News

EPFO ಬಿಗ್‌ Update: PF ಬಡ್ಡಿ ಹಣವು ಖಾತೆಗೆ ಜಮೆ ಆಗೋದು ಯಾವಾಗ..?

13 May, 2022 10:49 AM IST By: Maltesh
EPFO interest rate

EPF ಖಾತೆದಾರರಿಗೆ ಮತ್ತೊಂದು ನ್ಯೂಸ್‌ ಲಭ್ಯವಾಗಿದ್ದು,  ಕೇಂದ್ರು ಮುಂದಿನ ತಿಂಗಳ ಅಂತ್ಯದಲ್ಲಿ ಬಡ್ಡಿ ದರವನ್ನು PF ಖಾತೆದಾರರ ಖಾತೆಗಳಿಗೆ ವರ್ಗಾಯಿಸಲಾಗುವುದು ಎನ್ನಲಾಗುತ್ತಿದೆ.  ಹೌದು ಸರ್ಕಾರವು ಮುಂದಿನ ತಿಂಗಳ ಅಂತ್ಯದ ಮೊದಲು ಅಂದರೆ ಜೂನ್ 30 ರ ಮೊದಲು ಯಾವುದೇ ಸಮಯದಲ್ಲಿ PF ಖಾತೆದಾರರಿಗೆ ಬಡ್ಡಿ ಹಣವನ್ನು ವರ್ಗಾಯಿಸಬಹುದು ಎಂದು ವರದಿಗಳಾಗುತ್ತಿವೆ.

ಯಾವಾಗಲೂ ಪಿಎಫ್ ಬಡ್ಡಿಯ ದರವನ್ನು ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ ತಿಂಗಳಲ್ಲಿ ಜಮಾ ಮಾಡಲಾಗುತ್ತದೆ. ವಿಶೇಷ ಎಂಬಂತೆ ಈ ಬಾರಿ ಕಡಿಮೆ ಬಡ್ಡಿಯ ವಿಧಿಸಿರುವುದರಿಂದ  ಇಪಿಎಫ್‌ಒ  ಬಡ್ಡಿ ದರವನ್ನು ವರ್ಗಾವಣೆ ಮಾಡಲು ಡಿಸೆಂಬರ್‌ ವರೆಗೆ ಕಾಯುವುದಿಲ್ಲ ಎನ್ನಲಾಗುತ್ತಿದೆ. ಇದು ಇಪಿಎಫ್‌ಒನ ಆರೂವರೆ ಕೋಟಿಗೂ ಹೆಚ್ಚು ಚಂದಾದಾರರಿಗೆ ಪ್ರಯೋಜನವಾಗಲಿದೆ.

ಅದೇ ಸಮಯದಲ್ಲಿ, EPFO ದಸರಾ ಹಬ್ಬದ  ಆರಂಭವಾಗುವ  ಮೊದಲು ಬಡ್ಡಿ ಹಣವನ್ನು ಕ್ರೆಡಿಟ್ ಮಾಡಬಹುದು ಎಂಬ ಪ್ರತ್ಯೇಕೆ ಚರ್ಚೆಯೊಂದು ಕೂಡ ಸ್ದಿಲ್ಲದೆ ಆರಂಭವಾಗಿದೆ. ಆದರೆ ಈ ಕೆರಡು ಈ ವಿಷಯಗಳು ಕುರಿತು ಇನ್ನು ಸರ್ಕಾರದಿಂದಾಗಲಿ ಅಥಚವಾ EPFO ದಿಂದಾಗಲಿ ಯಾವುದೇ ಮಾಹಿತಿ ಹಾಗೂ ಅಧಿಕೃತ ಸೂಚನೆಗಳು ಬಂದಿಲ್ಲ.

