂದಿನ ನೀರಿನ ಮಟ್ಟ - 37.38 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ - 34.86 ಟಿಎಂಸಿ
  • ಇಂದಿನ ಒಳಹರಿವು - 0 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 394 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ - Hemavathi Dam

  • ಗರಿಷ್ಠ ಮಟ್ಟ - 2,922 ಅಡಿ​
  •  ಸಾಮರ್ಥ್ಯ - 37.10 ಟಿಎಂಸಿ
  • ಇಂದಿನ ನೀರಿನ ಮಟ್ಟ- 34.80 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 26.17 ಟಿಎಂಸಿ
  • ಇಂದಿನ ಒಳಹರಿವು - 580 ಕ್ಯೂಸೆಕ್ಸ್​​
  • ಇಂದಿನ ಹೊರಹರಿವು - 3050 ಕ್ಯೂಸೆಕ್ಸ್​

ವರಾಹಿ ಜಲಾಶಯ - Varahi Dam

  • ಗರಿಷ್ಠ ಮಟ್ಟ - 594.36 ಮೀಟರ್
  • ​ ಸಾಮರ್ಥ್ಯ - 31.10 ಟಿಎಂಸಿ
  • ಇಂದಿನ ನೀರಿನ ಮಟ್ಟ- 21.31 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 18.36 ಟಿಎಂಸಿ
  • ಇಂದಿನ ಒಳಹರಿವು - 53 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 751 ಕ್ಯೂಸೆಕ್ಸ್​

ಹಾರಂಗಿ ಜಲಾಶಯ - Harangi Dam

  • ಗರಿಷ್ಠ ಮಟ್ಟ - 871.38 ಮೀಟರ್
  •  ಸಾಮರ್ಥ್ಯ - 8.50 ಟಿಎಂಸಿ
  • ಇಂದಿನ ನೀರಿನ ಮಟ್ಟ- 5.85 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 7.97 ಟಿಎಂಸಿ
  • ಇಂದಿನ ಒಳಹರಿವು - 595 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 1850 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ - Linganamakki Dam

  • ಗರಿಷ್ಠ ಮಟ್ಟ - 554.44 ಮೀಟರ್
  •  ಸಾಮರ್ಥ್ಯ - 151.75 ಟಿಎಂಸಿ
  • ಇಂದಿನ ನೀರಿನ ಮಟ್ಟ- 127.52 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ - 135.8 ಟಿಎಂಸಿ
  • ಇಂದಿನ ಒಳಹರಿವು - 1112 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 6720 ಕ್ಯೂಸೆಕ್ಸ್

ಸೂಪಾ ಜಲಾಶಯ - Supa Dam

  • ಗರಿಷ್ಠ ಮಟ್ಟ- 564.00 ಮೀಟರ್
  •  ಸಾಮರ್ಥ್ಯ - 145.33 ಟಿಎಂಸಿ
  • ಇಂದಿನ ನೀರಿನ ಮಟ್ಟ- 102.49 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 112.25 ಟಿಎಂಸಿ
  • ಇಂದಿನ ಒಳಹರಿವು - 405 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 2906 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ - Narayanapura Dam

  • ಗರಿಷ್ಠ ಮಟ್ಟ - 492.25 ಮೀಟರ್
  •  ಸಾಮರ್ಥ್ಯ - 33.31 ಟಿಎಂಸಿ
  • ಇಂದಿನ ನೀರಿನ ಮಟ್ಟ- 30.30 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ - 28.69 ಟಿಎಂಸಿ
  • ಇಂದಿನ ಒಳಹರಿವು - 1443 ಕ್ಯೂಸೆಕ್ಸ್​
  • ಇಂದಿನ ಹೊರಹರಿವು - 10130 ಕ್ಯೂಸೆಕ್ಸ್