News

ಕೇಂದ್ರ ಸರ್ಕಾರದಿಂದ ಅಂಗವಿಕಲ ಉದ್ಯೋಗಿಗಳಿಗೆ ಗುಡ್ ನ್ಯೂಸ್ !

26 May, 2022 12:21 PM IST By: Kalmesh T
Good news for disabled employees from central government!

ಕೇಂದ್ರ ಸರ್ಕಾರದ ಹುದ್ದೆ ಹಾಗೂ ಸೇವೆಯಲ್ಲಿರುವ ಅಂಗವಿಕಲ ಅಭ್ಯರ್ಥಿಗಳ ಬಡ್ತಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಇದೀಗ ನೋಟಿಸ್‌ ಒಂದನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ಅದರ ಕುರಿತಾದ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ: 

7th Pay: ಸರ್ಕಾರಿ ನೌಕರರಿಗೆ ಬಿಗ್ ಅಪ್ಡೇಟ್; 8ನೇ ವೇತನ ಆಯೋಗದಲ್ಲಿದೆ ಮಹತ್ವದ ಬದಲಾವಣೆ!

Heavy Rain: ಮೇ 28ರ ವರೆಗೆ ದೇಶಾದ್ಯಂತ ಭಾರೀ ಮಳೆ! ಹವಾಮಾನ ಇಲಾಖೆಯಿಂದ ಎಚ್ಚರಿಕೆ..

ಕರ್ನಾಟಕ ಸರ್ಕಾರವನ್ನು ಪ್ರತಿವಾದಿಯಾಗಿಸಿದ್ದ ಸಿದ್ಧರಾಜು ಎಂಬುವರ ಅರ್ಜಿ ವಿಚಾರಣೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ನಿರ್ದೇಶನದನ್ವಯ, ಕೇಂದ್ರ ಸರ್ಕಾರವು ಇದೀಗ ಅಂಗವಿಕಲರ ಬಡ್ತಿ ನಿಯಮಕ್ಕೆ ಸಂಬಂಧಿಸಿದಂತೆ ಅಧಿಕೃತ ಸುತ್ತೋಲೆಯೊಂದನ್ನು ಬಿಡುಗಡೆ ಮಾಡಿದೆ.

ಭಾರತೀಯ ಕೇಂದ್ರ ಸರ್ಕಾರದ ಹುದ್ದೆ ಹಾಗೂ ಸೇವೆಯಲ್ಲಿರುವ ಅಂಗವಿಕಲ ಅಭ್ಯರ್ಥಿಗಳ ಬಡ್ತಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಇದೀಗ ನೋಟಿಸ್‌ ಒಂದನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಅಭ್ಯರ್ಥಿಗಳ ಬಡ್ತಿ ಹುದ್ದೆಗಳಿಗೂ ಅಂಗವಿಕಲರನ್ನು ಪರಿಗಣಿಸಬಹುದು, ಅಂಗವಿಕಲರೆಂಬ ಕಾರಣಕ್ಕೆ ಬಡ್ತಿ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಕರ್ನಾಟಕ ಸರ್ಕಾರವನ್ನು ಪ್ರತಿವಾದಿಯಾಗಿಸಿದ್ದ ಸಿದ್ಧರಾಜು ಎಂಬುವರ ಅರ್ಜಿ ವಿಚಾರಣೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ನಿರ್ದೇಶನದನ್ವಯ ಈ ಸುತ್ತೋಲೆ ಹೊರಡಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಈರುಳ್ಳಿ ಬೆಲೆ ಕುಸಿತ; ಕೆ.ಜಿ ಈರುಳ್ಳಿಗೆ 3 ರೂಪಾಯಿ! ಕಂಗಾಲಾದ ರೈತರು

ಅಡುಗೆ ಎಣ್ಣೆ ದರ ಇಳಿಕೆ.. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ತುಸು ಸಮಾಧಾನದ ಸಂಗತಿ..!

ಪ್ರಮಾಣ ನಿಗದಿ ಆಯಾ ವೃಂದ ಬಲದ ಶೇಕಡ.04 ಬಡ್ತಿಯನ್ನು ಅಂಗವಿಕಲರಿಗಾಗಿ ನಿಗದಿ ಮಾಡಲಾಗಿದೆ. ಗ್ರೂಪ್‌ ಸಿ ಇಂದ ಗ್ರೂಪ್‌ ಬಿ ಗೆ ಬಡ್ತಿ ನೀಡುವುದಾದಲ್ಲಿ ಗ್ರೂಪ್‌ ಸಿ ವೃಂದದ ಒಟ್ಟು ಬಲದ ಶೇಕಡ.04 ಅಂಗವಿಕಲ ಅಭ್ಯರ್ಥಿಗಳನ್ನು ಪರಿಗಣಿಸಬೇಕು.

