34 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತ ಸಂಘಟನೆಯಿಂದ ಡಿಸೆಂಬರ್ 19ರಂದು ಮಂಡ್ಯ ನಗರ ಬಂದ್ ಗೆ ಕರೆ ನೀಡಲಾಗಿದೆ.
ಹೊಸ ವರ್ಷಕ್ಕೂ ಮುನ್ನವೇ ರೈತರ ಕೈತಲುಪಲಿದೆಯೇ ಪಿಎಂ ಕಿಸಾನ್ 13ನೇ ಕಂತು! ಇಲ್ಲಿದೆ ವಿವರ
ಟನ್ ಕಬ್ಬಿಗೆ 4500 ರೂಪಾಯಿ ಹಾಗೂ ಲೀಟರ್ ಹಾಲಿಗೆ 40 ರೂಪಾಯಿ ನೀಡಬೇಕೆಂದು ಕಳೆದ 34 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸುತ್ತಿದೆ.
ಈ ಕಾರಣದಿಂದ ರೈತ ಸಂಘ ಡಿ. 19ರಂದು ಮಂಡ್ಯ ನಗರ ಬಂದ್ ಗೆ ಕರೆ ನೀಡಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧು ಚಂದನ್ ಹಾಗೂ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
20 ಲಕ್ಷಕ್ಕೂ ಹೆಚ್ಚು ರೈತರಿಗೆ ಬರಲ್ಲ ಪಿಎಂ ಕಿಸಾನ್ 13 ನೇ ಕಂತಿನ ಹಣ! ಯಾಕೆ ಗೊತ್ತೆ?
ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸರ್ಕಾರ ರೈತರ ಮನವಿಗೆ ಸ್ಪಂದಿಸಿಲ್ಲ. ಆದ್ದರಿಂದ ನಗರ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಮಾಲೀಕರು, ಹೋಟೆಲ್ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಅವರು ಹೇಳಿದರು.
ಅಂದು ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಂದ್ ಮಾಡಲಾಗುವುದು. ಸಾರ್ವಜನಿಕರಿಗೆ ಅನಾನುಕೂಲ ಆಗಬಾರದೆಂದು ಸಮಯವನ್ನು ಮಧ್ಯಾಹ್ನಕ್ಕೆ ಮೀಸಲಿರಿಸಲಾಗಿದೆ ಎಂದರು.
300 ಚೀಲ ಗಡ್ಡೆಕೋಸು ಮಾರಿದ ರೈತನಿಗೆ 70,000 ನೀಡುವುದಾಗಿ ನಂಬಿಸಿ ಕೇವಲ 600 ರೂ ನೀಡಿ ಮೋಸ!
ಕಬ್ಬಿನ ಉತ್ಪನ್ನಗಳಿಂದ ಮದ್ಯ ತಯಾರು ಮಾಡಲಾಗುತ್ತಿದೆ. ಪ್ರತಿ ಟನ್ ಕಬ್ಬಿನಿಂದ ಸುಮಾರು 60 ಲೀಟರ್ ಮದ್ಯವನ್ನು ಉತ್ಪಾದನೆ ಮಾಡಲಾಗುತ್ತಿದ್ದು, ವಾರ್ಷಿಕ ಅಂದಾಜು 30 ಸಾವಿರ ಕೋಟಿ ರೂ ಸರ್ಕಾರಕ್ಕೆ ಆದಾಯ ಬರುತ್ತಿದೆ.
ಇದರಲ್ಲಿ ಶೇ.10ರಷ್ಟು ಲಾಭವನ್ನು ಕೊಟ್ಟರೂ ರೈತರಿಗೆ ಅನುಕೂಲವಾಗಲಿದೆ. ಆದರೆ ಸರ್ಕಾರಕ್ಕೆ ರೈತರಿಗೆ ಒಳ್ಳೆಯದಾಗುವುದು ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.