News

Delhi Air Pollution ನಮ್ಮನ್ನಷ್ಟೇ ದೂರಬೇಡಿ, ಪರಿಹಾರ ಹುಡುಕಿ: ಕ್ರೇಜಿವಾಲ್‌!

04 November, 2022 2:57 PM IST By: Hitesh
Delhi Air Pollution Don't just blame us, find a solution: arvind kejriwal!

Delhi Air Pollution ಪಂಜಾಬ್‌ನಲ್ಲಿ ರೈತರು ಕಳೆ ಸುಡುತ್ತಿರುವ ಪರಿಣಾಮ ಇದೀಗ ದೆಹಲಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ.

Delhi Air Pollution: ಪಂಜಾಬ್‌ ಕಳೆ ಸುಡುವಿಕೆ ದೆಹಲಿ ವಾಯು ಮಾಲಿನ್ಯ ತೀವ್ರ ಏರಿಕೆ! ಶಾಲೆ ಬಂದ್‌, ಮನೆಯಿಂದ ಕೆಲಸ ಮಾಡಲು ಸೂಚನೆ..

ದೆಹಲಿ ಮತ್ತು ಪಂಜಾಬ್‌ ಎರಡೂ ರಾಜ್ಯಗಳಲ್ಲಿಯೂ ಇದೀಗ ಆಮ್‌ ಆದ್ಮಿ ಪಾರ್ಟಿಯೇ ಅಧಿಕಾರದಲ್ಲಿ ಇದೆ.

ಎರಡೂ ರಾಜ್ಯದಲ್ಲಿ ಆಮ್‌ ಆದ್ಮಿ ಪಾರ್ಟಿಯೇ ಅಧಿಕಾರದಲ್ಲಿ ಇದ್ದರೂ ಸಮಸ್ಯೆ ಪರಿಹಾರವಾಗದೆ ಇರುವುದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ!

ದಿಲ್ಲಿ ಹಾಗೂ ಎನ್‌ಸಿಆರ್‌ ಭಾಗದಲ್ಲಿ ವಾಯುಮಾಲಿನ್ಯ ಮಟ್ಟ ಮತ್ತಷ್ಟು ಅಪಾಯಕಾರಿಯಾಗುತ್ತಿದೆ.

ಉತ್ತರ ಭಾರತದ ಹಲವು ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣಮಿತಿ ಮೀರಿ ಹೆಚ್ಚಳವಾಗಿದೆ. ಇದೀಗ ಒಬ್ಬರನ್ನೊಬ್ಬರು ದ್ವೇಷಿಸುವುದಕ್ಕಿಂತ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

ಇದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್‌ ಮಾಡಿದ್ದಾರೆ.

ಗುಜರಾತ್‌ ಚುನಾವಣೆಗೆ ದಿನಾಂಕ ಫಿಕ್ಸ್‌: ತ್ರಿಕೋನ ಸ್ಪರ್ಧೆ, ಜಿದ್ದಾಜಿದ್ದಿ!

ವಾಯುಮಾಲಿನ್ಯ ಉತ್ತರ ಭಾರತದ ಸಮಸ್ಯೆ ಮಾತ್ರವಲ್ಲ. ಎಎಪಿ, ದಿಲ್ಲಿ ಸರ್ಕಾರ ಅಥವಾ ಪಂಜಾಬ್ ಸರ್ಕಾರ ಮಾತ್ರ ಇದಕ್ಕೆ ಹೊಣೆಗಾರರಲ್ಲ.

ಇದು ದೋಷಾರೋಪಣೆ ಮಾಡುವ ಸಮಯವಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಈ ವಿಚಾರವಾಗಿ ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಜತೆ ನಡೆಸಿದ ಜಂಟಿಗೋಷ್ಠಿ ನಡೆಸಿದ್ದಾರೆ.

ಇದನ್ನೂ ಓದಿರಿ: ಇನ್ಮುಂದೆ ನಿತ್ಯ ಶಾಲೆಯಲ್ಲಿ ಧ್ಯಾನ: ಸಚಿವ ಬಿ.ಸಿ ನಾಗೇಶ್‌ ಆದೇಶ!

Delhi Air Pollution

“See pollution in North Indian towns. Its not just Punjab and Del. Entire North India suffering from severe pollution. Lets stop blame game. Lets find solutions as a country Its our first yr in Punjab. Punjab govt tried its best in short time. By next yr, we shud see good resultsʼʼ

ಪಂಜಾಬ್‌ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಶಕ್ತಿಮೀರಿ ಶ್ರಮಿಸುತ್ತಿದೆ. ಪಂಜಾಬ್‌ ಸರ್ಕಾರ ರಚನೆ ಆಗಿ ಹೆಚ್ಚು ಸಮಯವಾಗಿಲ್ಲ.

ಆಗಿದ್ದರೂ ಪಂಜಾಬ್‌ ಸರ್ಕಾರವು ಶಕ್ತಿ ಮೀರಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮವನ್ನು ಕೈಗೊಳ್ಳಲಾಗುವುದು.    

ಮುಂದಿನ ವರ್ಷದ ವೇಳೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಕಳೆಗೆ ಬೆಂಕಿ

ರಾಜಕೀಯ ಕೆಸರೆರಚಾಟ

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವುದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಈ ಹಿಂದೆ ಪಂಜಾಬ್‌ನಲ್ಲಿ ಅಧಿಕಾರ ಕೊಡಿ ನಾವು ಈ ಸಮಸ್ಯೆಯನ್ನು ಪರಿಹಾರ ಮಾಡಿ ತೋರಿಸುತ್ತೇವೆ ಎಂದು ಪಂಜಾಬ್‌ ಚುನಾವಣೆ ಸಂದರ್ಭದಲ್ಲಿ ಕ್ರೇಜಿವಾಲ್‌ ಅವರು ಹೇಳಿದ್ದರು.

ಕಳೆದ ಬಾರಿ ಕಳೆಸುಡುವ ಸಮಸ್ಯೆ ಉದ್ಭವಿಸಿದ್ದ ಸಂದರ್ಭದಲ್ಲಿ ಪಂಜಾಬ್‌ ಸರ್ಕಾರವನ್ನು ದೆಹಲಿ ಸಿಎಂ ಅವರು ಟೀಕಿಸಿದ್ದರು.

ಇದೀಗ ಹಳೆಯ ವಿಡಿಯೋಗಳು ವೈರಲ್‌ ಆಗಿವೆ. ಅಲ್ಲದೇ ವಿರೋಧ ಪಕ್ಷಗಳೂ ಈ ವಿಷಯವಾಗಿ ಟೀಕೆ ಮುಂದುವರಿಸಿವೆ. 

ಹಲವು ಅಚ್ಚರಿಗಳಿಗೆ ಸಾಕ್ಷಿಯಾದ GKVK ಕೃಷಿ ಮೇಳ: ವಿಶೇಷತೆಗಳೇನು ಗೊತ್ತೆ?