ಗ್ರೂಪ್‌ ಬಿ ಇಂದ ಗ್ರೂಪ್‌ ಎ'ಗೆ ಬಡ್ತಿ ನೀಡುವುದಾದಲ್ಲಿ ಗ್ರೂಪ್ ಎ ಕೆಳಹಂತದ ಹುದ್ದೆಗಳನ್ನು ಮೀಸಲಾಗಿಡತಕ್ಕದ್ದು ಎಂದು ಕೇಂದ್ರ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬಡ್ತಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತಿದ್ದರೆ ಶೇಕಡ.75 ಸ್ಥಾನಗಳನ್ನು ಭರ್ತಿ ಮಾಡಿ ಉಳಿದವುಗಳನ್ನು ಬಡ್ತಿ ಮೂಲಕ ತುಂಬಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Shocking News: Fix Deposit ಇಟ್ಟಿದ್ದ 1 ಕೋಟಿ ಹಣವನ್ನ IPL ಬೆಟ್ಟಿಂಗ್‌ಗೆ ಬಳಸಿದ ಪೋಸ್ಟ್ ಮಾಸ್ಟರ್!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಬಡ್ತಿ ನಿರಾಕರಣೆ ಮಾಡುವಂತಿಲ್ಲ

ಅಂಗವಿಕಲರು ಎಂಬ ಕಾರಣಕ್ಕೆ ಉದ್ಯೋಗಿಗೆ ಬಡ್ತಿ ನಿರಾಕರಿಸುವಂತಿಲ್ಲ ಎಂದು 2016 ರ ಅಂಗವಿಕಲರ ಹಕ್ಕು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ.  ಸೇವೆಯಲ್ಲಿದ್ದಾಗಲೇ ಅಂಗವೈಕಲ್ಯಕ್ಕೆ ಗುರಿಯಾದಲ್ಲಿ ಅವರನ್ನು ಅದೇ ವೇತನ ಶ್ರೇಣಿ ಹಾಗೂ ಸೇವಾ ಸೌಲಭ್ಯವಿರುವ ಹುದ್ದೆಗೆ ಸ್ಥಳಾಂತರಿಸಬೇಕು.

ಇಂತದ್ದೊಂದು ಅವಕಾಶವಿಲ್ಲದಿದ್ದಲ್ಲಿ, ಅವರಿರುವ 'ಸೂಪರ್ ನ್ಯೂಮರರಿ ಪೋಸ್ಟ್‌' ಎಂದು ಪರಿಗಣಿಸಿ ಮುಂದುವರಿಸತಕ್ಕದ್ದು ಎಂದು ಹೇಳಲಾಗಿದೆ. ಅಂಗವಿಕಲರಿಗೆ ಮೀಸಲಾಗಿಡಬೇಕಾದ ಹುದ್ದೆಗಳನ್ನು ಆಯಾ ಇಲಾಖೆಯಲ್ಲಿ ಗುರುತಿಸಲಾಗಿದೆ. ಈ ಹುದ್ದೆಗಳನ್ನು ಅವರ ಬಡ್ತಿಗೆ ಪರಿಗಣಿಸತಕ್ಕದ್ದು ಎಂದು ಹೇಳಲಾಗಿದೆ.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಅಂಗವೈಕಲ್ಯದ ಹೊರತಾಗಿ ಉದ್ಯೋಗಿಯು ಸಾಮಾನ್ಯ ನಿಯಮಗಳಡಿಯಲ್ಲಿ ಅರ್ಹರಾಗಿದ್ದಲ್ಲಿ ಅಂಗವಿಕಲರ ಬಡ್ತಿ ಮೀಸಲಾತಿಯ ಹುದ್ದೆಯಲ್ಲದಿದ್ದರೂ ಅವರನ್ನು ಆ ಹುದ್ದೆಗೆ ನಿಯೋಜಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸೇವೆಗೆ ಸೇರಿದ ಬಳಿಕ ಅಂಗವಿಕಲರಾದರೆ, ಅವರನ್ನು ಅಂಗವಿಕಲರ ಬಡ್ತಿ ಮೀಸಲಾತಿಗೆ ಪರಿಗಣಿಸತಕ್ಕದ್ದು. ಆದರೆ ಅವರ ಸೇವಾ ಹಿರಿತನವು ಅಂಗವೈಕಲ್ಯಕ್ಕೆ ತುತ್ತಾದ ದಿನದಿಂದ ಪರಿಗಣಿಸಲಾಗುತ್ತದೆ.