UIDAI ನೇಮಕಾತಿ 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಉದ್ಯೋಗ

ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಸಾಧನೆ!- ಸಚಿವ ಕೆ.ಎಸ್.ಈಶ್ವರಪ್ಪ

 

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಕೋಟಿಗಟ್ಟಲೆ ಜನರು ಇಪಿಎಫ್‌ಒದಿಂದ ಉಡುಗೊರೆ ಪಡೆಯಲಿದ್ದಾರೆ. ವಾಸ್ತವವಾಗಿ, PF ಮೇಲಿನ ಕಡಿಮೆ ಬಡ್ಡಿದರದ ಕಾರಣ, ಅದನ್ನು ಡಿಸೆಂಬರ್ ಮೊದಲು ಕ್ರೆಡಿಟ್ ಮಾಡಬಹುದು. ಇದೀಗ ಹಣಕಾಸು ಸಚಿವಾಲಯದಿಂದ ಗ್ರೀನ್‌ ಸಿಗ್ನಲ್‌ ಸಿಗುವುದೊಂದೆ ಬಾಕಿ ಇದೆ ಎಂದು ಹೇಳಲಾಗುತ್ತಿದೆ.  ಹೀಗಾಗಿ ಇದರ ಅಧಿಕೃತ ಪ್ರಕಟಣೆ ವಿಳಂಬವಾಗುತ್ತಿದ ಎಂದು ಹೇಳಲಾಗುತ್ತಿದೆ. ಇದರ ನಂತರ, ಇಪಿಎಫ್‌ಒ ಸದಸ್ಯರ ಪಿಎಫ್ ಖಾತೆಗೆ ಯಾವಾಗ ಬೇಕಾದರೂ ಬಡ್ಡಿಯನ್ನು ಜಮಾ ಮಾಡಬಹುದು.

ಪ್ರಸ್ತುತ 43 ವರ್ಷಗಳಲ್ಲಿ ಪಿಎಫ್‌ನಲ್ಲಿ ಕಡಿಮೆ ಬಡ್ಡಿಯನ್ನು ಪಡೆಯಲಾಗುತ್ತಿರುವುದರಿಂದ, ಶೀಘ್ರದಲ್ಲೇ ಹಣಕಾಸು ಸಚಿವಾಲಯದಿಂದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ. ಇದೀಗ ಪಿಎಫ್ ಮೇಲಿನ ಬಡ್ಡಿ ದರ ಹಲವು ದಶಕಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಇಪಿಎಫ್‌ಒ 2021-22ಕ್ಕೆ ಪಿಎಫ್‌ನ ಬಡ್ಡಿ ದರವನ್ನು ಶೇಕಡಾ 8.1 ಕ್ಕೆ ನಿಗದಿಪಡಿಸಿದೆ. ಇದು 1977-78 ರಿಂದ ಪಿಎಫ್ ಮೇಲಿನ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ. ಈ ಹಿಂದೆ 2020-21ರಲ್ಲಿ, ಪಿಎಫ್‌ಗೆ ಶೇಕಡಾ 8.5 ದರದಲ್ಲಿ ಬಡ್ಡಿ ಸಿಗುತ್ತಿತ್ತು. 2020-21ರ ಆರ್ಥಿಕ ವರ್ಷದಲ್ಲಿ ಪಿಎಫ್‌ನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದಕ್ಕೂ ಒಂದು ವರ್ಷದ ಮೊದಲು ಅಂದರೆ 2019-20ರಲ್ಲಿ ಈ ಬಡ್ಡಿ ದರವನ್ನು ಶೇ.8.65ರಿಂದ ಶೇ.8.5ಕ್ಕೆ ಇಳಿಸಲಾಗಿತ್ತು.

ಎಲೆಕ್ಟ್ರಿಕ್ ವಾಹನ ಖರೀದಿಗೆ ಈ ಬ್ಯಾಂಕ್ ನೀಡಲಿದೆ ಉತ್ತಮವಾದ ಸಬ್ಸಿಡಿ!

“ರೈತರೊಂದಿಗೆ ಚೆಲ್ಲಾಟವಾಡಿದರೆ ಅಧಿಕಾರದಿಂದ ಕೆಳಗಿಳಿಸುತ್ತೇವೆ”- ಪ್ರಧಾನಿ ಮೋದಿಗೆ ಕೆಸಿಆರ್ ಎಚ್ಚರಿಕೆ!

