News

ಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಣೆ

17 July, 2020 11:05 AM IST By:

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈತರು ಪಾವತಿಸಬೇಕಾದ  ಬೆಳೆ ಸಾಲ (crop loan) ಮರುಪಾವತಿಸಬೇಕಾದ ಅವಧಿಯನ್ನು ಆಗಸ್ಟ್‌ ಅಂತ್ಯದವರೆಗೆ ಸಹಕಾರ ಇಲಾಖೆಯು ವಿಸ್ತರಿಸಲಾಗಿದೆ.

ರೈತರಿಗೆ ಶೂನ್ಯ ಬಡ್ಡಿ (zero interest) ದರದಲ್ಲಿ  3 ಲಕ್ಷವರೆಗೆ ಅಲ್ಪಾವಧಿ ಬೆಳೆ ಸಾಲ ಮತ್ತು ಶೇ 3 ಬಡ್ಡಿ ದರದಲ್ಲಿ  10 ಲಕ್ಷವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ (agri loan) ವಿತರಣೆ ಮತ್ತು ಕಾಯಕ ಯೋಜನೆಯಡಿ ಸ್ವಸಹಾಯ ಸಂಘಗಳಿಂದ ನೀಡಲಾಗಿದ್ದ ಸಾಲ ಮರುಪಾವತಿಗೆ ಜೂನ್‌ ಅಂತ್ಯದವರೆಗೆ ಈ ಹಿಂದೆ ಅವಕಾಶ ನೀಡಲಾಗಿತ್ತು. ಕೊರೋನಾ ಹಿನ್ನೆಲೆಯಲ್ಲಿ ಸಾಲದ ಕಂತುಗಳ ಅವಧಿಯನ್ನು  ಆಗಸ್ಟ್ ವರೆಗೆ (extended) ವಿಸ್ತರಿಸಲಾಗಿದೆ.

ಮರುಪಾವತಿ ದಿನದವರೆಗೆ ಪಾವತಿಸಬೇಕಾದ ತನ್ನ ಪಾಲಿನ ಬಡ್ಡಿ ಸಹಾಯಧನ 40.11 ಕೋಟಿಯನ್ನು ಸರ್ಕಾರವು ಸಹಕಾರ ಸಂಘಗಳಿಗೆ ಪಾವತಿಸಲಿದೆ. ಸೆಪ್ಟೆಂಬರ್ ಅಂತ್ಯವರೆಗಿನ ತ್ರೈಮಾಸಿಕ ಕ್ಲೈಮ್‌ ಬಿಲ್‌ಗಳನ್ನು ಡಿಸೆಂಬರ್‌ ಅಂತ್ಯದೊಳಗೆ ನಿಬಂಧಕರು ಸಲ್ಲಿಸುವಂತೆ ಸಹಕಾರ ಇಲಾಖೆ ಆದೇಶದಲ್ಲಿ ತಿಳಿಸಿದೆ.

Read More: ಬೆಳೆ ಸಮೀಕ್ಷೆಗೆ (Bele Darshak) ಬೆಳೆ ದರ್ಶಕ್ ಆ್ಯಪ್‌