ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್ ನೀಡಿದ ಕೇಂದ್ರ ಸರ್ಕಾರ. ಸಿಲಿಂಡರ್ ಬೆಲೆಯಲ್ಲಿ ಇಳಿಕೆ.
ಇದನ್ನೂ ಓದಿರಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ‘ಗ್ರೀನ್ ಅಂಬಾಸಿಡರ್ʼ ಗೌರವ: ಸಚಿವ ಸ್ಥಾನಮಾನ ನೀಡುವುದಾಗಿ ಸಿಎಂ ಭರವಸೆ!
ನವದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ (commercial cylinder) ಬೆಲೆಯಲ್ಲಿ (Pice) 198ರೂ. ಇಳಿಕೆ ಮಾಡಲಾಗಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಶುಕ್ರವಾರದಿಂದಲೇ ಜಾರಿಗೆ ಬರುವಂತೆ ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 198ರೂ. ಇಳಿಕೆಯಾಗಿದೆ.
ಕೋಲ್ಕತ್ತದಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 182ರೂ. ಇಳಿಕೆಯಾಗಿದೆ. ಇನ್ನು ಮುಂಬೈನಲ್ಲಿ 190.50ರೂ. ಕಡಿಮೆಯಾಗಿದ್ರೆ, ಚೆನ್ನೈನಲ್ಲಿ 187 ರೂ. ತಗ್ಗಿದೆ.
ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ಕೂಡ ಕರ್ಮಷಿಯಲ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿದೆ.
ಭಾರತದಿಂದ 180,000 ಟನ್ ಗೋಧಿಯನ್ನು ಖರೀದಿಸಲಿದೆ ಈಜಿಪ್ಟ್!
ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಕೆಯಿಂದ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿದೆ.
ಜೂನ್ 1ರಂದು ಕೂಡ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಆಗ 19 ಕೆಜಿ ಎಲ್ ಪಿಜಿ (LPG) ಕಮರ್ಷಿಯಲ್ ಸಿಲಿಂಡರ್ (commercial cylinder) ಬೆಲೆಯಲ್ಲಿ 135ರೂ. ಇಳಿಕೆ ಮಾಡಲಾಗಿತ್ತು.
ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರ
ಮೇನಲ್ಲಿ ಎರಡು ಬಾರಿ ಏರಿಕೆ ಕಂಡಿದ್ದ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ (domestic LPG cylinder) ಬೆಲೆಯಲ್ಲಿ ಮಾತ್ರ ಇಂದು ಯಾವುದೇ ಬದಲಾವಣೆಯಾಗಿಲ್ಲ.
13 ಕೋಟಿ ರೈತರಿಗೆ ಸಿಹಿಸುದ್ದಿ: ₹2516 ಕೋಟಿ ಬಜೆಟ್ ಹಂಚಿಕೆ, 63,000 ಕೃಷಿ ಪತ್ತಿನ ಸಹಕಾರ ಸಂಘಗಳ ಕಂಪ್ಯೂಟರೀಕರಣ!
14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಮೇ 19ರಂದು ಎಷ್ಟಿತ್ತೋ ಅಷ್ಟೇ ಇದೆ. ಪ್ರಸ್ತುತ ರಾಜ್ಯದಲ್ಲಿ 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 1,002 ರೂ.ಇದೆ.
ದೇಶಾದ್ಯಂತ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರ ಸಾವಿರದ ಗಡಿ ದಾಟಿದೆ. ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಬಡ ವರ್ಗದ ಜನರಿಗೆ ಎಲ್ ಪಿಜಿ (LPG) ಸಬ್ಸಿಡಿಯನ್ನು (Subsidy) ಘೋಷಿಸಿದೆ.