ಕಳೆದ ಕೆಲವು ವರ್ಷಗಳ EPF ಬಡ್ಡಿ ದರಗಳು

ಹಣಕಾಸು ವರ್ಷ

ಬಡ್ಡಿ ದರ pa

2020-2021

8.50%

2018-2019

8.65%

2017-2018

8.55%

2016-2017

8.65%

2015-2016

8.80%

2005-2006 ರಿಂದ 2009-2010

8.50%/

LIC BIG Scheme! Invest ₹ 29 ಪಡೆಯಿರಿ ₹4 ಲಕ್ಷ!

ಹೆಂಡತಿಯ ಹೆಸರಲ್ಲಿ ಈ ಅಕೌಂಟ್ ತೆರೆಯಿರಿ..ತಿಂಗಳಿಗೆ 44,793 ರೂ. ಆದಾಯ ಪಡೆಯಿರಿ

ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಕ್ರಮಗಳು

ಹಂತ 1. EPFO ಸದಸ್ಯರ ಮುಖಪುಟ ಅಥವಾ e-SEWA ಪೋರ್ಟಲ್‌ಗೆ ಭೇಟಿ ನೀಡಿ

ಹಂತ 2. ನಿಮ್ಮ ಖಾತೆಯನ್ನು ಪ್ರವೇಶಿಸಲು ನಿಮ್ಮ UAN ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

ಹಂತ 3. "ನಿರ್ವಹಿಸು" ಅಡಿಯಲ್ಲಿ KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4. ನಿಮ್ಮ ಬ್ರೌಸರ್ ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸುತ್ತದೆ ಇದರಿಂದ ನಿಮ್ಮ ಇಪಿಎಫ್ ಖಾತೆಯನ್ನು ಲಿಂಕ್ ಮಾಡಲು ನೀವು "ಆಧಾರ್" ಅನ್ನು ಆಯ್ಕೆ ಮಾಡಬಹುದು.

ಹೆಂಡತಿಯ ಹೆಸರಲ್ಲಿ ಈ ಅಕೌಂಟ್ ತೆರೆಯಿರಿ..ತಿಂಗಳಿಗೆ 44,793 ರೂ. ಆದಾಯ ಪಡೆಯಿರಿ

ಮಹತ್ವದ ಸುದ್ದಿ: ರೇಷನ್‌ ಬದಲು ಹಣ ನೀಡಲು ಚಿಂತನೆ..ಶೀಘ್ರದಲ್ಲೇ ಜಾರಿ ಸಾಧ್ಯತೆ..!

ಜೋರಾಗಿದೆ Hydroponic Farmingಗೆ ಬೇಡಿಕೆ..ಇಲ್ಲಿವೆ ಟಾಪ್‌ 5 ತರಕಾರಿಗಳು

ಹಂತ 5. ಈಗ "ಆಧಾರ್" ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಕಾಣಿಸುವಂತೆ ನಮೂದಿಸಿ ಮತ್ತು "Save" ಬಟನ್ ಕ್ಲಿಕ್ ಮಾಡಿ.

ಹಂತ 6. ನಿಮ್ಮ ಆಧಾರ್ ವಿವರಗಳನ್ನು ನೀವು ಉಳಿಸಿದ ನಂತರ, ನಿಮ್ಮ ಆಧಾರ್ ಅನ್ನು UIDAI ನ ಡೇಟಾಬೇಸ್ ವಿರುದ್ಧ ಪರಿಶೀಲಿಸಲಾಗುತ್ತದೆ.

ಹಂತ 7. ನಿಮ್ಮ KYC ಡಾಕ್ಯುಮೆಂಟ್‌ನ ಯಶಸ್ವಿ ಅನುಮೋದನೆಯ ನಂತರ, ನಿಮ್ಮ EPF ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಿಮ್ಮ ಆಧಾರ್ ವಿವರಗಳ ಪಕ್ಕದಲ್ಲಿ "ಪರಿಶೀಲಿಸಲಾಗಿದೆ" ಎಂದು ಬರೆಯಲಾಗಿದೆ.