News

ಕೃಷಿ ವೃತ್ತಿಯಲ್ಲ ಅದೊಂದು ಮಹಾನ್‌ ಸಂಸ್ಕೃತಿ: ಮಾಜಿ ಕೇಂದ್ರ ಸಚಿವ ಪ್ರತಾಪ್‌  ಚಂದ್ರ ಸಾರಂಗಿ

05 August, 2022 2:56 PM IST By: Maltesh
Former Minister of State pratap chandra sarangi participate in krishi jagran ki chaupal

ಸಂಸ್ಕೃತಿ ಹಾಗೂ ವಿಜ್ಞಾನ ನಮ್ಮ ಭಾರತೀಯ ಕೃಷಿ ಪದ್ಧತಿಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಇದು ನಮ್ಮ ಕೃಷಿಯಲ್ಲಿ ಮಹತ್ತರ ಕೊಡುಗೆಯನ್ನು ನೀಡಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ  ಪ್ರತಾಪ್‌ ಚಂದ್ರ ಸಾರಂಗಿ ಹೇಳಿದರು.

Former Minister of State pratap chandra sarangi participate in krishi jagran ki chaupal

ಕೃಷಿ ಜಾಗರಣದ KJ ಚೌಪಲ್‌ನಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವಯವ ಕೃಷಿ ದೇಶದ ಭವಿಷ್ಯ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿ ವಿಜ್ಞಾನ ಮತ್ತು ಸಂಪ್ರದಾಯಗಳೆರಡೂ ಭಾರತೀಯ ಕೃಷಿಗೆ ಹೇಗೆ ನಿಕಟ ಸಂಬಂಧ ಹೊಂದಿವೆ ಎಂಬುದರ ಕುರಿತು ತಿಳಿಸಿದರು. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಜ್ಞಾನವನ್ನೇ ನೆಚ್ಚಿಕೊಂಡರೆ ಕೆಲವೊಮ್ಮೆ ಕೃಷಿಗಾಗಿ ತ್ಯಾಗ ಮಾಡಬೇಕಾಗುತ್ತದೆ ಎಂದರು

ಅಭಿವೃದ್ಧಿ ಹೆಸರಲ್ಲಿ ಇಂದು ಕೀಟನಾಶನ, ಕೆಮಿಕಲ್ಸ್ ಗಳನ್ನ ಬಳಸಿ ಭೂಮಿಯನ್ನು ಬರಡು ಮಾಡಲಾಗುತ್ತಿದೆ. ಇದನ್ನು ಅಭಿವೃದ್ಧಿ ಎಂದು ಕರೆಯಲಾಗುವುದಿಲ್ಲ. ಇಡಿ ಜಗತ್ತಿಗೆ ಅನ್ನ ನೀಡುವವರು ರೈತರು. ಕೃಷಿ ಒಂದು ಉದ್ಯಮವಲ್ಲ, ಕೃಷಿಯೊಂದು ವೃತ್ತಿಯೂ ಅಲ್ಲ ಅದೊಂದು ಮಹಾನ್ ಸಂಸ್ಕೃತಿ, ಪವಿತ್ರವಾದ ಕಾರ್ಯವಾಗಿದೆ. ಕೃಷಿ ನಮ್ಮ ಭಾರತೀಯರ ಪಾಲಿಗೆ ಒಂದು ದೈವಿ ಕ್ರಿಯೆಯಾಗಿದೆ .

ನೂತನ ICAR ಮಹಾ ನಿರ್ದೇಶಕರನ್ನು ಭೇಟಿ ಮಾಡಿ ಶುಭ ಕೋರಿದ ಕೃಷಿ ಜಾಗರಣ ತಂಡ

Former Minister of State pratap chandra sarangi participate in krishi jagran ki chaupal

ಕೃಷಿಯನ್ನ ಮೊದಲೆಲ್ಲ ಯಜ್ಞ ಮಾಡುವ ಮೂಲಕ ಆರಂಭ ಮಾಡಲಾಗುತ್ತಿತ್ತು. ಯಜ್ಞ ದಲ್ಲಿ ಇಂದ್ರ, ಅಗ್ನಿ, ವರುಣ, ವಾಯು, ಹೀಗೆ ಪ್ರಕೃತಿ ದೇವರನ್ನು ಪೂಜಿಸಿ ಸಕಲವನ್ನು ಸರಿಯಾಗಿ ನೀಡುವಂತೆ ಬೇಡಿಕೊಂಡು ಕೃಷಿ ಚಟುವಟಿಕೆ ಆರಂಭ ಮಾಡಲಾಗುತ್ತಿತ್ತು.‌ ಆದರೆ ಇಂದು ಕೃಷಿಯನ್ನು ಉದ್ಯಮವನ್ನಾಗಿ ತಪ್ಪು ಗ್ರಹಿಸಿ ಮಾಡಲಾಗುತ್ತಿದೆ. ಇದಕ್ಕಾಗಿಯೇ ದಿನದಿಂದ ದಿನಕ್ಕೆ ರೋಗ ರುಜಿನಗಳು ಹೆಚ್ಚಾಗುತ್ತಿವೆ ಎಂದರು.

ಕಾಡು ಕಡಿದು ಟಿಂಬರ್ ಯಾರ್ಡಗಳನ್ನ ಬೆಳೆಸುತ್ತಿದ್ದೇವೆ. ಇದನ್ನ ಸಾಧನೆ ಎಂದು ಯಾವ ಲೆಕ್ಕದಲ್ಲಿ ಹೇಳುವುದು ಎಂದು ಬೇಸರ ವ್ಯಕ್ತಪಡಿಸಿದರು. ಸ್ವತಃ ನಾನು ಕೂಡ ನನ್ನ ಮನೆಯ ಪಕ್ಕದಲ್ಲಿ ಸಾವಯವ ತರಕಾರಿಗಳನ್ನ ಬೆಳೆಯುತ್ತಿದ್ದೆ. ರಾಸಾಯನಿಕ ವನ್ನ ಬಳಸದೆಯೇ ಬೆಳೆಸುತ್ತಿದ್ದೆ ಎಂದು ಅವರು ಸಾವಯವ ಕೃಷಿಯ ಮಹತ್ವ ತಿಳಿಸಿದರು.

ಭಾರತೀಯ ಸಂಸ್ಕೃತಿ ಇದೆಯಲ್ಲ ಅದು ಕೃಷಿ ಸಂಸ್ಕೃತಿ. ಇದು ಜಗತ್ತಿಗೆ ಕೃಷಿ ಸಂಸ್ಕೃತಿಯನ್ನು ತಿಳಿಸಿಕೊಟ್ಟ ರಾಷ್ಟ್ರ. ಇದು ನಮಗೆಲ್ಲ ಹೆಮ್ಮೆಯ ವಿಚಾರ.

ಸಂಸದ ಸಾರಂಗಿ ಅವರನ್ನು ಅವರನ್ನು ಕೃಷಿ ಜಾಗರಣ ತಂಡ ಆತ್ಮೀಯವಾಗಿ ಸ್ವಾಗತಿಸಿದರು. ಕೃಷಿ ಜಾಗರಣ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಎಂ ಸಿ  ಡೊಮಿನಿಕ್ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Former Minister of State pratap chandra sarangi participate in krishi jagran ki chaupal