ವರ್ಷದಿಂದ ಬಡ್ಡಿ ಹಣಕ್ಕಾಗಿ ಕಾಯುತ್ತಿರುವ ಪಿಎಫ್ ಖಾತೆದಾರರು ಶೀಘ್ರದಲ್ಲೇ ಈ ಮೊತ್ತವನ್ನು ಪಡೆಯಬಹುದು. ಇಲ್ಲಿದೆ ವಿವರ
90% ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣ ಖರೀದಿಗೆ ಅರ್ಜಿ ಆಹ್ವಾನ
PF interest money: ಒಂದು ವರ್ಷದಿಂದ ಬಡ್ಡಿ ಹಣಕ್ಕಾಗಿ ಕಾಯುತ್ತಿರುವ ಪಿಎಫ್ ಖಾತೆದಾರರು ಶೀಘ್ರದಲ್ಲೇ ಈ ಮೊತ್ತವನ್ನು ಪಡೆಯಬಹುದು ಎಂದು ಕೆಲವು ಮಾಧ್ಯಮ ವರದಿಗಳು ಹೇಳುತ್ತಿವೆ.
ಪಿಎಫ್ ಖಾತೆದಾರರ ಬಡ್ಡಿ ಹಣವನ್ನು ಹೋಳಿ ಹಬ್ಬದ ಮೊದಲು ಅಂದರೆ ಫೆಬ್ರವರಿ ಅಂತ್ಯದೊಳಗೆ ಪಿಎಫ್ ಖಾತೆಗೆ ರವಾನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023 ರ ಬಜೆಟ್‌ನಲ್ಲಿ ಇಪಿಎಫ್ (EPF) ಹಿಂಪಡೆಯುವಿಕೆಯ ಮೇಲೆ ಟಿಡಿಎಸ್ (TDS)ನ್ನು ಕಡಿಮೆ ಮಾಡಿದ್ದಾರೆ. ಇದು ನೌಕರರ ಭವಿಷ್ಯ ನಿಧಿ (EPF) ಗ್ರಾಹಕರಿಗೆ ಹೆಚ್ಚಿನ ಪರಿಹಾರವನ್ನು ತಂದಿದೆ.
ಪಿಂಚಣಿದಾರರೇ ಗಮನಿಸಿ : ಫೆಬ್ರವರಿ 20ರೊಳಗೆ ಈ ಕೆಲಸ ಮಾಡುವಂತೆ ಸರ್ಕಾರದ ಸೂಚನೆ!
ಮುಖ್ಯವಾಗಿ ನೋಡುವುದಾದರೇ ಈ ಹಣವನ್ನು ಪ್ರತಿ ವರ್ಷವೂ ನವೆಂಬರ್-ಡಿಸೆಂಬರ್ನಲ್ಲಿ ಪಡೆಯಲಾಗುತ್ತದೆ. ಆದರೆ ಈ ಬಾರಿ ಬಡ್ಡಿ ಪಾವತಿ ದಾಖಲೆ ವಿಳಂಬವಾಗಿದೆ.
ಭವಿಷ್ಯ ನಿಧಿಯನ್ನು ಪ್ರತಿ ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಸ್ವಂತ ಯುನಿವರ್ಸಲ್ ಖಾತೆ ಸಂಖ್ಯೆ (UAN) ಇಪಿಎಫ್‌ಒ ಪೋರ್ಟಲ್‌ನಲ್ಲಿ (EPFO Portal) ಉತ್ಪತ್ತಿಯಾಗುತ್ತದೆ.
ಯುಎಎನ್ ಮೂಲಕ ಮಾತ್ರ ನಿಮ್ಮ ಭವಿಷ್ಯ ನಿಧಿಯ ಬಾಕಿಯನ್ನು ನೀವು ತಿಳಿದುಕೊಳ್ಳಬಹುದು. ಆದರೆ ಈ ಖಾತೆಯನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತ ಇರಬೇಕಾಗುತ್ತದೆ. ಇದಕ್ಕೆ KYC ಅನ್ನು ನವೀಕರಿಸುವ ಅಗತ್ಯವಿದೆ.
ಪಡಿತರದಾರರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್! ಏನದು ಗೊತ್ತೆ?
ನೀವು ಇಪಿಎಫ್‌ಒಗೆ (EPFO) ಕೊಡುಗೆ ನೀಡಿದ್ದರೆ, ಕೆವೈಸಿಯನ್ನು (KYC) ಇಪಿಎಫ್‌ನಲ್ಲಿ ಅಪ್‌ಡೇಟ್ ಮಾಡಿರದಿದ್ದರೆ ಅದನ್ನು ಶೀಘ್ರವೇ ನವೀಕರಿಸಿ. UAN ಮೂಲಕ EPF ಪೋರ್ಟಲ್‌ನಲ್ಲಿ ನಿಮ್ಮ ಖಾತೆಗೆ ಈ ಲಾಗಿನ್‌ಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ. ಇದರ ನಂತರ 'ನಿರ್ವಹಿಸು' ವಿಭಾಗಕ್ಕೆ ಹೋಗಿ ಮತ್ತು 'KYC' ಮೇಲೆ ಕ್ಲಿಕ್ ಮಾಡಿ
ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ ಮತ್ತು ಡಾಕ್ಯುಮೆಂಟ್ ಅನ್ನು ಅಪ್ಡೇಟ್ ಮಾಡಲು ಬಾಕ್ಸ್ ಅನ್ನು ಟಿಕ್ ಮಾಡಿ. 'ಬಾಕಿ ಇರುವ KYC' ವಿಭಾಗದಲ್ಲಿ 'ಉಳಿಸು' ಕ್ಲಿಕ್ ಮಾಡಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಬಜೆಟ್‌ನಲ್ಲಿ ಇಪಿಎಫ್ ಹಿಂಪಡೆಯುವಿಕೆಯ ಮೇಲೆ ಟಿಡಿಎಸ್ ಅನ್ನು ಕಡಿಮೆ ಮಾಡಿದ್ದಾರೆ. ಇದು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಗ್ರಾಹಕರಿಗೆ ಹೆಚ್ಚಿನ ಪರಿಹಾರವನ್ನು ತಂದಿದೆ.
ಸಿಹಿ ಸುದಿ: ಪಿಎಂ ಆವಾಸ್ ಯೋಜನೆ ವೆಚ್ಚ 79,000 ಕೋಟಿಗೆ ಹೆಚ್ಚಳ
ಹೊಸ ಬಜೆಟ್ ಯೋಜನೆಯಲ್ಲಿ, ಇಪಿಎಫ್ ಖಾತೆಗಳ ಮೇಲಿನ ಟಿಡಿಎಸ್ ಕಡಿತವನ್ನು ಶೇಕಡಾ 30 ರಿಂದ ಶೇಕಡಾ 20 ಕ್ಕೆ ಇಳಿಸಲಾಗಿದೆ.
ಖಾತೆಗೆ ಪ್ಯಾನ್(PAN) ಅನ್ನು ಲಿಂಕ್ ಮಾಡದ ಖಾತೆದಾರರು ಈಗ ಹಿಂಪಡೆಯುವ ಸಮಯದಲ್ಲಿ ಕಡಿಮೆ ಟಿಡಿಎಸ್ ಪಾವತಿಸಬೇಕಾಗುತ್ತದೆ ಎಂದು ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಪಿಎಫ್ ಹೊಂದಿರುವವರಿಗೆ ಸಲಹೆ ನೀಡಿದ್ದಾರೆ.
ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಇಪಿಎಫ್ ಖಾತೆಯನ್ನು ತೆರೆದ 5 ವರ್ಷಗಳೊಳಗೆ ಮೊತ್ತವನ್ನು ಹಿಂಪಡೆದರೆ ಇಪಿಎಫ್‌ನಿಂದ ಟಿಡಿಎಸ್ ಕಡಿತಗೊಳ್ಳುತ್ತದೆ. ಆದರೆ 5 ವರ್ಷಗಳಲ್ಲಿ ಹಿಂಪಡೆಯುವಿಕೆ ಮಾಡಿದರೆ, ನಂತರ 10 ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.