News

Gold ಚಿನ್ನ ಖರೀದಿದಾರರಿಗಗೆ ಸಿಹಿಸುದ್ದಿ: ಚಿನ್ನದ ಬೆಲೆ ಇಳಿಕೆ!

18 April, 2023 3:16 PM IST By: Hitesh
Good news for gold buyers: Gold prices are down!

ಚಿನ್ನದ ದರದಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡುಬಂದಿತ್ತು. ಇದೀಗ ಚಿನ್ನದ ಬೆಲೆಯು ತಟಸ್ಥವಾಗಿದೆ. 

ಚಿನ್ನದ ಬೆಲೆಯು ಇದೀಗ ಮಾರುಕಟ್ಟೆಯಲ್ಲಿ ಒಂದು ಗ್ರಾಂಗೆ 5,594 ರೂಪಾಯಿ ತಲುಪಿದೆ.

ಚಿನ್ನ ಮತ್ತು ಬೆಳ್ಳಿಯ ದರವು ಮಾರುಕಟ್ಟೆಯಲ್ಲಿ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ.

ಚಿನ್ನ ಖರೀದಿದಾರರು ಸಹ ಇದೇ ಗೊಂದಲಕ್ಕೆ ಸಿಲುಕುತ್ತಾರೆ. ಚಿನ್ನದ ದರ ದಿಢೀರ್‌ ಇಳಿಕೆ ಕಂಡರೆ, ಇನ್ನೂ ಕೆಲವೊಮ್ಮೆ ದಿಢೀರ್‌ ಹೆಚ್ಚಳವಾಗುತ್ತದೆ.

ಇದರಿಂದ ಚಿನ್ನ ಖರೀದಿಸಿದ ನಂತರದಲ್ಲಿ ಇಳಿಕೆಯಾದರೆ, ನಷ್ಟ ಹಾಗೂ ಹೆಚ್ಚಳವಾದರೆ, ಲಾಭ ಈ ಲೆಕ್ಕಾಚಾರ ಸದಾ ನಡೆಯುತ್ತಲೇ ಇರುತ್ತದೆ.  

ಇನ್ನು  ಬೆಂಗಳೂರಲ್ಲಿ  22 ಕ್ಯಾರಟ್ ಚಿನ್ನದ ಬೆಲೆ (ಹತ್ತು ಗ್ರಾಂ)ಗೆ ಮಂಗಳವಾರ 55,990 ರೂಪಾಯಿ ಇದೆ.

ಚೆನ್ನೈನಲ್ಲಿ 56,500 ರೂಪಾಯಿ ಇದ್ದರೆ, ಮುಂಬೈನಲ್ಲಿ 55,940 ರೂಪಾಯಿ ಇದೆ. ಕೊಲ್ಕತ್ತಾ ನಗರದಲ್ಲಿ 55,940 ರೂಪಾಯಿ ಆಗಿದೆ.

ಇನ್ನು ದೆಹಲಿಯಲ್ಲಿ ಮಂಗಳವಾರ ಚಿನ್ನದ ದರವು 56,090 ರೂಪಾಯಿ ಆಗಿದೆ. 

ಇನ್ನು ಮುಕ್ತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಒಂದು ಗ್ರಾಂಗೆ 22 ಕ್ಯಾರಟ್   5,594 ರೂಪಾಯಿ ಆಗಿದೆ.

ಅಲ್ಲದೇ  24 ಕ್ಯಾರಟ್ ಚಿನ್ನದ ಬೆಲೆಯು 6,103  ರೂಪಾಯಿ ಆಗಿದೆ.

ಎಂಟು ಗ್ರಾಂನ ಚಿನ್ನದ ಬೆಲೆಯು 22 ಕ್ಯಾರಟ್‌  44,752 ರೂಪಾಯಿ ತಲುಪಿದೆ.

ಚಿನ್ನದ 24 ಕ್ಯಾರಟ್  48,824 ರೂಪಾಯಿ ಮುಟ್ಟಿದೆ.

ಇನ್ನು ಚಿನ್ನದ ಹತ್ತು ಗ್ರಾಂ 22 ಕ್ಯಾರಟ್ ಬೆಲೆಯು 55.940 ರೂಪಾಯಿ ಆಗಿದೆ.

24 ಕ್ಯಾರಟ್ ಬಂಗಾರದ ಬೆಲೆ 61,030 ರೂಪಾಯಿ ಆಗಿದೆ.

ನೂರು ಗ್ರಾಂನ 22 ಕ್ಯಾರಟ್ ಚಿನ್ನದ ದರವು 5,59,400 ರೂಪಾಯಿ ಮುಟ್ಟಿದೆ.

ಅಲ್ಲದೇ 24 ಕ್ಯಾರಟ್ ಚಿನ್ನದ ಬೆಲೆ  6,10,400 ರೂಪಾಯಿ ಆಗಿರುವುದು ವರದಿ ಆಗಿದೆ.  

ಇನ್ನು ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಪ್ರತಿ 10ಗ್ರಾಂ , 100ಗ್ರಾಂ, 1000 (1ಕೆಜಿ) ಬೆಳ್ಳಿಯ ಬೆಲೆಯು ಈ ರೀತಿ ಕ್ರಮವಾಗಿ 816 ರೂಪಾಯಿ,

8,160 ರೂಪಾಯಿ ಮತ್ತು 81,600 ರೂಪಾಯಿ ಇದೆ ಎಂದು ವರದಿ ಆಗಿದೆ.

ಈ ಸುದ್ದಿಗಳನ್ನೂ ಓದಿರಿ

ದೇಶದಲ್ಲೇ ಅತೀ ಹೆಚ್ಚು ಡಿಜಿಟಲ್‌ ವಹಿವಾಟು ಬೆಂಗಳೂರಿನಲ್ಲಿ!

Karnataka Election ಲಿಂಗಾಯತ ಸಮುದಾಯದ ಮತ ಸೆಳೆಯಲು ಪಕ್ಷಗಳ ಸರ್ಕಸ್‌: ಡ್ಯಾಮೇಜ್‌ ಕಂಟ್ರೋಲ್‌ಗೆ ಬಿಜೆಪಿ ಪ್ಲಾನ್‌ !

ಬಿ.ವೈ.ವಿಜಯೇಂದ್ರ ಮತ್ತು ಕುಟುಂಬದವರ ಬಳಿ ಇಷ್ಟು ಕೋಟಿ ರೂ ಆಸ್ತಿ!

Climate Change ಭಾರತದಲ್ಲಿ ಬದಲಾಗುತ್ತಿದೆ ಹವಾಮಾನ ಕಾರಣವೇನು ಗೊತ್ತೆ ?

Indian Railways ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ ಗಳಿಸಿದ ಆದಾಯ ಎಷ್ಟು?