News

ಗುಡ್‌ನ್ಯೂಸ್‌: ರೈತರ ಬೆಳೆ ವಿಮೆ ಬಾಕಿ ಮೊತ್ತ ₹16.52 ಕೋಟಿ ಬಿಡುಗಡೆ; ಸಿಎಂ ಬೊಮ್ಮಾಯಿ

17 September, 2022 5:31 PM IST By: Kalmesh T
Farmers crop insurance outstanding amount of ₹16.52 crore released

ಹಾವೇರಿ ಜಿಲ್ಲೆಯಲ್ಲಿ ಬಹು ವರ್ಷಗಳಿಂದ ತಾಂತ್ರಿಕ ಕಾರಣಗಳಿಗಾಗಿ ಬಾಕಿ ಉಳಿದಿದ್ದ ರೈತರ ಬೆಳೆ ವಿಮೆ ಮೊತ್ತ ಬಿಡುಗಡೆಯ ಬೇಡಿಕೆಯನ್ನು ಈಡೇರಿಸಿದ್ದು, ಜಿಲ್ಲೆಯ 9,204 ರೈತರಿಗೆ ಪಾವತಿಸಬೇಕಾದ ಬೆಳೆವಿಮೆ ಬಾಕಿ ಮೊತ್ತ 16.52 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ICAR ನ KRITAGYA ಕಾರ್ಯಾಗಾರ; ₹5 ಲಕ್ಷ ಗೆಲ್ಲುವ ಭರ್ಜರಿ ಅವಕಾಶ! ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ ತಿಳಿಯಿರಿ..

ಜಿಲ್ಲೆಯ 8, 500 ರೈತರಿಗೆ ಪಾವತಿಸಬೇಕಾದ 16.52 ಕೋಟಿ ರೂಪಾಯಿ ಬೆಳೆ ವಿಮೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲಾಗಿದ್ದು, ವಿಮಾ ಮೊತ್ತವನ್ನು ಕೂಡಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಮ್ಮ ಫೇಸಬುಕ್‌ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ರೈತರ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲೆಯ ಸಮಸ್ತ ರೈತರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಕೂಡ ಹೇಳಿದ್ದಾರೆ.

ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಬೆಳೆವಿಮೆ ತುಂಬಿ, ಬೆಳೆ ಸಮೀಕ್ಷೆ ವಿವರಗಳು ಹೊಂದಾಣಿಕೆಯಾಗದ (ತಾಳೆಯಾಗದ) ಕಾರಣ ಹಣ ಬಿಡುಗಡೆಯಾಗದೇ ಬಹುದಿನಗಳಿಂದ ನನೆಗುದಿಗೆ ಬಿದ್ದಿತ್ತು.

ಸರ್ಕಾರದಿಂದ ಗುಡ್‌ನ್ಯೂಸ್‌: ಇನ್ಮುಂದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು RTOಗೆ ಹೋಗಬೇಕಿಲ್ಲ!

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳೆವಿಮಾ ಕಂಪನಿಗೆ ಸೂಕ್ತ ಸಲ್ಲಿಸಿ ಬಾಕಿ ಬೆಳೆ ವಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವುದರ ಮೂಲಕ ರೈತರ ಬಹುದಿನಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಡೇರಿಸಿದ್ದಾರೆ.

ಬಿಡುಗಡೆಯಾದ ವಿಮಾ ಮೊತ್ತವನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗೆ ಕೂಡಲೆ ಜಮೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

#Scholarship ವಿದ್ಯಾರ್ಥಿಗಳಿಗೆ ಇಲ್ಲಿದೆ 20,000 ದಿಂದ 35,000 ಭರ್ಜರಿ ಪ್ರೋತ್ಸಾಹಧನ ..ಅರ್ಜಿ ಸಲ್ಲಿಕೆ ಹೇಗೆ?

ತಾಲ್ಲೂಕುವಾರು ವಿವರ:

ಸವಣೂರಿನ 1,307  ರೈತರಿಗೆ 72,11,30,063

ಶಿಗ್ಗಾವಿ ತಾಲ್ಲೂಕಿನ 580 ರೈತರಿಗೆ 1,51,01,823

ಹಾವೇರಿ ತಾಲ್ಲೂಕಿನ 2,341 ರೈತರಿಗೆ 74,01,03,716

ಹಾನಗಲ್ ತಾಲ್ಲೂಕಿನ 1,120 ರೈತರಿಗೆ 72,65,61,164

#ModiBirthday ಮೋದಿ ಬರ್ತಡೆ ಸ್ಪೆಷಲ್‌: ನಮೀಬಿಯಾದಿಂದ ಭಾರತಕ್ಕೆ ಬಂದ ಚಿರತೆಗಳು!

ಬ್ಯಾಡಗಿ ತಾಲ್ಲೂಕಿನ 1,788 ರೈತರಿಗೆ 4,18,18,746

ಹಿರೇಕೆರೂರು ತಾಲ್ಲೂಕಿನ 1,330 ರೈತರಿಗೆ 773,09,232

ರಾಣೇಬೆನ್ನೂರಿನ ತಾಲ್ಲೂಕಿನ 738 ರೈತರಿಗೆ 71,32,46,712 ಮೊತ್ತ ಬಿಡುಗಡೆಯಾಗಿದೆ.