News

EPFO ಬಂಪರ್‌: ಬಡ್ಡಿದರ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ! , ಎಷ್ಟು ಇನ್ನುವ ವಿವರ ಇಲ್ಲಿದೆ

29 March, 2023 10:40 AM IST By: Hitesh
EPFO Bumper: The central government has increased the interest rate! , how much more detail is here

EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಬಡ್ಡಿ ದರ ಹೆಚ್ಚಳವಾಗಿದ್ದು, ಬಂಪರ್‌ ಕೊಡುಗೆ ಸಿಕ್ಕಿದೆ.

ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಲಾಗಿದೆ.

ಪಿಎಫ್ ಬಡ್ಡಿ ದರವನ್ನು ಶೇ.8.10ರಿಂದ ಶೇ.8.15ಕ್ಕೆ ಹೆಚ್ಚಿಸಲಾಗಿದೆ.

ಈ ಪರಿಷ್ಕರಣೆಯು 2022-23 PF ಠೇವಣಿಗಳಿಗೆ ಅನ್ವಯಿಸುತ್ತದೆ.

ಪಿಂಚಣಿ ನಿಧಿ ಮಂಡಳಿ ಸಭೆಯಲ್ಲಿ ಚರ್ಚಿಸಿ ಮಹತ್ವದ ಪ್ರಕಟಣೆ ಹೊರಡಿಸಿದೆ.

ಇಪಿಎಫ್‌ಒ ಮಂಡಳಿ ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಸಭೆ ನಡೆಸಿದರು

EPFO ಅಪ್‌ಡೇಟ್‌: PF ಖಾತೆದಾರರ ಅಕೌಂಟ್‌ಗೆ ಶೀಘ್ರದಲ್ಲೇ ಬೀಳಲಿದೆ 56,000 ರೂಪಾಯಿ.

ಈ ಹಂತದಲ್ಲಿ ಮಹತ್ವದ ಘೋಷಣೆಯೊಂದು ಹೊರಬಿದ್ದಿದೆ.

ಬಡ್ಡಿದರ ಹೆಚ್ಚಿಸಿ ಉದ್ಯೋಗಿಗಳಿಗೆ ಸಂತಸದ ಸುದ್ದಿ ನೀಡಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಇಪಿಎಫ್‌ಒ 2021-22ರ ಬಡ್ಡಿ ದರವನ್ನು ಶೇ.8.10ಕ್ಕೆ ನಿಗದಿಪಡಿಸಿತ್ತು.

ಈಗ ಶೇ.0.05ರಷ್ಟು ಏರಿಕೆಯಾಗಿದೆ.

ಕಳೆದ ಹಣಕಾಸು ವರ್ಷದ ಬಡ್ಡಿ ದರ ಕಳೆದ 4 ದಶಕಗಳಲ್ಲೇ ಅತಿ ಹೆಚ್ಚು ಎಂಬುದು ಗಮನಾರ್ಹ.

ಅಂತಿಮವಾಗಿ, 1977-78ರಲ್ಲಿ ಬಡ್ಡಿ ದರವು ಶೇ 8ರಷ್ಟಿತ್ತು.

2020-21 ರಲ್ಲಿ, ಪಿಎಫ್ ಬಡ್ಡಿ ದರವು ಶೇಕಡಾ 8.5 ರಷ್ಟಿತ್ತು.

ಮುಂದಿನ ಹಣಕಾಸು ವರ್ಷದಲ್ಲಿ ಅದನ್ನು ಶೇ 8.10ಕ್ಕೆ ಇಳಿಸಲಾಗಿದೆ.

ಈಗ ತುಸು ಹೆಚ್ಚಿದೆ ಎನ್ನಲಾಗಿದೆ. EPFO 5 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.

7 ಕೋಟಿ ಪಿಎಫ್‌ ಖಾತೆದಾರರಿಗೆ ಸರ್ಕಾರದಿಂದ ಸಿಹಿಸುದ್ದಿ; ಶೀಘ್ರದಲ್ಲೇ ನಿಮ್ಮ ಖಾತೆಗೆ ಬರಲಿದೆ ₹81,000!

EPFOನ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ PF ಬಡ್ಡಿದರವನ್ನು

8.15 ಪ್ರತಿಶತಕ್ಕೆ ನಿಗದಿಪಡಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ಇತ್ತೀಚೆಗೆ ಬಹಿರಂಗಪಡಿಸಿವೆ.

EPFO ಬಡ್ಡಿದರಗಳನ್ನು ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳುಹಿಸಬೇಕು.

ಅಲ್ಲಿ ಅನುಮೋದನೆ ದೊರೆತರೆ, ಬಡ್ಡಿ ದರ ಅಂತಿಮವಾಗಲಿದೆ ಎಂದೂ ತಿಳಿಸಲಾಗಿದೆ.

ಭಾರತದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರವು ಕಳೆದ 10 ವರ್ಷಗಳಲ್ಲಿ ಏರಿಳಿತವಾಗಿದೆ.

EPFO ಬಿಗ್ ನ್ಯೂಸ್‌:5 ಕೋಟಿ ಉದ್ಯೋಗಿಗಳಿಗೆ ಶುಭಸುದ್ದಿ.. ಶೀಘ್ರದಲ್ಲೆ ಪಾವತಿಯಾಗಲಿದೆ ಬಡ್ಡಿ ಹಣ

EPFO Bumper: The central government has increased the interest rate! , how much more detail is here

ಬಡ್ಡಿ ದರಗಳು (ಇಪಿಎಫ್ ಕಳೆದ 10 ವರ್ಷಗಳ ಬಡ್ಡಿ ದರ):

2013-14: 8.75%

2014-15: 8.75%

2015-16: 8.8%

2016-17: 8.65%

2017-18: 8.55%

2018-19: 8.65%

2019-20: 8.5%

2020-21: 8.5%

2021-22: 8.10%

2022-23: 8.15% (ಅಧಿಸೂಚಿಸಲಾಗಿದೆ, ಇನ್ನೂ ಅನುಮೋದಿಸಲಾಗಿಲ್ಲ)

ಬಡ್ಡಿದರಗಳನ್ನು ಭಾರತ ಸರ್ಕಾರವು ನಿಗದಿಪಡಿಸುತ್ತದೆ ಮತ್ತು ಪ್ರತಿ ವರ್ಷ ಬದಲಾವಣೆಗೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಿ.

ಕೋಟ್ಯಾಂತರ ಉದ್ಯೋಗಿಗಳಿಗೆ ಅನುಕೂಲ

ಕೇಂದ್ರ ಸರ್ಕಾರವು 2022-23ನೇ ಸಾಲಿನಲ್ಲಿ 8.15%  ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಲಾಗಿದೆ.

ಇದರಿಂದ ಕೋಟ್ಯಾಂತರ ಉದ್ಯೋಗಿಗಳಿಗೆ ಲಾಭವಾಗಲಿದ್ದು, ಬಡ್ಡಿದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಹಲವು ಹಂತಗಳಲ್ಲಿ ಪಿಎಫ್‌ ಮೇಲಿನ ಬಡ್ಡಿ ದರ ಹೆಚ್ಚಳವಾಗಿದೆ.

ಈ ಬಾರಿ ಬಡ್ಡಿ ದರ ಹೆಚ್ಚಳವಾಗಿರುವುದು ಸಹಜವಾಗಿಯೇ ಉದ್ಯೋಗಿಗಳಲ್ಲಿ ಸಂತಸ ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಸಾರ್ವಜನಿಕರು ಆರ್ಥಿಕ ಸಂಕಷ್ಟವನ್ನು ಎದುರಿ
ಸುತ್ತಿದ್ದರು.

ಇದೀಗ ಕೇಂದ್ರ ಸರ್ಕಾರವು ಪಿಎಫ್‌ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ.  

ಪ್ಯಾನ್‌ಗೆ ಆಧಾರ್‌ ಜೋಡಣೆ: ಪರಿಶೀಲನೆ ಮಾಡುವುದು ಹೇಗೆ ?