ಮಲೆನಾಡು ಭಾಗದಲ್ಲಿ ಅಡಿಕೆಗೆ ನಿರ್ದಿಷ್ಟ ಕೀಟ ದಾಳಿ ಮಾಡಿದ್ದು, ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಈ ಕೀಟಕ್ಕೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರ್ಷಕ್ಕೆ 12 ಸಾವಿರ ರೂ ಸ್ಕಾಲರ್‌ಶಿಪ್..ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ವಾಣಿಜ್ಯ ಬೆಳೆಗಳಲ್ಲಿ ಹರಡುವ ಕೀಟಗಳ ದಾಳಿಯನ್ನು ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇನ್ನು ಅಡಿಕೆಯಲ್ಲಿ ಕಂಡುಬಂದಿರುವ ಎಲೆಚುಕ್ಕಿ ರೋಗಕ್ಕೆ ಕ್ರಿಮಿನಾಶಕ ಸಿಂಪಡಣೆಗೆ ಸರಕಾರ 10 ಕೋಟಿ ಅನುದಾನ ಮಂಜೂರು ಮಾಡಿದೆ.
ಕೃಷಿ ವಿಜ್ಞಾನಿಗಳು ಕೀಟದ ಕಾರಣವನ್ನು ನಿರ್ಧರಿಸಿದ ನಂತರ, ಸರ್ಕಾರವು ಅಗತ್ಯ ಚಿಕಿತ್ಸೆ ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಬಳಸಿ PhonePe ಆಕ್ಟಿವೇಟ್ ಮಾಡುವುದು ಹೇಗೆ..?
2022-23ನೇ ಸಾಲಿನ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ
2022-23ನೇ ಸಾಲಿನ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಪ್ರಶಸ್ತಿ ಯೋಜನೆಯಡಿ ರೈತ ಮಹಿಳೆ ಹಾಗೂ ರೈತರಿಗೆ ಪ್ರಶಸ್ತಿ ನೀಡುವ ಮೂಲಕ ಕೃಷಿ ವಲಯದ ಉತ್ಪಾದನೆ ಹೆಚ್ಚಿಸಲು
ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ಉದ್ದೇಶದಿಂದ ಹಿಂಗಾರು ಬೆಳೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತ ರೈತರಿಗೆ ಕೃಷಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಪ್ರಮುಖ ಬೆಳೆಯಾದ ಕಡಲೆ (ಮಳೆಯಾಶ್ರಿತ) ಬೆಳೆಗೆ ರೈತರು ಹೆಸರನ್ನು ನೊಂದಾಯಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಸಹಾಯಕ ಕೃಷಿ
ನಿರ್ದೇಶಕರು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬಿಗ್‌ನ್ಯೂಸ್: ರಾಜ್ಯದ 34 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ತಿರ್ಮಾನ..ಸಿಎಂ ಘೋಷಣೆ
ಕಬ್ಬಿನ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ: ಮುಧೋಳ್‌ನಲ್ಲಿ ನ.19ರ ವರೆಗೆ ನಿಷೇಧಾಜ್ಞೆ ಜಾರಿ
ಕಬ್ಬಿನ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ: ಮುಧೋಳ್‌ನಲ್ಲಿ ನ.19ರ ವರೆಗೆ ನಿಷೇಧಾಜ್ಞೆ ಜಾರಿ
ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರಾಜ್ಯದ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮುಧೋಳ್ ಬಂದ್‌ಗೆ ಕರೆ ನೀಡಲಾಗಿತ್ತು.
ಪ್ರತಿಭಟನೆ ಕಾವು ಹೆಚ್ಚಾಗಿರುವುದರಿಂದ ಬಾಗಲಕೋಟೆಯ ಮುಧೋಳ್‌ನಲ್ಲಿ ನವೆಂಬರ್ 19 ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳಿಗ್ಗೆಯೇ ಸಾವಿರಾರೂ ರೈತರು ಜಮಾಯಿಸಿದ್ದರು.
ರಾಯಣ್ಣ ವೃತ್ತ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಇನ್ನು ರೈತರ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಸಾಥ್ ನೀಡಿವೆ.
ಕೋರ್ಟ್ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ ಈಡೇರದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಗೆ ಕರೆ ನೀಡಿದ್ದರು.
ಗುರುವಾರವೂ ಮುಧೋಳ್‌ನ ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಯಿತು. ಪ್ರತಿ ಟನ್ ಕಬ್ಬಿಗೆ ₹2900 ರೂಪಾಯಿ ನೀಡುವಂತೆ ರೈತರು ಪಟ್ಟುಹಿಡಿದಿದ್ದಾರೆ. ಆದರೆ,
2800 ರೂಪಾಯಿಯಿಂದ ಕಾರ್ಖಾನೆಯ ಮಾಲೀಕರು ಹಿಂದೆ ಸರಿದಿಲ್ಲ.
