News

ಮಳೆ ಮಳೆ! ಮಳೆಯ ಕಾರಣ ಎಲ್ಲೆಡೆ ದುಬಾರಿಯ ವಾತಾವರಣ

08 December, 2021 5:19 PM IST By: Ashok Jotawar
Tomato

ಟೊಮೇಟೊ ಅಂತೂ ಕೇಳಲೇ ಬೇಡಿ ಟೊಮೇಟೊ ಅಂತೂ ರಾಣಿಯ ತಾರಾ ಮಾರಾಟ ವಾಗುತ್ತಿದೆ.

ಎಲ್ಲರಿಗು ಎಲ್ಲ ತರಹದ ನೆನಪು ಗಳು ಇರುತ್ತೆ ನಂಗು ಕೂಡ ಒಂದು ನೆನಪು ಟೊಮೇಟೊ ಹೆಸರು ಕೇಳಿದಾಕ್ಷಣ ಈ ಒಂದು ನೆನಪು ತಲೆಯಲ್ಲಿ ಮೂಡುತ್ತದೆ. ನಾನು ಮತ್ತು ನನ್ನ ಸ್ನೇಹಿತ ಚಿಕಂದಿನಲ್ಲಿ ನನ್ನ ಸ್ನೇಹಿತನ ಅಜ್ಜಿಯ ತರಕಾರಿ ಅಂಗಡಿಗೆ ಹೋಗುತಿದ್ದೆವು.

ಒಂದು ದಿನ ನಾನು ಮತ್ತು ನನ್ನ ಸ್ನೇಹಿತ, ಅಜ್ಜಿಯ ಅಂಗಡಿಯಲ್ಲಿ ಕುಳಿತಾಗ ಊರಲ್ಲಿ ಒಂದು ಗಲಭೆ ಆಯಿತು ನಾನು ಮತ್ತು ನನ್ನ  ಸ್ನೇಹಿತ ಆ ಒಂದು ಅಂಗಡಿಯಲ್ಲೇ ಒಳಗೆ ಕುಳಿತಿದ್ದೆವು ಮತ್ತು ಅಜ್ಜಿಯ ಅವತ್ತಿನ ವ್ಯಾಪಾರ ತುಂಬಾನೇ ಜೋರಾಗಿ ನಡೆಯಿತು ಕಾರಣ ಊರಲ್ಲಿ ಕಳ್ಳರನ್ನ ಹಿಡಿದು ಕತ್ತೆಯ ಮೇಲೆ ಮೆರವಣಿಗೆ ಮಾಡುತಿದ್ದರು ಮತ್ತು ಅಜ್ಜಿಯ ಅಂಗಡಿಯ ಎಲ್ಲ ಟೊಮೇಟೊ ಆ ಕಳ್ಳರ ಮೈ ಮೇಲೆ ಎಸೆಯ ಲಾಯಿತು. ಆದರೆ ಎಲ್ಲರು ಮರೆತ್ತಿದ್ದು ಏನೆಂದರೆ ನಾವು ಯಾವುದೊ ವ್ಯಕ್ತಿ ಯನ್ನ ಹೀನಾಯವಾಗಿ ಹಂಗಿಸಲು ಅನ್ನವನ್ನ ನೆಲದ ಮೇಲೆ ಎಸೆದು ಅನ್ನಕ್ಕೆ ಅಪಮಾನ ಮಾಡುತ್ತೇ- ವೆ. ಮತ್ತು ಅದೇ ಟೊಮೇಟೊ 2  ರಿಂದ 3  ದಿನದೊಳಗೆ ಮತ್ತೆ ಗಗನಕ್ಕೆ ಏರಿತು ಅವಾಗ ಎಲ್ಲರು ಆ ಒಂದು ಗಲಭೆಯ ದಿನ ನೆನಸಿ ತಮ್ಮಲೇ ಕೊರಗುತಿದ್ದರು.

ಈಗ ತರಕಾರಿಯ ವಿಷಯಕ್ಕೆ ಬಂದರೆ ಕಳೆದ ತಿಂಗಳು ದಕ್ಷಿಣ ಭಾರತ ದಲ್ಲಿ ಆದ ಭಾರಿ ಮಳೆಯಿಂದ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ಟೊಮೇಟೊ ಅಂತೂ ಪ್ರತಿ ಕೆಜಿ ಗೆ 140 ರೂ. ಗಳಷ್ಟು ಏರಿಕೆಯಾಗಿದೆ ಮತ್ತೆ ಎಲ್ಲ ತರಕಾರಿಗಳು ತಮ್ಮ ಬೆಲೆಯ ಅತ್ಯುತ್ತಮ ಉಚ್ಚ ಸ್ಥಾನ ದಲ್ಲಿವೆ.

ಮತ್ತು ಉತ್ತರ ಭಾರತದ ಬಗ್ಗೆ ಮಾತನಾಡುವುದಾದರೆ ಟೊಮೇಟೊ ಅಂತೂ 30 -83 ರೂ. ಗಳಷ್ಟು ಏರಿಕೆ ಯಾಗಿದೆ, ಪಶಿಮ ಭಾರತದಲ್ಲಿ 40 -80 ರೂ. ಗಾಲ ಗಡಿಯಲ್ಲಿದೆ, ಪೂರ್ವ ಭಾರತದಲ್ಲಿ 45 -90 ರೂ. ಗಳಷ್ಟು ಹೆಚ್ಚಾಗಿದೆ.

ಇನ್ನಷ್ಟು ಓದಿರಿ: 

ರೈತರಿಗೆ ದೊಡ್ಡ ಆಘಾತ! ಮತ್ತೆ ದುಬಾರಿ ಆಯಿತು ಗೊಬ್ಬರ?

ಅಬ್ಬಾ ಏನ್ ಚಳಿ ರೀ!! ಉತ್ತರ ಭಾರತದಲ್ಲಿ ಸ್ಟಾರ್ಟ್ ಆಯಿತು ಚಳಿ