News

Gold Rate ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ: ಖರೀದಿದಾರರಿಗೆ ಶಾಕ್‌!

06 March, 2023 4:08 PM IST By: Hitesh
Gold Rate Increase in gold price again: Shock for buyers!

ರಾಜ್ಯದಲ್ಲಿ ಚಿನ್ನ ಖರೀದಿದಾರರಿಗೆ ಸೋಮವಾರವೂ ನಿರಾಸೆ ಮೂಡಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಈ ವಾರವೂ ಚಿನ್ನದ ಬೆಲೆ ಏರಿಕೆ ಆಗಿರುವುದು ವರದಿ ಆಗಿದೆ.

ಸೋಮವಾರ 24 ಕ್ಯಾರಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 5,185 ರೂಪಾಯಿ ಆಗಿದೆ.

ಕಳೆದ ವಾರಾಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆ ಆಗುವ ಮುನ್ಸೂಚನೆ ಕಂಡುಬಂದಿತ್ತು. ಆದರೆ, ಇದೀಗ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಹೆಚ್ಚಳವಾಗುತ್ತಲೇ ಇದೆ.  

ಸಾಹಸ ಕ್ರೀಡೆಗಾಗಿ ಜೀವದ ಹಂಗು ತೊರೆದ ಜ್ಯೋತಿರಾಜ್!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10ಗ್ರಾಂಗೆ 51,900 ರೂಪಾಯಿ ಆಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿಯೂ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ವರದಿ ಆಗಿದೆ.

ರಾಜ್ಯದ ಪ್ರಮುಖ ನಗರಗಳ ಚಿನ್ನದ ಗಮನಿಸುವುದಾದರೆ, ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಿನ್ನದ ಬೆಲೆ 51,950 ರೂಪಾಯಿ ಆಗಿದೆ.  

Heat wave ರಾಜ್ಯದಲ್ಲಿ ಶಾಖದ ಅಲೆ: ಹವಾಮಾನ ಇಲಾಖೆ ಮುನ್ಸೂಚನೆ 

Gold Rate Increase in gold price again: Shock for buyers!

ಚೆನ್ನೈನಲ್ಲಿ 52,510 ರೂಪಾಯಿ ಆಗಿದ್ದು, ಮುಂಬೈನಲ್ಲಿ 51,850 ರೂಪಾಯಿ ಆಗಿದ್ದು, ಇನ್ನು ಕೊಲ್ಕತ್ತಾ ನಗರದಲ್ಲಿ ಚಿನ್ನದ ಬೆಲೆಯು 51,850 ರೂಪಾಯಿ ಆಗಿದೆ.   

ಮಾರುಕಟ್ಟೆಯಲ್ಲಿ ಚಿನ್ನದ ದರವು ಏರಿಕೆ ಆಗಿದೆ. ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯು 5,185 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 5,655 ರೂಪಾಯಿ ಆಗಿದೆ.  

ಎಂಟು ಗ್ರಾಂನ 22 ಕ್ಯಾರಟ್ ಆಭರಣದ ಚಿನ್ನದ ಬೆಲೆ 41,480 ರೂಪಾಯಿ ಇದ್ದರೆ, 24 ಕ್ಯಾರಟ್ ಚಿನ್ನದ ಬೆಲೆ 45,240 ರೂಪಾಯಿ ಆಗಿದೆ.

ಇನ್ನು ಹತ್ತು ಗ್ರಾಂ 22 ಕ್ಯಾರಟ್ ಆಭರಣದ ಚಿನ್ನದ ಬೆಲೆ 51,850 ರೂಪಾಯಿ ಆಗಿದೆ.

24 ಕ್ಯಾರಟ್ ಬಂಗಾರದ ಬೆಲೆ 56,550 ರೂಪಾಯಿ ಆಗಿದೆ. ನೂರು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 5,18,500 ರೂಪಾಯಿ  ಆಗಿದೆ.

24 ಕ್ಯಾರಟ್ ಬಂಗಾರದ ಬೆಲೆ 5,65,500 ರೂಪಾಯಿ ಮುಟ್ಟಿದೆ.   

ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಸಿಹಿಸುದ್ದಿ: ನ್ಯಾನೊ ಲಿಕ್ವಿಡ್‌ ಡಿಎಪಿ ರಸಗೊಬ್ಬರ ಪರಿಚಯ! 

Gold Rate Increase in gold price again: Shock for buyers!

ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. ಪ್ರತಿ 10 ಗ್ರಾಂ ಬೆಳ್ಳಿ 700 ರೂಪಾಯಿ, 100 ಗ್ರಾಂ

7,000 ಸಾವಿರ ರೂಪಾಯಿ ಹಾಗೂ 1000 *(ಕೆಜಿ) ಬೆಳ್ಳಿ ಬೆಲೆ 70,000 ಸಾವಿರ ರೂಪಾಯಿ ಆಗಿದೆ.    

ನೀವೀಗ ಗೂಗಲ್‌ ಪೇನ ಮೂಲಕವೂ ಚಿನ್ನ ಖರೀದಿ ಮಾಡಬಹುದಾಗಿದೆ.  

ಆಗಿದ್ದರೆ, ಗೂಗಲ್‌ ಪೇನ ಮೂಲಕ ಚಿನ್ನ ಖರೀದಿಸುವುದು ಇದೀಗ ಸುಲಭವಾಗಿದೆ.

  • ಗೂಗಲ್‌ ಪೇ  ಮೂಲಕ ಚಿನ್ನ ಖರೀದಿ ಮಾಡುವ ವಿಧಾನಗಳ ವಿವರ ಇಲ್ಲಿದೆ. 
  • ಮೊದಲನೇ ಹಂತ: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಅಥವಾ ಜಿಪೇ ಆಪ್ ತೆರೆಯಿರಿ
  • ಎರಡನೇ ಹಂತ: ಆದ್ಯತೆಯ ನಿಮ್ಮ ಪಾವತಿ ವಿಧಾನ ಆಯ್ಕೆಮಾಡಿ ಮತ್ತು ಪಾವತಿ  ಮಾಡಿರಿ 
  • ನಾಲ್ಕನೇ ಹಂತ: ನೀವು ಎಷ್ಟು ರೂಪಾಯಿಯ ಚಿನ್ನವನ್ನು ಖರೀದಿ ಮಾಡಲು ಬಯಸುತ್ತೀರಿ ಎಂದು ಅದರಲ್ಲಿ ನಿಖರವಾಗಿ ನಮೂದಿಸಿ 
  • ಐದನೇ ಹಂತ: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ, Buy Gold ಮೇಲೆ ಕ್ಲಿಕ್ ಮಾಡಿ (ಇಲ್ಲಿ ನಿಮಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ತೆರಿಗೆ ಸಮೇತ ತೋರಿಸಲಾಗುತ್ತದೆ)
  • ಇನ್ನು ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ. 
  • ಈ ರೀತಿ ಖರೀದಿಯಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಬಳಕೆದಾರರು ಖರೀದಿಸಬೇಕಾದ ಕನಿಷ್ಠ ಚಿನ್ನದ ಮೊತ್ತವು 1 ಗ್ರಾಂ ಖರೀದಿಸಬೇಕಾಗಿದೆ.  

ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ: ಸಿ.ಎಂ ಬೊಮ್ಮಾಯಿ