News

LPG Price hike: 5 ತಿಂಗಳ ಬಳಿಕ ಮತ್ತೇ ಗ್ರಾಹಕರಿಗೆ ಶಾಕ್‌..ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ..!

22 March, 2022 12:20 PM IST By: KJ Staff
Domestic Cooking Gas Price Hiked ₹ 50 Per Cylinder,

ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಮಾನ್ಯರಿಗೆ ಮತ್ತೊಂದು ಶಾಕ್‌ ಎದುರಾಗಿದ್ದು, ಮತ್ತೇ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಏರಿಕೆಯಾಗಿದ್ದು ಗ್ರಾಹಕರು ಶಾಕ್‌ ಆಗಿದ್ದಾರೆ. 2021ರ ಅಕ್ಟೋಬರ್‌ನಲ್ಲಿ 15 ರೂಪಾಯಿ ಹೆಚ್ಚಳವಾಗಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ. ಹೌದು 14.2 ಕೆ.ಜಿ ಬೆಲೆಯ ಸಿಲಿಂಡರ್ ದರವನ್ನು ಇಂದು 50 ರೂಪಾಯಿ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ:ಕೂದಲು ಉದುರುತ್ತಿದೆಯೇ..? ಹಾಗಾದ್ರೆ ಈ ಪದಾರ್ಥಗಳ ಜೊತೆ ಇಂದೇ ಟೂ ಬಿಟ್ಟು ಬಿಡಿ

ಪರಿಣಾಮ ಬೆಂಗಳೂರಿನಲ್ಲಿ 902.50 ರೂಪಾಯಿ ಇದ್ದ ಸಿಲಿಂಡರ್ ದರ 952.50 ರೂಪಾಯಿಗೆ ಹೆಚ್ಚಳವಾಗಿದೆ. ಇದೇ ಮಾರ್ಚ್ 22ರಿಂದಲೇ ಹೊಸ ದರ ಅನ್ವಯ ಆಗಲಿದೆ. ಇದರೊಂದಿಗೆ ಗೃಹ ಬಳಕೆಯ ಎಲೆ ಪಿಜಿ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 949 ರೂಪಾಯಿಗೆ ಏರಿಕೆಯಾಗಿದೆ. ಉಕ್ರೇನ್-ರಷ್ಯಾ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಕಚ್ಚತೈಲ ಬೆಲೆ ಹೆಚ್ಚಳ ಹಿನ್ನೆಲೆ ತೈಲ ಸಂಸ್ಥೆಗಳು ಬೆಲೆ ಏರಿಕೆಗೆ ಮುಂದಾಗಿವೆ ಎನ್ನಲಾಗಿದೆ..

ಇದನ್ನೂ ಓದಿ:ಶೇ.86 ರಷ್ಟು ರೈತರು ಕೃಷಿ ಕಾಯ್ದೆಗಳನ್ನ ಬೆಂಬಲಿಸಿದ್ದರು..ಸುಪ್ರೀಂ ವರದಿ

ಉತ್ತರ ಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಫ್ರೀಜ್ ಆಗಿದ್ದವು. ಕಚ್ಚಾ ವಸ್ತುಗಳ ಸುರುಳಿಯ ವೆಚ್ಚದ ಹೊರತಾಗಿಯೂ ಬೆಲೆಗಳು ಫ್ರೀಜ್ ಆಗಿವೆ. ಅಂತರರಾಷ್ಟ್ರೀಯ ತೈಲ ಬೆಲೆಗಳು ನವೆಂಬರ್ ಆರಂಭದಲ್ಲಿ ಬ್ಯಾರೆಲ್‌ಗೆ USD 81-82 ರಷ್ಟಿದ್ದು ಈಗ USD 114 ರಷ್ಟಿತ್ತು. ಸದ್ಯ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ಇಂಧನ ಹಾಗೂ ಗ್ಯಾಸ್ ದರ ಹೆಚ್ಚಳ ಆಗಲಿದೆ ಎಂಬ ತಜ್ಞರ ಅಭಿಪ್ರಾಯ ನಿಜವಾಗಿದೆ.

ಇದನ್ನೂ ಓದಿ:ಪೋಸ್ಟ್‌ ಆಫೀಸ್‌ನಲ್ಲಿ 10000 Invest ಮಾಡಿದ್ರೆ ಬರೋಬ್ಬರಿ 16 ಲಕ್ಷ ಗಳಿಕೆ..!

ಇನ್ನು, ನಾಲ್ಕು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಪ್ರತಿ ಲೀಡರ್ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಪ್ರತಿ ಲೀಟರ್‌ಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ 100.58 ಪೈಸೆ ಇದ್ದ ಪೆಟ್ರೋಲ್ ದರ 101.38 ರೂಪಾಯಿ ಹಾಗೂ 85.01 ಇದ್ದ ಡೀಸೆಲ್ ಇದ್ದ ಬೆಲೆ 85.81 ರೂಪಾಯಿಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 926 ರಿಂದ 976 ರೂಪಾಯಿಗೆ ಏರಿಕೆಯಾಗಿದೆ. ಲಕ್ನೋದಲ್ಲಿ ಈಗ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ 987.5 ರೂ.ಗೆ ಲಭ್ಯವಿದ್ದರೆ, ಪಾಟ್ನಾದಲ್ಲಿ 998 ರೂ.ನಿಂದ 1039.5 ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ:IMPORTANT: PPF ಖಾತೆದಾರರೆ ಗಮನವಿರಲಿ..ಈ ನಿಯಮ ಉಲ್ಲಂಘಿಸಿದ್ರೆ ನಿಮ್ಮ ಬಡ್ಡಿ ಹಣ ಹೋಗೋದು ಫಿಕ್ಸ್‌..!