ಸರ್ಕಾರಿ ನೌಕರರಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಏನಿದರ ವಿವರ ತಿಳಿಯಿರಿ
Delhi Air Pollution: ಪಂಜಾಬ್ ಕಳೆ ಸುಡುವಿಕೆ ದೆಹಲಿ ವಾಯು ಮಾಲಿನ್ಯ ತೀವ್ರ ಏರಿಕೆ! ಶಾಲೆ ಬಂದ್, ಮನೆಯಿಂದ ಕೆಲಸ ಮಾಡಲು ಸೂಚನೆ..
ನೌಕರರು ಪಿಂಚಣಿ ಯೋಜನೆಗೆ (Pension Scheme) ಸೇರುವ ಆಯ್ಕೆಯನ್ನು ಚಲಾಯಿಸದ ಉದ್ಯೋಗಿಗಳಿಗೆ ಹಾಗೆ ಮಾಡಲು 6 ತಿಂಗಳ ಹೆಚ್ಚಿನ ಅವಕಾಶವನ್ನು ನೀಡಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನೌಕರರ ಪಿಂಚಣಿ 2014ರ ತಿದ್ದುಪಡಿ ಯೋಜನೆಯನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ.
ಹೊಸ ತಳಿಯ ಕಬ್ಬು ಯಶಸ್ವಿ ಪ್ರಯೋಗ: ಕಡಿಮೆ ವೆಚ್ಚದಲ್ಲಿ 1 ಎಕರೆಗೆ 55 ಟನ್ ಇಳುವರಿ!
ಕೆಲ ಅಂಶಗಳನ್ನು ಕೈಬಿಟ್ಟಿರುವ ಸುಪ್ರೀಂ ಕೋರ್ಟ್ ನೌಕರರು ಈ ಯೋಜನೆಗೆ ಸೇರಿಕೊಳ್ಳಲು ಇರುವ ಕಾಲಮಿತಿಯನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದರಿಂದ ಈ ಯೋಜನೆಯ ಲಾಭ ಪಡೆಯಲು ಉದ್ಯೋಗಿಗಳೆ ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.
ಸುಪ್ರೀಂ ಕೋರ್ಟ್ ಆದೇಶದಿಂದ ಇದೀಗ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಇಷ್ಟೇ ಅಲ್ಲ ಭವಿಷ್ಯದಲ್ಲಿ ಸ್ವಾವಲಂಬಿಯಾಗಿ ಬದುಕಲು ಕೂಡ ಇದು ಅವಕಾಶ ಕಲ್ಪಿಸಿಕೊಟ್ಟಿದೆ.
ಅಕಾಲಿಕ ಮಳೆಯಿಂದ ಖಾರಿಫ್ ಬೆಳೆಗಳ ಮೇಲೆ ನಕಾರಾತ್ಮಕ ಪರಿಣಾಮ: ಎಸ್‌ಬಿಐ ವರದಿ!
ನೌಕರರ ಪಿಂಚಿಣಿ ತಿದ್ದುಪಡಿ ಯೋಜನೆ 2014 ಭಾರಿ ವಿವಾದಕ್ಕೆ ಕಾರಣವಾಗಿತ್ತು. ತಿದ್ದುಪಡಿ ಮೂಲಕ ತಂದ ಈ ಪಿಂಚಣಿ ಯೋಜನೆಯನ್ನು ಕೇರಳ ಹೈಕೋರ್ಟ್ ವಜಾ ಮಾಡಿತ್ತು.
ಆದರೆ ನಿರಂತರ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀ ಕೋರ್ಟ್ ಪಿಂಚಣಿ ತಿದ್ದುಪಡಿ 2014ರ ಯೋಜನೆಯನ್ನು ಎತ್ತಿ ಹಿಡಿದಿದೆ.
ಜನಸಾಮಾನ್ಯರಿಗೆ ಮತ್ತೊಂದು ಹೊರೆ; ಈರುಳ್ಳಿ ಉತ್ಪಾದನೆಯಲ್ಲಿ ಕುಸಿತ, ಬೆಲೆ ಹೆಚ್ಚಳ ಸಾಧ್ಯತೆ-CRISIL report!
ಇಷ್ಟೇ ಅಲ್ಲ ಕೇರಳ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿದೆ. ಜಸ್ಟೀಸ್ ಅನಿರುದ್ಧ ಬೋಸೆ ಹಾಗೂ ಜಸ್ಟೀಸ್ ಸುಧಾಂಶು ದುಲಿಯಾ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.
2014ರ ಉದ್ಯೋಗಿಗಳ ಪಿಂಚಣಿ ತಿದ್ದುಪಡಿ ಯೋಜನೆ ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೀಗ ಯೋಜನೆ ಕುರಿತು ಮಾಹಿತಿ ಇಲ್ಲದ ಅಥವಾ ಸ್ಪಷ್ಟತೆ ಇಲ್ಲದ ಉದ್ಯೋಗಿಗಳು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇರುವ ಕಾಲಾವತಿಯನ್ನು ಹೆಚ್ಚುವರಿಯಾಗಿ 4 ತಿಂಗಳು ವಿಸ್ತರಿಸಲಾಗಿದೆ.
ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಮಳೆ ಸಾಧ್ಯತೆ; ನವೆಂಬರ್ 6ರಿಂದ ಚಳಿ ಆರಂಭದ ಮೂನ್ಸೂಚನೆ!
ಸೆಪ್ಟೆಂಬರ್ 1, 2014ರ ಮೊದಲು ನಿವೃತ್ತಿ ಹೊಂದಿದ ಉದ್ಯೋಗಿಗಳು, ಪಿಂಚಣಿ ತಿದ್ದುಪಡಿ ಯೋಜನೆ ಬಳಸಿಕೊಳ್ಳಲು ಅವಕಾಶವಿಲ್ಲ.
ತಿದ್ದುಪಡಿಯ 11(3) ಕಲಂನಲ್ಲಿ ಉಲ್ಲೇಖಿಸಿರುವಂತೆ ಈ ಯೋಜನೆ ಸೌಲಭ್ಯಪಡೆಯಲು ಅರ್ಹರಾಗಿರುವುದಿಲ್ಲ. ಈ ಯೋಜನೆಯನ್ನು ಎಲ್ಲಾ ಕಂಪನಿಗಳು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2018ರಲ್ಲಿ ಕೇರಳ ಹೈಕೋರ್ಟ್ ಪಿಂಚಣಿ ತಿದ್ದುಪಡಿ 2014ರ ಯೋಜನೆಯನ್ನು ವಜಾ ಮಾಡಿತ್ತು. ತಿಂಗಳಿಗೆ 15,000 ಮಿತಿಗಿಂತ ಹೆಚ್ಚಿನ ವೇತನಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ ನೀಡಿತ್ತು.
2022-23 ಹಿಂಗಾರು ಋತುವಿನ ರಸಗೊಬ್ಬರಗಳಿಗೆ ₹51,875 ಕೋಟಿ ಸಬ್ಸಿಡಿಗೆ ಕ್ಯಾಬಿನೆಟ್ ಅನುಮೋದನೆ!
ಇಷ್ಟೇ ಅಲ್ಲ ಈ ಯೋಜನೆಗೆ ಸೇರಿಕೊಳ್ಳಲು ಯಾವುದೇ ಕಾಲಮಿತಿ ಇರುವಂತಿಲ್ಲ ಎಂದಿತ್ತು.
1995ರಲ್ಲಿ EPS (Employees Pension Scheme) ಆರಂಭಿಸಲಾಯಿತು. ಈ ವೇಳೆ ಪಿಂಚಣಿ ನೀತಿಯ 11 (3) ಕಲಂ ಪ್ರಕಾರ ಪಿಂಚಣಿ ವೇತನವನ್ನು 5,000 ರೂಪಾಯಿಗೆ ಸೀಮಿತಗೊಳಿಸಿತ್ತು.
2001ರಲ್ಲಿ 6,500 ರೂಪಾಯಿಗೆ ಹೆಚ್ಚಿಸಲಾಗಿತ್ತು. ಉದ್ಯೋಗದಾತ ಮತ್ತು ಉದ್ಯೋಗಿಗೆ ತಿಂಗಳಿಗೆ ₹ 5,000 ಅಥವಾ ₹ 6,500 ಕ್ಕಿಂತ ಹೆಚ್ಚಿನ ಸಂಬಳದ ಕೊಡುಗೆಗಾಗಿ ಆಯ್ಕೆಯನ್ನು ಅನುಮತಿಸುತ್ತದೆ.
ಪೂರ್ಣ ವೇತನದ ಮೇಲಿನ ಅಂತಹ ಕೊಡುಗೆಯ 8.33 ಪ್ರತಿಶತವನ್ನು ಪಿಂಚಣಿ ನಿಧಿಗೆ ರವಾನೆ ಮಾಡಬೇಕಾಗಿತ್ತು.