News

ರೈತರ ಖಾತೆಗೆ ನೇರವಾಗಿ ಡೀಸೆಲ್‌ ಸಬ್ಸಿಡಿ ಪಾವತಿ; ದಾಖಲೆಯೂ ಬೇಕಿಲ್ಲ: ಬಿ.ಸಿ ಪಾಟೀಲ್

06 November, 2022 2:42 PM IST By: Hitesh
diesel subsidy to farmers' accounts

ರಾಜ್ಯ ಸರ್ಕಾರವು ಶೀಘ್ರದಲ್ಲಿಯೇ ರೈತರ ಬ್ಯಾಂಕ್‌ ಖಾತೆಗೆ ಡೀಸೆಲ್‌ ಸಬ್ಸಿಡಿಯನ್ನು ಜಮಾ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ತಿಳಿಸಿದ್ದಾರೆ. 

ಕಬ್ಬು ಬೆಳೆ ಬೆಳೆಯಲು ಇರುವ ಉತ್ತಮ ತಳಿಗಳ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾಗವಹಿಸಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ರೈತರು ಈ ಸಹಾಯಧನ ಪಡೆಯಲು ಅರ್ಜಿ ಹಾಕಬೇಕಿಲ್ಲ, ಕೃಷಿ ಇಲಾಖೆ ಕಚೇರಿಗೆ ಅಲೆದಾಡುವ ಅವಶ್ಯಕತೆಯೂ ಇಲ್ಲ.

ಈಗಾಗಲೇ ಲಭ್ಯವಿರುವ ಕಿಸಾನ್‌ ಸಮ್ಮಾನ್‌ ನಿಧಿ ದತ್ತಾಂಶದ ಮಾಹಿತಿಯ ಅನುಸಾರ ಸರ್ಕಾರವೇ ನೇರವಾಗಿ ರೈತರ ಖಾತೆಗೆ ಅನುದಾನ ಜಮಾ ಮಾಡಲಿದೆ ಎಂದರು.  

ಇದನ್ನೂ ಓದಿರಿ ರಾಜ್ಯದಲ್ಲಿ “ಬಿಯರ್‌” ಕುಡಿಯುವವರ ಸಂಖ್ಯೆ ಹೆಚ್ಚಳ: ಹೊಸ ಮದ್ಯ ಪ್ರಿಯರ ಸೇರ್ಪಡೆ!? 

ಸಾಮಾನ್ಯವಾಗಿ ರೈತರಿಗೆ ಟ್ರ್ಯಾಕ್ಟರ್‌ನಲ್ಲಿ ಒಂದು ಎಕರೆ ಭೂಮಿ ಉಳುಮೆ ಮಾಡಲು 20 ಲೀಟರ್‌ ಡೀಸೆಲ್‌ ಅವಶ್ಯಕತೆ ಇದೆ.

ಈ ಪೈಕಿ ತಲಾ ಲೀಟರ್‌ಗೆ 25 ರೂಪಾಯಿಯಂತೆ 10 ಲೀಟರ್‌ಗೆ 250 ರೂಪಾಯಿ ಸಬ್ಸಿಡಿ ನೀಡಲಾಗುವುದು.

ಐದು ಎಕರೆ ಭೂಮಿ ಹೊಂದಿರುವವರಿಗೆ ಗರಿಷ್ಠ 1,250 ರೂಪಾಯಿ ಸಬ್ಸಿಡಿ ಸೌಲಭ್ಯ ಸಿಗಲಿದೆ ಎಂದು ವಿವರಿಸಿದರು.  

ರೈತರಿಗೆ  ಪ್ರಥಮ ಬಾರಿಗೆ ಪ್ರತಿ ಎಕರೆಗೆ 250 ರೂಪಾಯಿಯಂತೆ ಗರಿಷ್ಠ ಐದು ಎಕರೆಗೆ ಡೀಸೆಲ್‌ ಸಹಾಯಧನ ನೀಡಲು ಸರ್ಕಾರವೇ ಸಿದ್ಧತೆ ಮಾಡಿಕೊಂಡಿದೆ.

ಬಜೆಟ್‌ನಲ್ಲಿ ಘೋಷಿಸಿದಂತೆ ರೈತ ಶಕ್ತಿ ಯೋಜನೆಯಡಿ ಸಹಾಯಧನವನ್ನು ವಿತರಿಸಲಾಗುವುದು.

ಈಗಾಗಲೇ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.

ಸಾಲ ಪಾವತಿಸದಿದ್ದರೂ ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಕಿಸಾನ್‌ ಸನ್ಮಾನ್‌ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನಕ್ಕಾಗಿ ರಾಜ್ಯದ 53 ಲಕ್ಷ ರೈತರಿಂದ ದಾಖಲೆಗಳನ್ನು ಸಂಗ್ರಹಿಸಲಾಗಿದೆ.

ಈ ಯೋಜನೆಗಾಗಿ ಜಮೀನು ಪಹಣಿ, ಆಧಾರ್‌ ಜೋಡಣೆಯೂ ಆಗಿದೆ.

ಇದರ ಆಧಾರದ ಮೇಲೆಯೇ ಐದು ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್‌ ಸಬ್ಸಿಡಿ ನೀಡಲಾಗುವುದು ಎಂದು ಹೇಳಿದರು.  

ನಾಗರಹಾವನ್ನು ಕಚ್ಚಿಕೊಂದ ಎಂಟು ವರ್ಷದ ಬಾಲಕ!

Bc Patil

ರೈತರಿಗೆ ಟ್ರ್ಯಾಕ್ಟರ್‌ನಲ್ಲಿ ಒಂದು ಎಕರೆ ಭೂಮಿ ಉಳುಮೆ ಮಾಡಲು 20 ಲೀಟರ್‌ ಡೀಸೆಲ್‌ ಅವಶ್ಯಕತೆ ಇದೆ.

ಈ ಪೈಕಿ ತಲಾ ಲೀಟರ್‌ಗೆ 25 ರೂಪಾಯಿಯಂತೆ 10 ಲೀಟರ್‌ಗೆ 250 ರೂಪಾಯಿ ಸಬ್ಸಿಡಿ ನೀಡಲಾಗುವುದು.

ಐದು ಎಕರೆ ಭೂಮಿ ಹೊಂದಿರುವವರಿಗೆ ಗರಿಷ್ಠ 1,250 ರೂಪಾಯಿ ಸಬ್ಸಿಡಿ ಸೌಲಭ್ಯ ಸಿಗಲಿದೆ.

ಉದ್ದೇಶಿತ ಯೋಜನೆಗೆ ರಾಜ್ಯ ಸರ್ಕಾರವು 500 ಕೋಟಿ ರೂಪಾಯಿ ಮೊತ್ತದ ಅನುದಾನ ಬಿಡುಗಡೆಯನ್ನೂ ಮಾಡಿದೆ ಎಂದರು.

ಡೀಸೆಲ್‌ ದರ ದುಬಾರಿಯಾಗಿರುವುದರಿಂದ ಸಣ್ಣ ರೈತರು ಉಳುಮೆ ಮಾಡುವುದು ಸವಾಲಾಗಿದೆ.

ಡೀಸೆಲ್‌ ಸಮಸ್ಯೆಯಿಂದ ಸಾವಿರಾರು ರೈತರು ಉಳುಮೆ ಮಾಡುವುದನ್ನೇ ನಿಲ್ಲಿಸಿದ್ದಾರೆ.

ಹೀಗಾಗಿ ಮತ್ತೆ ಉಳುಮೆ ಮಾಡಿ, ಕೃಷಿ ಬೆಳೆಗಳ ವ್ಯಾಪ್ತಿ ಹೆಚ್ಚುವುದರ ಜತೆಗೆ ಕೃಷಿ ಉತ್ಪನ್ನಗಳ ಪ್ರಮಾಣವೂ ಹೆಚ್ಚಿಸುವ ಮೂಲಕ

ರೈತರು ಮತ್ತು ರೈತ ಕುಟುಂಬಗಳು ಮತ್ತೆ ಕೃಷಿ ಚಟುವಟಿಕೆಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ!

diesel subsidy to farmers' accounts

100 ರೈತ ಉತ್ಪಾದಕ ಸಂಘಗಳ ಸ್ಥಾಪನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ವರ್ಷ ಅಮೃತ ಎಫ್‌ಪಿಒ (ರೈತ ಉತ್ಪಾದಕ ಸಂಘ)ದ ಯೋಜನೆಯಡಿ 100 ಎಫ್‌ಪಿಒಗಳಿಗೆ ಅನುಮೋದನೆ ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 1,165 ಎಫ್‌ಪಿಒಗಳಿದ್ದು, ಇದರೊಂದಿಗೆ ಈ ವರ್ಷ 100 ಸಂಘಗಳನ್ನು ಹೊಸದಾಗಿ ಸ್ಥಾಪನೆ ಮಾಡಲಾಗುವುದು ಎಂದು ಸಚಿವ ಬಿ.ಸಿ. ಪಾಟೀಲ್‌ ಮಾಹಿತಿ ನೀಡಿದರು.