“ಫುಡ್ ಸಿಸ್ಟಂಸ್ ಫಾರ್ ಇಂಡಿಯಾ ಸಂವಾದ” ಆಹಾರ ನಿರ್ವಹಣೆಯ ಬಗ್ಗೆ ಚರ್ಚೆ
ಭಾರತ್ ಕ್ರಿಶಕ್ ಸಮಾಜ ಹಾಗೂ ಸಾಕ್ರಾಟಸ್ ಫೌಂಡೇಷನ್ ಸಹಯೋಗದಲ್ಲಿ ಬುಧವಾರ ಇಂಡಿಯಾ ಇಂಟರ್‌ನ್ಯಾಷನಲ್
ಸೆಂಟರ್‌ನ ಕಮಲಾದೇವಿ ಮಲ್ಟಿಪರ್ಪಸ್ ಸಭಾಂಗಣದಲ್ಲಿ “ಫುಡ್ ಸಿಸ್ಟಂಸ್ ಫಾರ್ ಇಂಡಿಯಾ ಸಂವಾದ” ಕಾರ್ಯಕ್ರಮ ನಡೆಯಿತು.
ಆಹಾರ ಸರಪಳಿ ಹಾಗೂ ವ್ಯವಸ್ಥೆ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಡಾ.ಡೇವಿಡ್ ನಬಾರೊ ಅವರು ಪ್ರಸ್ತುತಿಪಡಿಸಿದರು. ಸಭೆಯನ್ನು ಉದ್ದೇಶಿಸಿ
ಎನ್‌ಐಟಿಐ ಆಯೋಗದ ಸದಸ್ಯರಾದ ಡಾ. ರಮೇಶ್ ಚಂದ್ ಮಾತನಾಡಿದರು. ಐಎಎಸ್ ನಿವೃತ್ತ ಕಾರ್ಯದರ್ಶಿ ಟಿ ನಂದ್‌ಕುಮಾರ್ ಹಾಜರಿದ್ದರು.
ಸಂವಾದದಲ್ಲಿ ಹತ್ತು ವಿಷಯ ತಜ್ಞರು ವಿಷಯ ಮಂಡನೆ ಮಾಡಿದರು, 200ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
---------
ಹರಿಯಾಣದಲ್ಲಿ ಕ್ರಾಪ್ ಗ್ರೂಪ್ ಡೆವಲಪ್‌ಮೆಂಟ್ ಯೋಜನೆ ಜಾರಿ
ಹರಿಯಾಣದಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಹರಿಯಾಣದ ತೋಟಗಾರಿಕೆ ಇಲಾಖೆಯು ಗುರುವಾರ ಕ್ರಾಪ್ ಗ್ರೂಪ್ ಡೆವಲಪ್‌ಮೆಂಟ್
ಯೋಜನೆಯಡಿ ಸೋನೆಪತ್‌ನಲ್ಲಿ ಕ್ರಾಪ್ ಗ್ರೂಪ್ ಸೆಂಟರ್ ಸೇರಿದಂತೆ 30 ಸಮಗ್ರ ಆಹಾರ ಸಂಗ್ರಹಣಾ ಕೇಂದ್ರ ಸ್ಥಾಪಿಸಿದೆ.
ಈ ಕೇಂದ್ರಗಳ ಉದ್ಘಾಟನೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ತೋಮರ್ ಉದ್ಘಾಟಿಸಲಿದ್ದು, ಹರಿಯಾಣದ ಕೃಷಿ ಸಚಿವ ಜೆಪಿ ದಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
-----
ಆಯುರ್ವೆಟ್‌ನ ಹೆಡ್ ಆಫ್ ಮಾರ್ಕೆಟಿಂಗ್ ಟೆಕ್ನಿಕಲ್ ಸರ್ವಿಸ್ ಆಯಂಡ್ ಇನ್ಸ್‌ಟಿಟ್ಯೂಟ್ ಆಫ್ ಬಿಸನೆಸ್‌ನ ಡಾ. ದೀಪಕ್ ಭಾಟಿಯಾ ಅವರು ನವದೆಹಲಿಯ ಕೃಷಿ ಜಾಗರಣ ಕೇಂದ್ರ ಕಚೇರಿಗೆ ಬುಧವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆಯುರ್ವೆಟ್ ಮತ್ತು ಕೃಷಿಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಸಂಪಾದಕ ಎಂ.ಸಿ. ಡೊಮಿನಿಕ್, ನಿರ್ದೇಶಕಿ ಶೈನಿ ಡೊಮಿನಿಕ್ ಹಾಗೂ ಕೃಷಿ ಜಾಗರಣ ಸಿಒಒ ಡಾ.ಪಿ.ಕೆ ಪಂತ್ ಉಪಸ್ಥಿತರಿದ್ದರು.
ಇದು ಈ ಹೊತ್ತಿನ ಟಾಪ್ ಅಗ್ರಿ ನ್ಯೂಸ್ ಹೆಚ್ಚಿನ ಮಾಹಿತಿಗಾಗಿ ಕೃಷಿ ಜಾಗರಣ ವೀಕ್ಷಿಸಿ