News

ಜಾನುವಾರು ಮಾಲೀಕರಿಗೆ ಸಿಹಿಸುದ್ದಿ; ದೇಶದ ಎಲ್ಲಾ ಪಂಚಾಯತ್‌ಗಳಲ್ಲಿ ಸರ್ಕಾರ ಡೈರಿ ತೆರೆಯಲು ನಿರ್ಧಾರ!

10 October, 2022 3:01 PM IST By: Kalmesh T
Good news for diary farmers; Decision to open government diary in all panchayats of the country!

ಪಶುಸಂಗೋಪನೆಯು ದೇಶದ ರೈತರಿಗೆ ಬಹಳ ದೊಡ್ಡ ಆದಾಯದ ಮೂಲವಾಗಿದ್ದು, ಇದನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ದೇಶಾದ್ಯಂತ ಪಂಚಾಯತ್‌ಗಳಲ್ಲಿ ಡೈರಿ ತೆರೆಯಲು ನಿರ್ಧರಿಸಿದೆ. ಇಲ್ಲಿದೆ ಈ ಕುರಿತಾದ ಸಂಪೂರ್ಣ ವಿವರ

ಇದನ್ನೂ ಓದಿರಿ: 8ನೇ ತರಗತಿ ಪಾಸ್‌ ಆದವರಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ; 60,000 ವೇತನ!

ವಿಶ್ವದಲ್ಲಿ ಭಾರತವು ಹಾಲು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಇಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಹಲವಾರು ರೀತಿಯ ಸಮಸ್ಯೆಗಳಿವೆ. ಅದನ್ನು ಸರ್ಕಾರದ ಸಹಾಯದಿಂದ ಪರಿಹರಿಸಬಹುದು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಡೈರಿ ಕ್ಷೇತ್ರವು ಅಭಿವೃದ್ಧಿಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ.

ಇದು ರೈತರ ಸಮೃದ್ಧಿಯ ದೊಡ್ಡ ಸಾಧನವಾಗಬಹುದು ಎಂದು ಹೇಳಿದರು. ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಡೇರಿ ತೆರೆಯಲು ಸರ್ಕಾರ ಮುಂದಾಗಿದೆ.

ನಿಯಮಗಳ ಉಲ್ಲಂಘನೆ; ಕರ್ನಾಟಕದಲ್ಲಿ Ola, Uber, Rapido ಆಟೋ ಸೇವೆ ಸ್ಥಗಿತಗೊಳಿಸುವಂತೆ ಸರ್ಕಾರಿ ಆದೇಶ!

ಸಿಕ್ಕಿಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಗೃಹ ಸಚಿವ ಅಮಿತ್ ಶಾ ಅವರು ಭಾರತದಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಹಾಲು ಅಸಂಘಟಿತ ರೀತಿಯಲ್ಲಿ ಮಾರುಕಟ್ಟೆಗೆ ಹೋಗುತ್ತದೆ ಎಂದು ಹೇಳಿದರು.

ಹಾಗಾಗಿ ವಿದೇಶಿ ಕಂಪನಿಗಳು ದೇಶಕ್ಕೆ ಬರದಂತೆ ಸಹಕಾರದ ಮೂಲಕ ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು. ಇಷ್ಟು ಮಾತ್ರವಲ್ಲದೆ ಪಶುಸಂಗೋಪನೆಯು ರೈತರನ್ನು ಬಡತನದಿಂದ ಹೊರತರುವ ಮಾಧ್ಯಮವಾಗಿದೆ ಎಂದು ಕೂಡ ಹೇಳಿದ್ದಾರೆ.

ರೈತರಿಗೆ ಪಶುಸಂಗೋಪನೆಗೆ ಸಹಾಯಧನ ಸಿಗುತ್ತದೆ

ರೈತರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಭಾರತ ಸರ್ಕಾರದ ಸಂಸ್ಥೆಯಾದ ನಬಾರ್ಡ್, ಡೈರಿ ಫಾರ್ಮ್ ತೆರೆಯಲು ಬಯಸುವ ರೈತರಿಗೆ  25  ಪ್ರತಿಶತದವರೆಗೆ ಸಹಾಯಧನವನ್ನು ನೀಡುತ್ತದೆ.

ಅಕ್ಟೋಬರ್‌ 11ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಸೂಚನೆ! ಇಲ್ಲಿದೆ ಜಿಲ್ಲಾವಾರು ವಿವರ.

ಅದೇ  ಸಮಯದಲ್ಲಿ SC / ST  ಸಮುದಾಯದ ಜನರಿಗೆ 33.3 ಪ್ರತಿಶತದವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಒಂದು ಕುಟುಂಬದ ಒಬ್ಬ ವ್ಯಕ್ತಿ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾನೆ ಎಂಬುದು ಗಮನದಲ್ಲಿ ಇರಬೇಕಾದ ಸಂಗತಿ.

ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಲು, ನೀವು ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ನಬಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.