News

DRDO ನಲ್ಲಿದೆ 60,000 ಸಂಬಳದ ಸಮಾಲೋಚಕರ ಹುದ್ದೆ! ಅಕ್ಟೋಬರ್‌ 14ರೊಳಗೆ ಅರ್ಜಿ ಸಲ್ಲಿಸಿ

01 October, 2022 4:14 PM IST By: Kalmesh T
DRDO has 60,000 salaried consultant posts! Apply by October 14

ಡಿಫೆನ್ಸ್‌ ರಿಸರ್ಚ್‌ ಮತ್ತು ಡೆವಲಪ್‌ಮೆಂಟ್‌ ಆರ್ಗನೈಸೆಷನ್‌ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡುತ್ತಿದ್ದು, ಆಸಕ್ತರು ಅಕ್ಟೋಬರ್‌ 14ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಇನ್ನೂ 2 ದಿನ ಮಳೆ ಸಾಧ್ಯತೆ! ಯಾವ ಜಿಲ್ಲೆಯಲ್ಲಿ ಏನೇನಾಗಲಿದೆ ಗೊತ್ತೆ?

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (Defence Research and Development Organisation) ಕನ್ಸಲ್ಟೆಂಟ್ (Consultant ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಡಿಆರ್‌ಡಿಒನ (Centre for Air Borne Systems) ಈ ನೇಮಕಾತಿ ನಡೆಯಲಿದೆ. ಈಗಾಗಲೇ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್ 14 ಆಗಿದೆ.

ಈ ಹುದ್ದೆಗಳನ್ನು ತಾತ್ಕಾಲಿಕವಾಗಿದ್ದು, ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳು ಇಲ್ಲಿವೆ.

PM ಕಿಸಾನ್ 12 ನೇ ಕಂತು: ಅಕ್ಟೋಬರ್‌ 2ರಂದು ರೈತರ ಖಾತೆಗೆ ಬರಲಿದೆಯೇ ಹಣ?

ಹುದ್ದೆಗಳ ಸಂಖ್ಯೆ:  6
ಉದ್ಯೋಗ ಸ್ಥಳ:   ಬೆಂಗಳೂರು

ಸಂಬಳ: 30000-60000 ರೂ ಮಾಸಿಕ

ಶೈಕ್ಷಣಿಕ ಅರ್ಹತೆ:  ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಬಿಇ ಅಥವಾ ಬಿಟೆಕ್,  ಭೌತಶಾಸ್ತ್ರದಲ್ಲಿ ಎಂಎಸ್ಸಿ  ಪದವಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 63 ವರ್ಷಗಳು ಮೀರಿರಬಾರದು.

ಅರ್ಜಿ ಸಲ್ಲಿಕೆ: ಆಫ್ಲೈನ್

ಸಿಹಿಸುದ್ದಿ: ರೈತರಿಗೆ 5 ತಾಸಿನ ಬದಲು 7 ತಾಸು ವಿದ್ಯುತ್‌ ಪೂರೈಕೆ ಸಿಎಂ ಬೊಮ್ಮಾಯಿ!

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವ ವಿಳಾಸ

ನಿರ್ದೇಶಕರು, ವಾಯುಗಾಮಿ ವ್ಯವಸ್ಥೆಗಳ ಕೇಂದ್ರ (CABS), ಬೇಲೂರು, ಯೆಮ್ಲೂರು ಅಂಚೆ, ಬೆಂಗಳೂರು-560037

ಪ್ರಮುಖ ದಿನಾಂಕಗಳು:

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಸೆಪ್ಟೆಂಬರ್ 2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಅಕ್ಟೋಬರ್ 2022

ಲಂಪಿ ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಸಿಎಂ ಬೊಮ್ಮಾಯಿ ಪರಿಹಾರ ಘೋಷಣೆ: ! ಎಷ್ಟು ಗೊತ್ತೆ?

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: https://drdo.gov.in/

ಅರ್ಜಿ ಸಲ್ಲಿಕೆ ವಿಧಾನ

ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ

ಅರ್ಜಿ ಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸ್ಪೀಡ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಿ