ವಿಶ್ವದ ನಂಬರ್ 1 ಶ್ರೀಮಂತ, ಟೆಸ್ಲಾ (Tesla) ಸಿಇಒ ಎಲಾನ್ ಮಸ್ಕ್ (Elon Musk)ಮೈಕ್ರೋಬ್ಲಾಗಿಂಗ್ ತಾಣ ಟ್ಟಿಟ್ಟರ್‌ನ್ನು(twitter) ಖರೀದಿಸುವುದಾಗಿ ಹೇಳಿದ್ದಾರೆ. 44 ಬಿಲಿಯನ್ (44 B USD) ಡಾಲರ್‌ಗೆ ಈ ಖರೀದಿ ನಡೆಯಲಿದ್ದು, ಈವರೆಗೆ ಉದ್ಯಮ ಜಗತ್ತಿನಲ್ಲಿ ನಡೆದ ಬೃಹತ್ ಡೀಲ್ ಇದಾಗಲಿದೆ. 16 ವರ್ಷ ಹಿಂದೆ ಆರಂಭವಾಗಿ ಸದ್ಯ ಸಾರ್ವಜನಿಕ ಕಂಪನಿಯಾಗಿರುವ ಈ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ (Sosicl Platform)ಅನ್ನು ಮಸ್ಕ್ ಖರೀದಿಸಿದ್ದಾರೆ.
PM-KISAN ಸಮ್ಮಾನ್ ನಿಧಿ ಮೊತ್ತ ಬರುತ್ತಿಲ್ಲವೇ? ಇಲ್ಲಿ ದೂರು ನೀಡಿ ಹಣ ಪಡೆಯಿರಿ!
ಬಿಗ್‌ನ್ಯೂಸ್: PM ಕಿಸಾನ್ ಫಲಾನುಭವಿಗಳ ಲೆಕ್ಕ ಪರಿಶೋಧನೆಗೆ ಮುಂದಾದ ಸರ್ಕಾರ
ಎಪ್ರಿಲ್ ತಿಂಗಳ ಆರಂಭದಲ್ಲಿ ಷೇರು ಖರೀದಿ, ಈಗ ಸಂಸ್ಥೆಯನ್ನೇ ಖರೀದಿ
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ (Elon Musk) ಎಪ್ರಿಲ್ ತಿಂಗಳ ಆರಂಭದಲ್ಲಿ ಪ್ರಸಿದ್ಧ ಸಾಮಾಜಿಕ ಜಾಲತಾಣವಾದ ಟ್ವಿಟರಿನ 7.35 ಕೋಟಿ ಷೇರು ಖರೀದಿಸಿದ್ದಾರೆ. ಈ ಮೂಲಕ ಟ್ವೀಟರಿನ ಶೇ.9.2 ರಷ್ಟುಪಾಲುದಾರಿಕೆ ಪಡೆದುಕೊಂಡಿದ್ದಾರೆ. ಈ ಖರೀದಿಯೊಂದಿಗೆ ಮಸ್ಕ್, ಟ್ವೀಟರ್‌ನ ಅತಿದೊಡ್ಡ ಷೇರುದಾರರಾಗಿ ಹೊರಹೊಮ್ಮಿದ್ದರು. ಮಾರ್ಚ್ ತಿಂಗಳಲ್ಲಿ ಮಸ್ಕ್ ಟ್ವೀಟರ್‌ನಲ್ಲಿ ಮುಕ್ತವಾಗಿ ಸಂವಹನ ನಡೆಸುವ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿದ್ದರು. ಮುಂದೊಂದು ದಿನ ಮಸ್ಕ್ ಆಕ್ರಮಣಕಾರಿ ಮಾಲೀಕತ್ವ ನೀತಿ ಮೂಲಕ ಟ್ವಿಟರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ. ಇದೀಗ ಈ ಎಲ್ಲಾ ವಿಚಾರ ನಿಜವಾಗಿದೆ. ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿ ಇದೀಗ ಸಾಮಾಜಿಕ ಜಾಲತಾಣ ದಿಗ್ಗಜನನ್ನೇ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ
7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?
Twitter ಅನ್ನು ಮಸ್ಕ್ ಏಕೆ ಖರೀದಿಸಲು ಬಯಸುತ್ತಿದ್ದಾರೆ
ಎಲಾನ್ ಮಸ್ಕ್ ಅವರು ಏಪ್ರಿಲ್ 14 ರಂದು ಟ್ವಿಟರ್ ಖರೀದಿಗಾಗಿ ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ, ಆದರೆ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಹೇಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡಲಿದ್ದಾರೆ ಎಂಬುದನ್ನು ಅವರು ಹೇಳಿರಲಿಲ್ಲ. ಎಲೋನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಲು ಮುಂದಾಗಲು ಕಾರಣ ಎಂದರೆ, ಅದು ಮುಕ್ತ ಅಭಿವ್ಯಕ್ತಿಗೆ ವೇದಿಕೆಯಾಗಿದ್ದು, ಅದು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
PMAGY: ಬುಡಕಟ್ಟು ಹಳ್ಳಿಗಳ ಸುಧಾರಣೆಗೆ ಗುರಿ
ಏಪ್ರಿಲ್ ಕೊನೆಯ15 ದಿನಗಳಲ್ಲಿ ಈ ಬೆಳೆಗಳನ್ನು ಬೆಳೆಸಿ, ಬಂಪರ್ ಇಳುವರಿ ಪಡೆಯಿರಿ
ಕಂಪನಿಯನ್ನು ಮುನ್ನಡೆಸುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಟ್ವಿಟರ್ ಪ್ರಸ್ತುತ ಪರಾಗ್ ಅಗರವಾಲ್ ಅವರ ನೇತೃತ್ವದಲ್ಲಿದೆ, ಅವರು ಕಳೆದ ನವೆಂಬರ್‌ನಲ್ಲಿ ಸಹ-ಸಂಸ್ಥಾಪಕ ಮತ್ತು ಮಾಜಿ ಬಾಸ್ ಜಾಕ್ ಡೋರ್ಸೆ ಅವರಿಂದ ಅಧಿಕಾರ ವಹಿಸಿಕೊಂಡರು. ಟ್ವಿಟರ್‌ನ ಭವಿಷ್ಯವು ಅನಿಶ್ಚಿತವಾಗಿದೆ ಎಂದು ಶ್ರೀ ಅಗರವಾಲ್ ಸೋಮವಾರ ಉದ್ಯೋಗಿಗಳಿಗೆ ತಿಳಿಸಿದರು."ಒಮ್ಮೆ ಒಪ್ಪಂದವು ಮುಕ್ತಾಯಗೊಂಡ ನಂತರ, ಪ್ಲಾಟ್‌ಫಾರ್ಮ್ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂದು ನಮಗೆ ತಿಳಿದಿಲ್ಲ" ಎಂದು ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ..