News

ಭೂ ನಕ್ಷೆಗೆ ಕಂದಾಯ ಇಲಾಖೆ ಹೊಸ ತಂತ್ರ..ಶೀಘ್ರದಲ್ಲೆ ಶುರುವಾಗಲಿದೆ ಹೊಸ ಸೇವೆ

23 April, 2022 11:15 AM IST By: Maltesh
ಸಾಂದರ್ಭಿಕ ಚಿತ್ರ

ರಾಜ್ಯದ ನಾಗಕರೀಕರು ತಮ್ಮ ಸ್ವಂತ ಖಾಸಗಿ ಜಮೀನಿನ ನಕ್ಷೆಯನ್ನು ಸ್ವಾಲಂಬಿ ಆಪ್ ಮೂಲಕ ಸ್ವಯಂ ಸರ್ವೆ ಮಾಡಿ, ಸಿದ್ಧಪಡಿಸಿಕೊಳ್ಳುವಂತ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದೆ. ಈ ಮೂಲಕ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ನಾಗರೀಕರು ತಮ್ಮ ಖಾಸಗೀ ಜಮೀನಿನ, ಮಂಜೂರಾಗಿ ದುರಸ್ತಾಗಿರುವ ಜಮೀನಿನ ಮಾಲೀಕತ್ವದ ಪಹಣಿ ಹೊಂದಿರುವ ಜಮೀನಿನಲ್ಲಿ 11ಇ, ಪೋಡಿ, ಭೂ ಪರಿವರ್ತನೆ ಪೂರ್ವ ಮತ್ತು ವಿಭಾಗ ಸರ್ಕಾರವು ಜಾರಿಗೊಳಿಸಿದೆ. ಮಾಡಿಕೊಳ್ಳಲು ಸ್ವಾಲಂಬಿ ಆಪ್ ಮೂಲಕ ಸ್ವಯಂ ಸರ್ವೆ ಮಾಡಿ ಸ್ವಂತ ನಕ್ಷೆ ಸಿದ್ಧಪಡಿಸಿಕೊಳ್ಳುವಿಕೆ ವ್ಯವಸ್ಥೆಯನ್ನು ಇನ್ನೂ ಈಗ ಸರ್ಕಾರಿ ಭೂಮಾಪಕರು ಅಥವಾ ಪರವಾನಗಿ ಭೂಮಾಪಕರುಗಳಿಂದ ಸಿದ್ಧಪಡಿಸಲಾಗುತ್ತಿತ್ತು. ಆರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಅಳತೆಗಾಗಿ ವಿವಿಧ ಹಂತಗಳಲ್ಲಿ ಬಾಕಿ ಇರುತ್ತವೆ. ಹೀಗಾಗಿ ನಾಗರೀಕರು ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಸಿಕೊಳ್ಳಲು ಅಗತ್ಯವಿರುವ ನಕ್ಷೆಗಾಗಿ ಹಲವಾರು ತಿಂಗಳುಗಳು ಮತ್ತು ಕೆಲವೊಮ್ಮೆ ವರ್ಷದವರೆಗೆ ಕಾಯಬೇಕಾಗುತ್ತದೆ.

ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ! Kisan Credit Card ನ ಮೂಲಕ ದೊರೆಯಲಿದೆ ಈ ಸೌಲಭ್ಯ

ನಾಗರೀಕರು ಇತರರ ಜಮೀನಿನ ಹಕ್ಕುಗಳಲ್ಲಿ ಮತ್ತು ಕಾನೂನಿನ ಒಟ್ಟಾರೆ ಅಗತ್ಯತೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ನಾಗರೀಕರು ತಮ್ಮ ಜಮೀನಿನಲ್ಲಿ ಯಾವುದೇ ರೀತಿಯ ವ್ಯವಹಾರ ಮಾಡಲು ಸ್ವತಂತ್ರನಾಗಿರುತ್ತಾನೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಕಾರ್ಯವಾಗಿದೆ.
ಈ ಹಿನ್ನಲೆಯಲ್ಲಿ ನಾಗರೀಕರು ತಮ್ಮ ಖಾಸಗಿ, ಮಂಜೂರಾಗಿ ದುರಸ್ತಾಗಿರುವ ಜಮೀನಿನ ಮಾಲೀಕತ್ವದ ಪಹಣಿ ಹೊಂದಿರುವ ಜಮೀನಿನಲ್ಲಿ 11ಇ, ಪೋಡಿ, ಭೂ ಪರಿವರ್ತನೆ ಪೂರ್ವ ಮತ್ತು ವಿಭಾಗ ಮಾಡಿಕೊಳ್ಳಲು ನಾಗರೀಕರು ಸ್ವಾಲಂಬಿ ಆಪ್ ಮೂಲಕ ಸ್ವಯಂ ಸರ್ವೆ ಮಾಡಿ, ಸ್ವಂತ ನಕ್ಷೆ ಸಿದ್ಧಪಡಿಸಿಕೊಳ್ಳುವಿಕೆ ವ್ಯವಸ್ಥೆಯನ್ನು ಜಾರಿಗೊಳಿಸಲು, ತೀರ್ಮಾನಿಸಿ, ಆದೇಶಿಸಿದೆ ಎಂದಿದ್ದಾರೆ.

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

Good News.. ಡ್ರೋನ್ ಬಳಕೆಗಾಗಿ 477 ಕೀಟನಾಶಕಗಳಿಗೆ ಗ್ರೀನ್ ಸಿಗ್ನಲ್..

ಸ್ವಾವಲಂಬಿ ಆ್ಯಪ್ ದಿಂದಾಗುವ ಉಪಯೋಗ
ರೈತರು ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ನೋಂದಣಿಗೆ ಸ್ಕೆಚ್ ಸಿದ್ದಪಡಿಸಬಹುದು.ಜಮೀನಿನಲ್ಲಿ ಪೋಡಿ ಮಾಡಿಕೊಡುವ ಬಗ್ಗೆ ಸ್ಕೆಚ್ ತಯಾರಿಸಬಹುದು. ಭೂ ಪರಿವರ್ತನಾ ಪೂರ್ವ ಸ್ಕೆಚ್ ಕೃಷಿ ಜಮೀನಿನ ಒಂದು ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಸ್ಕೆಚ್ ಮಾಡಬಹುದು.

ಮೀನುಗಾರರ ಆದಾಯ ಹೆಚ್ಚಿಸಲು Pm ಮತ್ಸ್ಯ ಸಂಪದ ಯೋಜನೆ! ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ!

ಕಡಿಮೆ ವೆಚ್ಚ ಹೆಚ್ಚು ಇಳುವರಿ; ಕ್ಯಾಸ್ಟರ್ ಬೆಳೆದು ಲಾಭ ಪಡೆಯಿರಿ!

ಸಮಯ ಉಳಿತಾಯ
ಸ್ವಾವಲಂಬಿ ಆ್ಯಪ್ ದಿಂದ ಈಗ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ.ಹಿಂದೆ ಆಸ್ತಿಯನ್ನು ಹಿಸ್ಸಾದಲ್ಲಿ ಭಾಗ ಮಾಡಲು ಸರ್ವೆ ನಡೆಸಿ, ಸ್ಕೆಚ್ ಮಾಡಿ, ನೋಂದಣಿ ಮಾಡಿ ಪಹಣಿ ಪಡೆಯಲು ಕನಿಷ್ಠ ಆರು ತಿಂಗಳುಗಳಿಂದ ಒಂದು ವರ್ಷ ಬೇಕಾಗುತ್ತಿತ್ತು. ಈಗ ಕಡಿಮೆ ಸಮಯದಲ್ಲಿ ಈ ಕೆಲಸವಾಗುತ್ತದೆ.